ಮೈಸೂರಲ್ಲಿ ದಸರಾ ಆನೆಗಳಾದ ಧನಂಜಯ ಹಾಗೂ ಕಂಜನ್ ಮಧ್ಯೆ ಗಲಾಟೆ ನಡೆದಿದೆ. ಅರಮನೆ ಆವರಣದಿಂದ ಕಂಜನ್ ಆನೆಯನ್ನು ಧನಂಜಯ ಅಟ್ಟಾಡಿಸಿಕೊಂಡು ಓಡಿಸಿದ್ದಾನೆ. ಈ ವೇಳೆ ಕಂಜನ್ ಆನೆ ಅರಮನೆ ಆವರಣ ಬಿಟ್ಟು ಹೊರಕ್ಕೆ ಓಡಿಬಂದು ಪ್ರಾಣ ಉಳಿಸಿಕೊಂಡಿದೆ. ಅಷ್ಟರಲ್ಲಿ ಮಾವುತರು ಆನೆಗಳನ್ನ ನಿಯಂತ್ರಣ ಮಾಡಿದ್ದಾರೆ..

ಅರಮನೆಯ ಜಯ ಮಾರ್ತಾಂಡ ಮುಖ್ಯ ದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಹೊರಬಂದಿವೆ ಆನೆಗಳು. ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ನುಗ್ಗಿದೆ. ಏಕಾಏಕಿ ಆನೆಗಳನ್ನ ನೋಡಿದ ಜನ ಗಾಬರಿಯಿಂದ ಓಡಿದ್ದಾರೆ. ಅಷ್ಟರಲ್ಲಿ ಧನಂಜಯ ಆನೆಯ ಮಾವುತ ಸಮಯ ಪ್ರಜ್ಞೆ ಮೆರೆದಿದ್ದು, ಆನೆ ನಿಯಂತ್ರಿಸಿದ್ದಾನೆ. ಆ ಬಳಿಕ 2 ಆನೆಗಳನ್ನು ಕೂಡಲೇ ಆರಮನೆಯೊಳಗೆ ಕರೆದುಕೊಂಡಯ ಹೋಗಲಾಗಿದೆ.
ನಿನ್ನೆ ರಾತ್ರಿ ಗಲಾಟೆ ಮಾಡಿಕೊಂಡಿದ್ದ ಧನಂಜಯ ಹಾಗೂ ಕಂಜನ್ ಆನೆ ಇಂದು ಬೆಳಗ್ಗೆ ಶಾಂತವಾಗಿವೆ. ಶಾಂತವಾಗಿ ತಾಲೀಮಿನಲ್ಲಿ ಭಾಗಿಯಾಗಿವೆ.. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ನಡೆದ ತಾಲೀಮಿನಲ್ಲಿ ಕಂಜನ್ ಆನೆ ಹಾಗೂ ಧನಂಜಯ್ ಆನೆಗಳು ಭಾಗಿಯಾಗಿವೆ. ಕಂಜನ್ ಆನೆಯನ್ನು ಅಟ್ಟಾಡಿಸಿದ ಧನಂಜಯ ಆನೆ ಕೂಡ ಸೈಲೆಂಟ್ ಆಗಿ ದಸರಾ ತಾಲೀಮಿನಲ್ಲಿ ಭಾಗಿಯಾಗಿದ್ದವು.

ಆನೆಗಳ ಗಲಾಟೆ ಬಗ್ಗೆ DCF ಪ್ರಭು ಗೌಡ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ನಿನ್ನೆ ರಾತ್ರಿ ಊಟ ಕೊಡುವಾಗ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಜಗಳ ಆಗಿದೆ.. ಯಾರು ಆತಂಕ ಪಡುವ ಅಗತ್ಯ ಇಲ್ಲ.. ಪ್ರತಿ ಭಾರಿ ಆನೆಗಳಿಗೆ ಊಟ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿ ಇರುತ್ತವೆ.. ನಿನ್ನೆ ರಾತ್ರಿ ಊಟ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿ ಇಲ್ಲದ ಕಾರಣ ಧನಂಜಯ ಆನೆ ಕಂಜನ್ ಮೇಲೆ ಜಗಳಕ್ಕೆ ಬಿದ್ದು ಓಡಿಸಿಕೊಂಡು ಹೋಗಿದ್ದಾನೆ. ಈ ವೇಳೆ ಮಾವುತರು ಆನೆಗಳನ್ನ ನಿಯಂತ್ರಣಕ್ಕೆ ತಂದಿದ್ದಾರೆ ಎಂದಿದ್ದಾರೆ

ಮಾವುತರು ಮತ್ತು ಕಾವಾಡಿಗರಿಗೆ ಪ್ರತಿಬಾರಿಯಂತೆ ಈ ಬಾರಿಯೂ ಜಿಲ್ಲಾಡಳಿತದಿಂದ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಮಾವುತ , ಕಾವಾಡಿಗರಿಗೆ ಯತೀಂದ್ರ ಸಿದ್ದರಾಮಯ್ಯ , ತನ್ವೀರ್ ಸೇಠ್, ಜಿ.ಟಿ.ದೇವೇಗೌಡ ಉಪಹಾರ ಬಡಿಸಿದ್ರು. ಈ ವೇಳೆ ಮಾತನಾಡಿದ ಸಚಿವ ಮಹದೇವಪ್ಪ, ಇದು ಸಂಪ್ರದಾಯ, ಅದನ್ನ ಮಾಡಿದ್ದೇವೆ.. ಈಗಾಗಲೇ ದಸರಾ ತಯಾರಿ ನಡೆಯುತ್ತಿದೆ.. 19 ಉಪ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದೆ. ಈ ಬಾರಿ ಜಂಬೂಸವಾರಿಯಲ್ಲಿ ಸ್ವಲ್ಪ ಬದಲಾವಣೆ ಇದೆ ಎಂದು ಹೇಳಿದ್ದಾರೆ.