ಬಾಗಲಕೋಟೆ: ಸತ್ತಿದೆ ಎಂದು ಭಾವಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೆಮ್ಮುವ ಮೂಲಕ ಮಗು ಎಚ್ಚರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಜಿಲ್ಲೆಯ ಇಳಕಲ್ (Ilkal, Bagalkote) ನಗರದಲ್ಲಿ ಈ ಘಟನೆ ನಡೆದಿದೆ. ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ದಂಪತಿಯ 13 ತಿಂಗಳ ಮಗುವೇ ಈ ರೀತಿ ಪಡವಾ ಸದೃಶವಾಗಿ ಬದುಕಿದ ಮಗು. ಉಸಿರಾಟ ತೊಂದರೆ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ಕಳೆದ ನಾಲ್ಕೈದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕೋದು ಕಷ್ಟ ಎಂದು ಹೇಳಿದ್ದರು.
ಹೀಗಾಗಿ ಮರಳಿ ಮಗುವನ್ನು ಕರೆ ತರಲಾಗುತ್ತಿತ್ತು. ವಾಹನದಲ್ಲಿ ಮಗು ಕೂಡ ಪ್ರಜ್ಞೆ ತಪ್ಪಿತ್ತು. ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಭಾವಿಸಿ, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸಂಬಂಧಿಗಳಿಗೆ ಸಹ ಸುದ್ದಿ ಮುಟ್ಟಿಸಿದ್ದರು. ಆದರೆ, ಅಂತ್ಯಸಂಸ್ಕಾರದ ವೇಳೆ ಮಗು ಕೆಮ್ಮಿದೆ. ಇದನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಮಗುವಿಗೆ ಇಳಕಲ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.