ತಿರುವನಂತಪುರಂ:ರಸ್ತೆಯಲ್ಲಿ ಯಾವುದೇ ಆಂಬ್ಯುಲೆನ್ಸ್ ( Ambulance ) , ಸೈರನ್ ಹಾಕ್ಕೊಂಡು ವೇಗವಾಗಿ ಬರುತ್ತಿದ್ದರೆ ನಾವು ಮಾಡಬೇಕಾದ ಮೊದಲ ಕೆಲಸ ಏನೆಂದರೆ ಅದಕ್ಕೆ ದಾರಿ ಬಿಡುವುದು. ಇದು ಪ್ರತಿಯೊಬ್ಬರ ಕರ್ತವ್ಯ ಕೂಡ ಹೌದು.ಒಬ್ಬರ ಪ್ರಾಣ ಉಳಿಯುತ್ತದೆ ಅಂದರೆ ಅದು ಎಷ್ಟೇ ಮುಖ್ಯವಾದ ಕೆಲಸವೇ ಇರಲಿ, ಅದನ್ನು ಬಿದಿಗಿಟ್ಟು ದಾರಿ ಮಾಡಿಕೊಡುವುದೇ ನಿಜವಾದ ಮಾನವೀಯತೆ.
ಆದರೆ, ಮಾನವೀಯತೆಯನ್ನು ಮರೆತು, ಆಂಬ್ಯುಲೆನ್ಸ್ ಹೊಗಲು ದಾರಿ ಮಾಡಿಕೊಡದವರಿಗೆ ಏನು ಮಾಡಬೇಕು? ನಿಜವಾಗಿಯೂ ಅಂಥವರಿಗೆ ಶಿಕ್ಷೆ ನೀಡಲೇಬೇಕು. ಈ ನಿಟ್ಟಿನಲ್ಲಿ ಕೇರಳ ಪೊಲೀಸರು ತೆಗೆದುಕೊಡಿರುವ ಕ್ರಮ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ರೋಗಿಯನ್ನು ಆಂಬ್ಯಲೆನ್ಸ್ ಮೂಲಕ ಸಾಗಿಸುವಾಗ ಚಾಲಕ ಎಷ್ಟೇ ಹಾರ್ನ್ ಮಾಡಿದರೂ ದಾರಿ ಬಿಟ್ಟು ಕೊಡದ ಕಾರು ಮಾಲೀಕನಿಗೆ ಕೇರಳ ಪೊಲೀಸರು ಬರೋಬ್ಬರಿ ಎರಡೂವರೆ ಲಕ್ಷ ರೂ. ದಂಡ ವಿಧಿಸಿದ್ದಾರೆ.
A car owner in #Kerala has been fined ₹2.5 lakh, and their license has been canceled for failing to make way for an ambulance. 🚑🚨 #JusticeServed #RoadSafety pic.twitter.com/WehLiyUwNn
— MDApp (@MDAppMDApp) November 17, 2024
ಆಂಬ್ಯುಲೆನ್ಸ್ ಮುಂಭಾಗದಲ್ಲಿ ಕುಳಿತಿದ್ದ ವೈದ್ಯಕೀಯ ಸಿಬ್ಬಂದಿ ವಿಡಿಯೋ ರೆಕಾರ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ವೈರಲ್ ಆಗಿ, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇರಳ ಪೊಲೀಸರು ಕಾರಿನ ಮಾಲೀಕನ ವಿವರವನ್ನು ಪಡೆದು ಮನೆಗೆ ತೆರಳಿ ದಂಡ ವಿಧಿಸಿದ್ದಾರೆ.
ದಂಡವನ್ನು ವಿಧಿಸಿದ್ದು ಮಾತ್ರವಲ್ಲದೆ, ಕಾರು ಮಾಲೀಕನ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದೆ. ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಆಟವಾಡಿಸುವ ಕೆಲ ಪುಂಡರಿಗೆ ಈ ಘಟನೆ ಒಂದು ಪಾಠವಾಗಿದೆ.