ಬಹುಕೋಟಿ ಸಾಲ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಂಚನೆ ಎಸಗಿರುವ ಆರೋಪದ ಮೇಲೆ ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯಗೆ ಫೆಬ್ರವರಿ 24ರಂದು ಸುಪ್ರೀಂ ಕೋರ್ಟ್ಗೆ ಹಾಜರಾಗುವಂತೆ ಕಡೇ ಅವಕಾಶ ನೀಡಿದೆ.
ಯು.ಯು.ಲಲಿತ್ ಹಾಗೂ ಎಸ್.ರವೀಂದ್ರ ಭಟ್ ನೇತೃತ್ವದ ದ್ವಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆ ಅವಧಿಯನ್ನು ಪ್ರಕಟಿಸಬೇಕಾಗಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ದೋಷಿಗಳ ಮಾತನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ, ಇದುವರೆಗೂ ಆರೋಪಿತರ ಸ್ಥಾನದಲ್ಲಿರುವವರು ಒಮ್ಮೆಯೂ ನ್ಯಾಯಾಲಯಕ್ಕೆ ಹಾಜಾರಾಗಿಲ್ಲ ಎಂದು ಅಸಮಾಧಾನ ಹೊರಹಾಕಿದೆ.
ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಜೈದೀಪ್ ಗುಪ್ತಾ ನ್ಯಾಯಾಲಯವು ಈ ವಿಚಾರವನ್ನು ಅಂತಿಮ ಎಂದು ಪರಿಗಣಿಸಿ ಪ್ರಕರಣವನ್ನು ಅಲ್ಪಾವಧಿಗೆ ಮುಂದೂಡಬೇಕು ಎಂದು ಮನವಿ ಮಾಡಿದ್ದರು.
ಈ ಬಗ್ಗೆ ಮಾತನಾಡಿದ ಭಟ್ ಇದುವರೆಗೂ ನಡೆದಿರುವ ಅಷ್ಟು ವಿಚಾರಣೆಗಳಲ್ಲೂ ಮಲ್ಯ ಗೈರು ಹಾಜರಾಗಿದ್ದು ಮುಂದೆ ನಡೆಯುವ ವಿಚಾರಣೆಗಳಲ್ಲೂ ಸಹ ಇದೇ ಆಗಲಿದೆ. ನಂತರ ಅವರ ಗೈರು ಹಾಜರಿಯಲ್ಲಿ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಬೇಕಾಗುತ್ತದೆ ಎಂದು ನ್ಯಾಮೂರ್ತಿ ಭಟ್ ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಲ್ಯ ವಿರುದ್ದ ಕೆಲವು ಪ್ರಕರಣಗಳು ಯುಕೆ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ಬ್ರಿಟನ್ ಸರ್ಕಾರದಿಂದ ಭಾರತ ಸರ್ಕಾರಕ್ಕೆ ಅವರ ಹಸ್ತಾಂತರ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸ್ವಾಭಾವಿಕವಾಗಿ ನ್ಯಾಯ ತತ್ವಗಳನ್ನು ಅನುಸರಿಸಲಾಗಿದೆ ಮತ್ತು ಆಪಾದಿತರಿಗೆ ಈಗಾಗಲೇ ಸಾಕಷ್ಟು ಭಾರೀ ಅವಕಾಶವನ್ನು ನೀಡಲಾಗಿದೆ. ವಿಚಾರಣೆಯನ್ನು ಅಲ್ಪಾವಧಿಗೆ ಮುಂದೂಡುವುದು ಸೂಕ್ತ ಎಂದು ಅಮಿಕಸ್ ಕ್ಯೂರಿ ಮತ್ತೊಮ್ಮೆ ನ್ಯಾಯಪೀಠದ ಗಮನಕ್ಕೆ ತಂದರು.












