ಪಣಜಿ: ದಕ್ಷಿಣ ಗೋವಾದ 43 ವರ್ಷದ ಮಹಿಳೆಯೊಬ್ಬರಿಗೆ ರಕ್ಷಾ ಬಂಧನ ಹಬ್ಬವು ವಿಶೇಷವಾಗಿತ್ತು, ಈ ವರ್ಷದ ಆರಂಭದಲ್ಲಿ ಆಕೆಯ ಕಿರಿಯ ಸಹೋದರ ತನ್ನ ಒಂದು ಕಿಡ್ನಿಯನ್ನು ಆಕೆಗೆ ದಾನ ಮಾಡುವ ಮೂಲಕ ಹೊಸ ಜೀವನಕ್ಕೆ ಉಡುಗೊರೆಯಾಗಿ ನೀಡಿದ್ದಾನೆ.ಪಾಲಿಸಿಸ್ಟಿಕ್ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಏಪ್ರಿಲ್‌ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತನ್ನ 35 ವರ್ಷದ ಸಹೋದರನಿಂದ ಮೂತ್ರಪಿಂಡವನ್ನು ಪಡೆದಿದ್ದಳು.
ಕುಟುಂಬದವರ ಕೋರಿಕೆಯ ಮೇರೆಗೆ ಸಹೋದರ-ಸಹೋದರಿ ಜೋಡಿಯ ಹೆಸರನ್ನು ಮುಚ್ಚಿಡಲಾಗಿದ್ದರೂ, ಅವರು ಅಂಗಾಂಗ ದಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ.”ನನ್ನ ಹೆಂಡತಿ ತನ್ನ ಸಹೋದರನಿಗೆ ರಾಖಿ ಕಟ್ಟಿದಾಗ ಭಾವುಕಳಾದಳು. ಬಾಲ್ಯದಿಂದಲೂ ಅವರು ಆದರ್ಶವಾದ ಒಡಹುಟ್ಟಿದವರು” ಎಂದು ಮಹಿಳೆಯ ಪತಿ ಹೇಳಿದರು. ಮಹಿಳೆ ಪಾಲಿಸಿಸ್ಟಿಕ್ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಖಾಯಿಲೆ ಅಂತಿಮ ಹಂತದಲ್ಲಿದ್ದು, ತುರ್ತು ಕಸಿ ಮಾಡಬೇಕಾಗಿದೆ ಎಂದು ಖಾಸಗಿ ಆಸ್ಪತ್ರೆಯ ನೆಫ್ರಾಲಜಿಸ್ಟ್ ತಿಳಿಸಿದ್ದರು.
ಮದುವೆಯಾದ ರೋಗಿಯ ಕಿರಿಯ ಸಹೋದರ ತನ್ನ ಕಿಡ್ನಿಯನ್ನು ದಾನ ಮಾಡಲು ಸಿದ್ಧನಾಗಿದ್ದನು.ಮೊದಲಿಗೆ ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲಾಯಿತು ಮತ್ತು ಅಗತ್ಯ ಅನುಮತಿಗಳ ನಂತರ ಅಂಗವನ್ನು ಲ್ಯಾಪರೊಸ್ಕೋಪಿಕ್ ಮೂತ್ರಪಿಂಡ ದಾನ ವಿಧಾನದ ಮೂಲಕ ದಾನ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.