ಬೆಂಗಳೂರು :ಮಾ.25: ನವಜಾತ ಶಿಶುವನ್ನ ಕದ್ದೊಯ್ದಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದ ದುರ್ಗಮ್ಮ ಬೀದಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಮಗುವಿಗೆ ಹಾಲುಣಿಸಿ ಮಲಗಿಸಿ ತಾಯಿ ಕೂಡ ಮಲಗಿದ್ದಳು,ಈ ವೇಳೆ ಅಪರಿಚಿತ ಮಹಿಳೆಯೊಬ್ಬರು ಮನೆಗೆ ನುಗ್ಗಿ ಮಗುವನ್ನು ಕದ್ದೊಯ್ದಿದ್ದಾಳೆ. ಫಾರ್ಹಿನ್ ಎಂಬಾಕೆಯ ಮಗು ಜೊತೆ ಮೊಬೈಕ್ ಕೂಡ ಕಳವು ಮಾಡಿದ್ದ ಅಪರಿಚಿತ ಮಹಿಳೆ, ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಸಿಕ್ಕಿಬಿದ್ದಿದ್ದಾಳೆ.
ಕಳ್ಳಿ ಸಿಕ್ಕಿದ್ದು ಹೇಗೆ..

ಮಾಗಡಿ ರಸ್ತೆಯ ರೈಲ್ವೆ ಕ್ವಾಟ್ರಸ್ ಬಳಿ ಅನುಮಾನಸ್ಪದವಾಗಿ ಈ ಮಹಿಳೆ ಓಡಾಡುತ್ತಿರುವುದನ್ನ ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಮುಳಬಾಗಿಲು ಮೂಲದ ನಂದಿನಿ ಅಲಿಯಾಸ್ ಆಯೆಷಾ ಮಗು ಕದ್ದ ಮಹಿಳೆ. ಈಗೆ ಶಿವಾಜಿನಗರದಲ್ಲಿ ವಾಸವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಪೊಲೀಸರು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕಲಾಸಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.