ಬೆಂಗಳೂರು : ಖಾಯಂ ಸಹಾಯಕ ಪ್ರಧ್ಯಾಪಕರ ವಿಚಾರಕ್ಕೆ ಸಂಬಂಧ ಪಟ್ಟಂತೆ ಆಕಾಕ್ಷಿಂತ ಅಭ್ಯರ್ಥಿಗಳ ಬೇಡಿಕೆ ದಿನೇ ದಿನ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಇದೀಗ ಉನ್ನತ ಶಿಕ್ಷಣ ಇಲಾಖೆಗೆ ಖಾಯಂ ಸಹಾಯಕ ಪ್ರಾಧ್ಯಾಪಕರ ಅವಶ್ಯಕತೆಯಿದೆ ಎಂಬುವುದನ್ನ ಸರ್ಕಾರಕ್ಕೆ ಮನದಟ್ಟು ಮಾಡಲು ಸಾಹಾಯಕ ಪ್ರಾಧ್ಯಕರು ಮುಂದಾಗಿದ್ದಾರೆ. ಈ ಹಿಂದೆ ʼʼಆದಷ್ಟು ತ್ವರಿತವಾಗಿ 2021ರಲ್ಲಿ ಆರಂಭಗೊಂಡ 1242ರ ನೇಮಕಾತಿಯನ್ನುಪೂರ್ಣಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಈ ಹಿಂದೆ ಹೇಳಿದ್ದರು.
ಇನ್ನು ಇಂದು ಕೂಡ ಸಚಿವರ ನಿವಾಸದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಬಳಗವು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಮನವಿಯನ್ನ ನೀಡಿದ್ದಾರೆ.
ಈ ಅಭ್ಯರ್ಥಿಗಳ ಬಳಗವು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯೆಗೆ ಸಂಬಂಧಿಸಿದಂತೆ ಇಟ್ಟಿರುವ ಬೇಡಿಕೆಗಳ ಕುರಿತು ಮಾತನಾಡಿದ ಸಚಿವರು, ʼʼತಮಗೆಲ್ಲರಿಗೂ ಕೆಲವೇ ದಿನಗಳಲ್ಲಿ ನೇಮಕಾತಿ ಆದೇಶವನ್ನು ನೀಡುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ, ನ್ಯಾಯಾಲಯ ತೀರ್ಪು ಬರುತ್ತಿದ್ದಂತೆ ಎಲ್ಲಾ ಪ್ರಕ್ರಿಯೆಯೆಗಳನ್ನು ಏಕಕಾಲದಲ್ಲಿ ಆರಂಭಿಸಲಾಗುವುದುʼʼ ಎಂಬ ಭರವಸೆಯನ್ನ ನೀಡಿದ್ದಾರೆ.
ಬಳಗವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ-2021ಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಪೊಲೀಸ್ ಇಲಾಖೆಯ ತನಿಖಾ ವರದಿಯನ್ನು ಪರಿಶೀಲಿಸಲು ಪ್ರತ್ಯೇಕ ತ್ರಿಸದಸ್ಯ ಸಮಿತಿ ರಚಿಸಿ ಆದೇಶಿಸಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಬಳದ ನಾಗಲಕ್ಷ್ಮೀ, ಜಯಶಂಕರ್, ರಮೇಶ, ಅಶೋಕ, ಮತ್ತೀತರರು ಉಪಸ್ಥಿತರಿದ್ದರು.
ಬಳಗವು ಸಚಿವರಿಗೆ ಸಲ್ಲಿಸಿದ ಬೇಡಿಕೆಗಳು:
ದಿನಾಂಕ: 01-02-2023ರ ಕೆಕೆ/ಎಚ್.ಕೆ. ಮೀಸಲಾತಿ ಹಂಚಿಕೆಯ ಸುತ್ತೋಲೆ ಸಂಬಂಧ ಗೌರವಾನ್ವಿತ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗುತ್ತಲೇ, ಮುಂದೆ ಯಾವುದೇ ಕಾನೂನಾತ್ಮಕ ತೊಡಕುಗಳು ಉಂಟಾಗದಂತೆ ಸರ್ಕಾರದ ಕಡೆಯಿಂದಲೇ ಗೌರವಾನ್ವಿತ ಉಚ್ಛನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಬೇಕೆಂದು ವಿನಂತಿಸಿದೆ.
ಗೌರವಾನ್ವಿತ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗುತ್ತಿದ್ದಂತೆ, (ತೀರ್ಪಿನ ಪ್ರತಿ ತಲುಪುವ ಮೊದಲು) ಅಂತಿಮ ಆಯ್ಕೆ ಪಟ್ಟಿಯ ಗೆಜೆಟ್ ಪ್ರಕ್ರಿಯೆ ಆರಂಭಿಸುವಂತೆ ಇಲಾಖೆಗೆ ಆದೇಶಿಸಬೇಕೆಂದು ಮನವಿ ಮಾಡಿದೆ.
ತ್ರಿಸದಸ್ಯ ಸಮಿತಿಯಿಂದ ವರದಿಯು ಸಲ್ಲಿಕೆಯಾಗುವಷ್ಟರಲ್ಲಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಬಾಕಿ ಉಳಿದಿರುವ ಗೆಜೆಟ್, ಪೊಲೀಸ್, ಮೆಡಿಕಲ್ ವೆರಿಫಿಕೇಶನ್, ನೈಜತಾ ಪ್ರಮಾಣ ಪತ್ರದಂತಹ ಪ್ರಕ್ರಿಯೆಗಳು ಪೂರ್ಣವಾಗುವಂತೆ ಮಾಡಬೇಕು. ವರದಿ ಸಲ್ಲಿಕೆಯಾದ ನಂತರವೇ ನೇಮಕಾತಿ ಆದೇಶವನ್ನು ಅಭ್ಯಂತರವಿಲ್ಲ ಎಂಬುವುದನ್ನ ಸ್ಪಷ್ಟ ಪಡಿಸಿದೆ.
ಇಲಾಖೆಯೇ ನೇಮಿಸಿದ ಪ್ರಾಧ್ಯಾಪಕರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಾಖಲಾತಿ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸಿದೆ. ಮತ್ತೊಮ್ಮೆ ವೆರಿಫಿಕೇಶ್ ನಿಂದ ಮತ್ತಷ್ಟು ನೇಮಕಾತಿ ವಿಳಂಬವಾಗುತ್ತದೆ. ಈಗಾಗಲೇ ಸಾಕಷ್ಟು ವಿಳಂಬವಾಗಿರುವ ಕಾರಣ, ಈ ಹಿಂದೆ 2017ನೇ ಬ್ಯಾಚ್ ರೀತಿಯಲ್ಲಿ ಅಂಕಪಟ್ಟಿಗಳನ್ನು ನೇರವಾಗಿ ದಾಖಲಾತಿಗಳ ನೈಜತೆ ಪರಿಶೀಲನೆಗೆ ಕಳುಹಿಸಿದಂತೆ, ಈಗಲೂ ಕ್ರಮವಹಿಸಬೇಕೆಂದು ಈ ಬಳಗ ವಿನಂತಿ ಮಾಡಿಕೊಂಡಿದೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಬಾಕಿ ಉಳಿದಿರುವ ಪೊಲೀಸ್, ಮೆಡಿಕಲ್ ವೆರಿಫಿಕೇಶನ್, ಸಿಂಧುತ್ವದಂತಹ ಎಲ್ಲಾ ಪ್ರಕ್ರಿಯೆಗಳನ್ನು ಏಕಕಾಲಕ್ಕೆ ನಡೆಸುವುದು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ಎರಡು ವರ್ಷಗಳಿಗಿಂತಲೂ ಹೆಚ್ಚು ವಿಳಂಬವಾಗುತ್ತಿರುವುದರಿಂದಾಗಿ ಅನೇಕ ಅಭ್ಯರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕೆಲವರು ಗೊಂದಲ, ಚಿಂತೆಯಲ್ಲೇ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದಿದ್ದಾರೆ. ಜಿಪಿಎಸ್‌ಟಿಆರ್ ಶಿಕ್ಷಕರ ನೇಮಕಾತಿಯ ವಿಳಂಬದಿಂದಾಗಿ ಕೆಲವು ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಂತೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಆ ಹಾದಿಯನ್ನು ಹಿಡಿಯದಂತೆ ನೇಮಕಾತಿಯನ್ನು ಇಂತಿಷ್ಟು ದಿನಗಳಲ್ಲಿ ಮುಗಿಸಿಕೊಡಲಾಗುವುದೆಂದು ಸರ್ಕಾರ ಸೂಚಿಸಬೇಕು ಎಂಬ ಬೇಡಿಕೆಯನ್ನ ಮುಂದಿಟ್ಟಿದ್ದಾರೆ.
ಒಟ್ಟಾರೆಯಾಗಿ ಇದೀಗ ಇದೀಗ ಸಹಾಯಕ ಪ್ರಾಧ್ಯಪಕರು ತಮ್ಮ ಬೇಡಿಕೆಯನ್ನ ಸರ್ಕಾರದ ಮುಂದಿಟ್ಟಿದ್ದು ಈ ಬೇಡಿಕೆಯ ಕುರಿತು ಸರ್ಕಾರ ಯಾವ ರೀತಿಯಾದ ಕ್ರಮವನ್ನ ತೆಗೆದುಕೊಳ್ಳಲಿದೆ ಅಂತ ಕಾದು ನೋಡಬೇಕಾಗಿದೆ.