ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಕೊಟ್ಟ ಪೊಲೀಸರು. ಕನ್ನಡ ಮಾತಾಡು ಅಂದ ಕಂಡಕ್ಟರ್ ಮೇಲೆ ಪೋಕ್ಸೊ ಕೇಸ್ ದಾಖಲಿಸಿದ ಪೊಲೀಸರು, ಹಲ್ಲೆಗೊಳಗಾದ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಪೋಕ್ಸೊ ಕೇಸ್. ಮಾರಿಹಾಳ ಠಾಣೆಯಲ್ಲಿ ಎಫ್‌ಐಆರ್ ದಾಖಲು. ಬಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಅಂತಾ ಕೇಸ್ ದಾಖಲು.

ಯುವಕರನ್ನ ಕರೆಯಿಸಿ ಹಲ್ಲೆ ಮಾಡಿಸಿದ ಬಾಲಕಿಯಿಂದ ದೂರು ಪಡೆದುಕೊಂಡ ಪೊಲೀಸರು. ರಾತ್ರೋರಾತ್ರಿ ಪೋಕ್ಸೊ ಕೇಸ್ ದಾಖಲಿಸಿ ಎಡವಟ್ಟು ಮಾಡಿಕೊಂಡ್ರಾ ಪೊಲೀಸರು. ಕನ್ನಡಿಗರ ಮೇಲೆ ಅನ್ಯಾಯ ಆಗ್ತಿದ್ರೂ ಅವರ ಮೇಲೆ ಮತ್ತೆ ಕೇಸ್ ಕೂಡ ದಾಖಲಿಸಿದ ಪೊಲೀಸರು. ಬಾಲಕಿಯನ್ನ ಕೆಟ್ಟ ದೃಷ್ಟಿಯಿಂದ ನೋಡಿದ ಅಂಗಾ ದೂರು ದಾಖಲು. ಸರ್ಕಾರಿ ಬಸ್, ತುಂಬಿದ್ದ ಬಸ್ ನಲ್ಲಿ ಈ ರೀತಿ ಬಾಲಕಿಯನ್ನ ಕೆಟ್ಟ ದೃಷ್ಟಿಯಿಂದ ನೋಡಲು ಹೇಗೆ ಸಾಧ್ಯ.? ಪ್ರಕರಣದ ದಿಕ್ಕು ತಪ್ಪಿಸಲು ಕಂಡಕ್ಟರ್ ಮೇಲೆ ಕೇಸ್ ದಾಖಲಿಸಿದ್ರಾ ಪೊಲೀಸರು.?? ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿದೆ ಮಾರಿಹಾಳ ಪೊಲೀಸರ ನಡೆ…!!

ಘಟನೆ ಖಂಡಿಸಿ ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಪ್ರತಿಭಟನೆ. ಪಂಥಬಾಳೇಕುಂದ್ರಿ ಗ್ರಾಮದ ಬಳಿ ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ. ಇಂಗ್ಲಿಷ್ ಬ್ಯಾನರ್ ಗಳನ್ನ ಹರಿದು ಹಾಕಿ ಕನ್ನಡಪರ ಹೋರಾಟಗಾರರ ಅಕ್ರೋಶ. ಬೆಳಗಾವಿ ಬಾಗಲಕೋಟೆ ರಸ್ತೆ ತಡೆದು ಪ್ರತಿಭಟನೆ. ಎಂಇಎಸ್ ಪುಂಡರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ.

ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರ ಪುಂಡಾಟ, ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ಕರ್ನಾಟಕ ಬಸ್ ಗಳನ್ನ ಟಾರ್ಗೆಟ್, ಉದ್ಧವ ಠಾಕ್ರೆ ಬಣದ ಶಿವಸೇನೆ ಕಾರ್ಯಕರ್ತರಿಂದ ಕರ್ನಾಟಕ ಬಸಗೆ ಭಗ್ವಾ ಧ್ವಜ ಕಟ್ಟಿ ಪುಂಡಾಟಿಕೆ, ಕೊಲ್ಲಾಪುರದಿಂದ ಬೆಳಗಾವಿ ಬರುತ್ತಿದ್ದ ಬಸ್ ತಡೆದು ಗೂಂಡಾವರ್ತನೆ ಶಿವಸೇನೆ ಮುಖಂಡ ವಿಜಯ ದೇವಣೆ ನೇತೃತ್ವದಲ್ಲಿ ಕಾರ್ಯಕರ್ತರ ಗೂಂಡಾಗಿರಿ, ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಆತಂಕದ ವಾತಾವರಣ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹೇಳಿಕೆ. ಬಾಳೇಕುಂದ್ರಿ ಗ್ರಾಮದಲ್ಲಿ ಪ್ರಯಾಣಿಕ ಮತ್ತು ಕಂಡಕ್ಟರ್ ನಡುವೆ ಜಗಳ ಆಗಿದೆ. ಇದೇ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆಯಾಗಿದೆ. ಬಸ್ ಕಂಡಕ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇವೆ. ನಾಲ್ಕು ಜನ ಆರೋಪಿಗಳನ್ನ ಬಂಧಿಸಿದ್ದೇವೆ. ಮೂರು ತಂಡಗಳನ್ನ ರಚನೆ ಮಾಡಿ ಓಡಿ ಹೋದವರಿಗೆ ಶೋಧ. ಭಾಷಾ ವಿಚಾರಕ್ಕೆ ಗಲಾಟೆಯಾಗಿದೆ ಅನ್ನೋ ಮಾಹಿತಿ ಇದೆ.

ಘಟನೆಗೆ ಸಂಬಂಧಿಸಿದಂತೆ ಒಂದು ಕೌಂಟರ್ ಕೇಸ್ ಕೂಡ ದಾಖಲಾಗಿದೆ. ಬಸ್ ಕಂಡಕ್ಟರ್ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಅಂತಾ ಕೇಸ್. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತ್ಯಾಂಶ ಎನಿದೆ ಅನ್ನೋದನ್ನ ನಾವು ತನಿಖೆ ಮಾಡ್ತಿದ್ದೇವೆ. ಸೆಕ್ಷನ್ 12 ಪ್ರಕಾರ ಕೇಸ್ ಕೊಟ್ಟಿದ್ದಾರೆ. ತನಿಖೆಯಲ್ಲಿ ಸರಿಯಾದ ಮಾಹಿತಿ ಸಿಗುತ್ತೆ. ಈ ಸಮಯದಲ್ಲಿದ್ದ ಬಸ್ ನಲ್ಲಿ ಬೇರೆ ಪ್ರಯಾಣಿಕರ ಹೇಳಿಕೆ ಪಡೆಯುತ್ತೇವೆ. ಸುಳ್ಳು ಆರೋಪಗಳ ಕುರಿತು ಕೂಡ ತನಿಖೆ ಮಾಡುತ್ತೇವೆ. ನಾವು ಕೇಸ್ ತೆಗೆದುಕೊಳ್ಳದಿದ್ರೇ ಅವರು ಬೇರೆ ಬೇರೆ ಕಡೆ ಹೋಗ್ತಿದ್ರೂ. ಹೀಗಾಗಿ ನಾವು ಕೇಸ್ ಪಡೆದು ತನಿಖೆ ಮಾಡುತ್ತೇವೆ ಸತ್ಯಾಂಶ ಹೊರ ಬರುತ್ತೆ. ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಮೇಲೆ ಅಟ್ಯಾಕ್ ವಿಚಾರ. ಮಹಾರಾಷ್ಟ್ರ ಗಡಿ ಭಾಗದ ಎಸ್‌ಪಿಗಳ ಜೊತೆಗೆ ನಾನು ಮಾತಾಡಿದ್ದೇನೆ.

ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಮುಂದುವರೆದ ಪ್ರತಿಭಟನೆ.
ಬಾಗಲಕೋಟೆ ಬೆಳಗಾವಿ ರಸ್ತೆ ತಡೆದು ರಸ್ತೆ ಮೇಲೆ ಮಲಗಿ ಹೋರಾಟ. ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ಗ್ರಾಮದ ಬಳಿ ಹೋರಾಟ. ಎಂಇಎಸ್ ಪುಂಡರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ. ಎಂಇಎಸ್ ಪುಂಡರ ಅಣಕು ಶವ ಮಾಡಿ ಬೆಂಕಿ ಹಚ್ಚಿ ಆಕ್ರೋಶ. ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ ಪಡೆದು ಕರೆದುಕೊಂಡು ಹೋದ ಮಾರಿಹಾಳ ಠಾಣೆ ಪೊಲೀಸರು.