ಬಿಲಾಸ್‌ಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಜುನಾದಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಕಾರ್ಗೋ ಲಿಫ್ಟ್‌ನಲ್ಲಿ ತಲೆ ಸಿಲುಕಿ 15 ವರ್ಷದ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ.
ಛೋಟು (15) ಎಂಬಾತ ನಾಲ್ಕನೇ ಮಹಡಿಗೆ ಲಿಫ್ಟ್‌ನಲ್ಲಿ ಸರಕುಗಳನ್ನು ಸಾಗಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೋಲೀಸರ ಪ್ರಕಾರ, ಅವನು ತನ್ನ ಕುತ್ತಿಗೆಯನ್ನು ಲಿಫ್ಟ್‌ನಿಂದ ಹೊರಗೆ ಹಾಕಿಕೊಂಡಿರಬಹುದು ಮತ್ತು ಲಿಫ್ಟ್ ನಲ್ಲಿ ತಲೆ ಸಿಲುಕಿ ನಜ್ಜುಗುಜ್ಜಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಗರ ಕೊತ್ವಾಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಂಗಡಿ ಮಾಲೀಕ ಭರತ್ ಮಾತನಾಡಿ, ಛೋಟುವಿನ ತಾಯಿ ಕಳೆದ 15 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ, ಪ್ರತಿದಿನ ನಾಲ್ಕು ಗಂಟೆಗಳ ಕಾಲ ನಮ್ಮ ಅಂಗಡಿಯಲ್ಲಿ ಹುಡುಗನನ್ನು ಬಿಡುತ್ತಾರೆ, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಚೋಟು ನಾಲ್ಕನೇ ಮಹಡಿಗೆ ಸರಕುಗಳನ್ನು ಸಾಗಿಸುತ್ತಿದ್ದರು. ಘಟನೆಯಿಂದ ಅವನು ಗಂಭೀರವಾಗಿ ಗಾಯಗೊಂಡಿದ್ದ ಮತ್ತು ಬಹಳಷ್ಟು ರಕ್ತ ಸ್ರಾವ ಆಯಿತು ಎಂದರು.
ಅಪಘಾತ ಸಂಭವಿಸಿದಾಗ ಛೋಟು ಲಿಫ್ಟ್‌ನಲ್ಲಿ ಒಬ್ಬರೇ ಇದ್ದ. ಲಿಫ್ಟ್‌ನಿಂದ ರಕ್ತ ಸೋರುತ್ತಿರುವುದನ್ನು ಗಮನಿಸಿದ ಅಂಗಡಿ ಮಾಲೀಕರು ಪರಿಶೀಲಿಸಿದಾಗ ಗಾಯಗೊಂಡ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ಮಾಲೀಕರ ಮಾಹಿತಿ ಮೇರೆಗೆ ಸಿಟಿ ಕೊತ್ವಾಲಿ ಠಾಣೆಯ ತಂಡ ಅಂಗಡಿಗೆ ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಅಂಗಡಿಯ ನಾಲ್ಕನೇ ಮಹಡಿಯಲ್ಲಿನ ಲಿಫ್ಟ್‌ನಲ್ಲಿ ಕುತ್ತಿಗೆ ಸಿಲುಕಿದ್ದರಿಂದ ಬಾಲಕನ ತಲೆಗೆ ತೀವ್ರ ಗಾಯವಾಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಎಸ್‌ಆರ್ ಸಾಹು ತಿಳಿಸಿದ್ದಾರೆ. ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಸಾಹು ತಿಳಿಸಿದ್ದಾರೆ.