• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕ್ಯಾನ್ಸರ್​ ರೋಗಕ್ಕೆ ಹೆದರಿ ಪತ್ನಿ, ಮಕ್ಕಳಿಗೆ ವಿಷವುಣಿಸಿ ಕೊಂದ ಪಾಪಿ ತಂದೆ..!

ಪ್ರತಿಧ್ವನಿ by ಪ್ರತಿಧ್ವನಿ
March 2, 2023
in Top Story, ಕರ್ನಾಟಕ
0
ಕ್ಯಾನ್ಸರ್​ ರೋಗಕ್ಕೆ ಹೆದರಿ ಪತ್ನಿ, ಮಕ್ಕಳಿಗೆ ವಿಷವುಣಿಸಿ ಕೊಂದ ಪಾಪಿ ತಂದೆ..!
Share on WhatsAppShare on FacebookShare on Telegram

ಬೆಂಗಳೂರು :ಕ್ಯಾನ್ಸರ್​ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಇಲಿ ಹಾಗೂ ತಿಗಣಿ ಪಾಷಾಣವನ್ನು ಹಾಕಿ ಕೊಲೆ ಮಾಡಿದ ದಾರುಣ ಘಟನೆಯು ಬೆಂಗಳೂರಿನ ಕೋಣನಕುಂಟೆಯಲ್ಲಿ ಸಂಭವಿಸಿದೆ. ಪತಿಗೆ ಕ್ಯಾನ್ಸರ್​ ಕಾಯಿಲೆ ಇದೆ ಎಂದು ತಿಳಿದ ಬಳಿಕ ಪತ್ನಿಯೇ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು ಎನ್ನಲಾಗಿದೆ. ಕೊಲೆಯಾದ ದುರ್ದೈವಿಗಳನ್ನು ವಿಜಯ(28) , ನಿಶಾ(7) ಹಾಗೂ ದೀಕ್ಷಾ ಎಂದು ಗುರುತಿಸಲಾಗಿದೆ. ಕೋಣನಕುಂಟೆ ನಿವಾಸಿ ನಾಗೇಂದ್ರ ಎಂಬಾತ ಈ ಕೃತ್ಯ ಎಸಗಿದ್ದಾನೆ.

ADVERTISEMENT


ನಿನ್ನ ರಾತ್ರಿ ಕೆಲಸ ಮುಗಿಸಿ ಅಲ್ಲಿಯೇ ಪಕ್ಕದಲ್ಲಿದ್ದ ತವರು ಮನೆಗೆ ಆಗಮಿಸಿದ್ದ ವಿಜಯ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿಯ ಜೊತೆಯಲ್ಲಿಯೇ ಇದ್ದಳು ಎನ್ನಲಾಗಿದೆ. 8:30ರ ಸುಮಾರಿಗೆ ಮಕ್ಕಳೊಂದಿಗೆ ಮನೆಗೆ ತೆರಳಿದ್ದ ವಿಜಯ ಇಂದು ದುರಂತ ಅಂತ್ಯ ಕಂಡಿದ್ದಾರೆ. ಪತ್ನಿಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ ನಾಗೇಂದ್ರ ಈ ಕೃತ್ಯ ಎಸಗಿ ಬಳಿಕ ತಾನೂ ಚಾಕುವಿನಿಂದ ಕೈ ಕೊಯ್ದುಕೊಂಡಿದ್ದಾನೆ ಎನ್ನಲಾಗಿದೆ. ಬೆಳಗ್ಗೆ ಎಷ್ಟೊತ್ತಾದರೂ ಮಗಳು ಮನೆ ಬಾಗಿಲು ತೆಗೆಯದೇ ಇರೋದನ್ನು ಗಮನಿಸಿದ ವಿಜಯಾ ತಾಯಿ ಸಾಕವ್ವ ಸ್ಥಳೀಯರ ಸಹಾಯದಿಂದ ಮನೆ ಬಾಗಿಲು ಒಡೆದು ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ನಾಗೇಂದ್ರನನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡುತ್ತಾ ಮಾತನಾಡಿದ ತಾಯಿ ಸಾಕವ್ವ, ಆತ ಎಂದಿಗೂ ಹಣಕ್ಕಾಗಿ ನನ್ನ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದ. ನಾನೇ ಮೂರು ಲಕ್ಷ ರೂಪಾಯಿ ನೀಡಿ ಆ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಟ್ಟಿದ್ದೆ. ವಿಜಯಾ ಕೂಡ ಪತಿಯ ಚಿಕಿತ್ಸೆಗಾಗಿ 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಳು. 10 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ವಿಜಯಾ ಅದೇ ಹಣದಲ್ಲಿ ಇಡೀ ಸಂಸಾರವನ್ನು ನೋಡಿಕೊಳ್ಳುತ್ತಿದ್ದಳು. ನಿನ್ನೆ ಮೊಮ್ಮಕ್ಕಳು ನನ್ನೊಂದಿಗೆ ಇರುತ್ತೇನೆ ಎಂದು ಹಠ ಮಾಡಿದ್ದರು. ಆದರೆ ನಾನೇ ಅವರನ್ನು ಮನೆಗೆ ಕಳುಹಿಸಿಕೊಟ್ಟಿದ್ದೆ. ಈಗ ನೋಡಿದರೆ ಈ ರೀತಿ ಆಗಿದೆ ಎಂದು ಕಣ್ಣೀರಿಟ್ಟಿದ್ದಾರೆ .

Tags: Bangalorecancer patientKonanakuntemurder
Previous Post

ಪಂಚಮಸಾಲಿಗೆ 2ಎ ಮೀಸಲಾತಿ: ಮಾ.4ರಂದು ಬೆಂಗಳೂರು ವ್ಯಾಪ್ತಿಯ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆ

Next Post

ಕೋವಿಡ್ ಹೊಡೆತದಿಂದ ಚೇತರಿಕೆ- ಕೆಎಸ್‌’ಐಸಿ 31 ಕೋಟಿ ರೂ. ಲಾಭ ಗಳಿಕೆ: ಸಚಿವ ಡಾ.ನಾರಾಯಣಗೌಡ

Related Posts

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !
Top Story

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !

by ಪ್ರತಿಧ್ವನಿ
May 15, 2026
0

ಬೆಂಗಳೂರು : ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ...

Read moreDetails
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

May 15, 2026
ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

May 15, 2026
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಪಶ್ಚಿಮ ಏಷ್ಯಾ ಶಾಂತಿಗೆ ಭಾರತದ ಬೆಂಬಲ : ಮೋದಿ ಹೇಳಿಕೆಯಿಂದ ಹೊಸ ರಾಜತಾಂತ್ರಿಕ ಸಂದೇಶ

May 15, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
Next Post
ರೌಡಿಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್‌ : ಕೆ.ಸಿ.ನಾರಾಯಣ ಗೌಡ

ಕೋವಿಡ್ ಹೊಡೆತದಿಂದ ಚೇತರಿಕೆ- ಕೆಎಸ್‌’ಐಸಿ 31 ಕೋಟಿ ರೂ. ಲಾಭ ಗಳಿಕೆ: ಸಚಿವ ಡಾ.ನಾರಾಯಣಗೌಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada