ಹಸು ಕುಯ್ದ ಸ್ಥಳಕ್ಕೆ ಬಿಜೆಪಿ ನಾಯಕರ ನಿಯೋಗ ಭೇಟಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿಸಿ ಮೋಹನ್, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಿಂದ ಭೇಟಿ, ಗೋಪೂಜೆ ಮೂಲಕ ಸಂಕ್ರಾಂತಿ ಆಚರಿಸಿದ ಕಮಲ ನಾಯಕರು ಕಾಟನ್ ಪೇಟೆ ಯಲ್ಲಿ ಗೋವುಗಳ ರಕ್ಷಣೆ ಮಾಡುವಂತೆ ಪೂಜೆ ನೆರವೇರಿಕೆ ಚಾಮರಾಜಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ಗೋವನ್ನ ತಾಯಿಯ ಸಮಾನವಾಗಿ ಕಾಣುತ್ತೇವೆ.
ಅಂತಹ ಗೋವಿಗೆ ಯಾವ ಪರಿಸ್ಥಿತಿ ಆಗಿದೆ ಅಂಥಾ ನೋಡಿದ್ದೇವೆ, ಗೋಪಾಲಕ ಕರ್ಣನ ಕುಟುಂಬಕ್ಕೆ ಧೈರ್ಯ ಹೇಳಿದೇವೆ, ಇದೊಂದು ಅಕ್ಷಮ್ಯ ಅಪರಾಧ ಸಿದ್ದರಾಮಯ್ಯ ಸಿಎಂ ಆದಮೇಲೆ ಗೋರಕ್ಷಣೆ ಆಗ್ತಿಲ್ಲ ಇಂತಹ ಪರಿಸ್ಥಿತಿಗೆ ಈ ಸರ್ಕಾರವೇ ಕಾರಣ ಈಘಟನೆ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಒಳ್ಳೆಯದು ಆಗಲ್ಲ
ಇವರ ಪಾಪದ ಕೊಡ ತುಂಬಿರೋದ್ರಿಂದಲೇ ಈ ರೀತಿಯ ದುರ್ಘಟನೆ ಆಗಿದೆ.
ಯಾರೋ ಒಬ್ಬನನ್ನ ಹಿಡಿದು ಅವನೇ ಈ ಘಟನೆಗೆ ಕಾರಣ ಅಂತಿದಾರೆ. ಚಾಮರಾಜಪೇಟೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ಕಾರ್ಯಕರ್ತರು ನನಗೆ ಮಾಹಿತಿ ನೀಡಿದ್ದರು.. ಸ್ಥಳದಲ್ಲಿ ರಕ್ತವನ್ನೂ ನೋಡಿದೇನೆ.. ಕೆಚ್ಚಲು ಅಲ್ಲಾಡ್ತಿತ್ತು..ಅದನ್ನ ನೋಡಿದೇನೆ ಇದು ಒಬ್ಬ ಮಾಡಿರೋ ರೀತಿಕಾಣ್ತಿಲ್ಲ. ನನ್ನ 60 ವರ್ಷದ ಜೀವನದಲ್ಲಿ ಯಾವತ್ತೂ ಈ ರೀತಿಯ ಘಟನೆ ನೋಡಿರಲಿಲ್ಲ ಗೋವಿಗೆ ಪೂಜೆ ಮಾಡುವ ಹಬ್ಬ. ನಿನ್ನೆ ಕಾಂಗ್ರೆಸ್ ಮುಖಂಡರು ಕರ್ಣನಿಗೆ ಹೊಡೆಯೋಕೆ ಬಂದಿದಾರೆ. ಈ ದಾರಿಯಲ್ಲಿ ರಾಶಿ ರಾಶಿ ದನಗಳಿಗೆ ಏಟು ಮಾಡಿದಾರೆ.
ನಮ್ಮದು ಪುಣ್ಯಕೋಟಿಯ ನಾಡು..
ಜಿಹಾದಿಗಳು ಮಾಡಿರುವ ಘಟನೆ ಇದೆ. ಈಬಂಧನ ನೋಡಿದರೆ, ಪೊಲೀಸರು & ಸರ್ಕಾರದ ಮೇಲೆ ಅನುಮಾನ ಬರ್ತಿದೆ. ಆತ ಅರೆಸ್ಟ್ ಆದವನು ಇಲ್ಲೇ 10 ವರ್ಷದಿಂದ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡ್ತಿದ್ನಂತೆ. 500 ಕೋಟಿಗೂಹೆಚ್ಷು ಮೌಲ್ಯದ ಪಶು ಆಸ್ಪತ್ರೆ ವಕ್ಫ್‌ಗೆ ಕೊಟ್ಟಿದ್ರು. ಸಿದ್ದರಾಮಯ್ಯ ಅವರಿಗೆ ಖಾತೆ ಎಲ್ಲಾ ಮಾಡಿಕೊಟ್ಟಿದಾರೆ
ಇದರ ಹೋರಾಟದಲ್ಲಿ ಕರ್ಣ ಮುಂದಾಳತ್ವ ವಹಿಸಿದ್ದ ಹೀಗಾಗಿ ಈ ಘಟನೆ ಆಗಿದೆ. ಕರ್ಣನಿಗೆ ಆದ ಸ್ಥಿತಿ ಎಲ್ಲರಿಗೂ ಬರುತ್ತೆ ಅಂತಾ ಹೆದರಿಸುತ್ತಿದ್ದಾರೆ.
ಇಲ್ಲಿ ತಾಲಿಬಾನ್ ಸರ್ಕಾರ ಇದೆ.
ಈ ಕೃತ್ಯದ ವಿರುದ್ಧ ಹಿಂದೂ ಪರ ಸಂಘಟನೆಗಳು ಹೋರಾಟ ಮಾಡುತ್ತೇವೆ ಹಿಂದೂಗಳ ಮೇಲಿನ ಹಲ್ಲೆಯನ್ನ ಖಂಡಿಸುತ್ತೇವೆ. ಪಾಲಿಟಿಕ್ಸ್ ಮಾಡೋದು ಕಾಂಗ್ರೆಸ್ ಅವರ ಡಿಎನ್ ಎನಲ್ಲೇ ಬಂದಿದೆ. ಸಿದ್ದರಾಮಯ್ಯ ಅವರು ಹೇಳಿದಾರೆ. ಹಿಂದೂಗಳು ಎರಡು ಮಕ್ಕಳನ್ನ ಮಾಡಿ ಅಂತಾ ಹೇಳಿದಾರೆ ಎಂತಹ ಶುಭಾಶಿತ ಹೇಳಿದ್ದೀರಿ ಸಿದ್ದರಾಮಯ್ಯ ಅವರೇ. ಅವರಿಗೆ 10/.50 ಮಕ್ಕಳನ್ನ ಮಾಡೋಕೆ ಹೇಳ್ತಾರೆ. ಆರ್.ಅಶೋಕ್ ಹೇಳಿಕೆ ಕೃತಗಯವನ್ನ ಯಾರು ಮಾಡಿದಾರೆ ಅವರಿಗೆ ಶಿಕ್ಷೆ ಆಗಲಿ.
ಸರ್ಕಾರದ ಸಹಾಯ ಕರ್ಣನಿಗೆ ಬೇಡ.
ಎರಡುಹಸುಗಳು ಜೀವನ ಪೂರ್ತಿ ಹಾಲು ಕೊಡೋದಿಲ್ಲ. ಅವುಗಳನ್ನು ಸಾಕಬೇಕಿದೆ ಮೆಡಿಸಿನ್ ಸೇರಿ ಆರೈಕೆ ಮಾಡಬೇಕಿದೆ. ಹೀಗಾಗಿ ಅವರ ಸಹಾಯಕ್ಕಾಗಿ 1 ಲಕ್ಷ ರೂ. ಹಣ ನೀಡಿದೇವೆ ಪೊಲೀಸರು ಕಸ್ಟಡಿಗೆ ಕೇಳಬೇಕಿತ್ರು.. ಆದ್ರೆ ಕಸ್ಟಡಿಗೆ ಕೇಳಿಯೇ ಇಲ್ಲ. ವಿಚಾರಣೆ ಮಾಡೋದೇ ಬೇಡ್ವಾ?
ನೀವು ಔಟ್ ಗೋಯಿಂಗ್ ಸಿಎಂ.
ನಿನ್ನೆ ನೀವು ತ್ಯಾಗ ಮಾಡಬೇಕು ಅಂತಾ ಹೇಳಿದೀರಿ. ಹೋಗುವ ಮುನ್ನ ಗೋವುಗಳಿಗೆ ಅನ್ಯಾಯ ಮಾಡಬೇಡಿ. ನ್ಯಾಯ ಕೊಡಿಸಿಹೋಗಿ.ಹಸುವಿನ ಮಾಲೀಕ ಕರ್ಣ ಹೇಳಿಕೆ
ಬಿಜೆಪಿ ನಮಗೆ ಸಹಾಯ ಮಾಡಿದೆ. ನಮಗೆ ಹಸುವಿನ ಮೇಲೆ ದೌರ್ಜನ್ಯ ಎಸಗಿದ ನಿಜ ಆರೋಪಿ ಮೇಲೆ ಕ್ರಮವಾಗಬೇಕು. ಸರ್ಕಾರ ರಾಜಕೀಯ ಮಾಡಬಾರದು. ಹಸು ಪಾಲನೆಯಿಂದಲೇ ನಮ್ಮ ಕುಟುಂಬ ನಡೆಯಬೇಕು. ಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್ ಅವರಿಂದ ಸಹಾಯ ಬಂದರೂ ನಮಗೆ ಬೇಡ ಸರ್ಕಾರದ ಸಹಾಯದ ವಿಚಾರವನ್ನ ಖಡಾಖಂಡಿತವಾಗಿ ನಿರಾಕರಿಸಿದ ಹಸು ಮಾಲೀಕ