ಚಲಿಸುತ್ತಿದ್ದ ಖಾಸಗಿ ಬಸ್ ಕಂಡೆಕ್ಟರ್ ಒಬ್ಬರು ಬಿದ್ದು ಗಂಭೀರ ಗಾಯಗೊಂಡ ಹಿನ್ನೆಲೆ ಮೃತಪಟ್ಟಿರುವ ಘಟನೆ ಮಂಗಳೂರು ಜಿಲ್ಲೆಯ ನಂತೂರು ಎಂಬಲ್ಲಿ ಬುಧವಾರ (ಆಗಸ್ಟ್ 30) ವರದಿಯಾಗಿದೆ
ಮೃತರನ್ನು ಖಾಸಗಿ ಬಸ್ ಕಾಟಿಪಳ್ಳ – ಮಂಗಳಾದೇವಿಗೆ ಸಂಚರಿಸುವ 15 ನಂಬರ್ನ ಅರಸು ಬಸ್ ನ ಕಂಡೆಕ್ಟರ್ ಎಂದು ತಿಳಿದು ಬಂದಿದೆ.
ಬಸ್ ಬೆಳಗ್ಗಿನ ವೇಳೆ ಕಾಟಿಪಳ್ಳದಿಂದ ನಂತೂರು ವೃತ್ತವಾಗಿ ಮಂಗಳಾದೇವಿಗೆ ಸಂಚರಿಸುತ್ತಿದ್ದ ವೇಳೆ ಫೂಟ್ ಬೋರ್ಡ್ ನಲ್ಲಿ ನಿಂತಿದ್ದ ಕಂಡೆಕ್ಟರ್ ಏಕಾಏಕಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿದ್ದ ಮಂಗಳೂರು ಸಂಚಾರ ಪೊಲೀಸ್ ಮತ್ತು ಸ್ಥಳೀಯರು ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆದರೂ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.