ಹಿಜಾಬ್ – ಕೇಸರಿ ಶಾಲು ವಿವಾದ ಈಗ ಸಂಘರ್ಷಕ್ಕೆ ತಿರುಗಿದ ಪರಿಣಾಮ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ರಾಜ್ಯದಲ್ಲಿ ಒಂದು ವಾರಗಳ ಕಾಲ ಕಾಲೇಜುಗಳಿಗೆ ರಜೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೋರ್ಟ ತೀರ್ಪು ಬರೋ ವರೆಗೂ ಕಾಲೇಜುಗಳಿಗೆ ರಜೆ ಕೊಡುವುದು ಒಳ್ಳೆಯದು. ಉದ್ದೇಶಪೂರ್ವಕವಾಗಿ ಗಲಾಟೆ ನಡೆಯುತ್ತಿವೆ. ಹಿಜಾಬ್ ಬೆಂಬಲಿಸೋರ ಉದ್ದೇಶವೇ ಗಲಾಟೆಯಾಗಿದೆ. ಅಶಾಂತಿ ಮೂಡಿಸುವುದು ಅವರ ಉದ್ದೇಶ. ಕೋರ್ಟ ಶೀಘ್ರದಲ್ಲೇ ನ್ಯಾಯ ಕೊಡಲಿ ಎಂದು ಮನವಿ ಮಾಡಿದರು.
ವಾರ ತಿಂಗಳ ವರೆಗೆ ಕೋರ್ಟ ಜಡ್ಜ್ಮೆಂಟ್ ಮುಂದುವರೆದರೆ ಸಂಘರ್ಷ ಉಂಟಾಗುತ್ತದೆ. ನ್ಯಾಯಾಲಯ ಸೂಕ್ತ ತೀರ್ಪು ನೀಡಲಿದೆ. ನ್ಯಾಯಾಲಯ ನೀಡಿದ ತೀರ್ಪನ್ನ ಎಲ್ಲರೂ ಪಾಲಿಸಬೇಕು. ತೀರ್ಪು ಪಾಲಿಸದಿದ್ದರೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಹಿಜಾಬ್ ವಿವಾದವನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ. ದೇಶದಲ್ಲಿ ಶಾಂತಿ ಹಾಳು ಮಾಡಲು ಹಿಜಾಬ್ ವಿವಾದವನ್ನು ಹುಟ್ಟು ಹಾಕಲಾಗಿದೆ. ತುಕುಡೆ ತುಕುಡೆ ಗ್ಯಾಂಗ್ ಕಾಂಗ್ರೆಸ್ನ ವ್ಯವಸ್ಥಿತ ಹುನ್ನಾರ ಇದು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಹಿಜಾಬ್ ಹಾಕಲೇಬೇಕು ಅನ್ನೋದರ ಹಿಂದೆ ಕಾಂಗ್ರೆಸ್ನ ಹಿತಾಸಕ್ತಿ ಶಕ್ತಿ ಇದೆ. ದೇಶ ವಿರೋಧಿ ಸಂಘಟನೆಗಳ ಬೆಂಬಲ ಇದೆ. ಹೈದ್ರಾಬಾದ್ ನ ತಂಡ ಬಂದು ಉಡುಪಿಯಲ್ಲಿ ಸಭೆ ನಡೆಸಿ ಹಿಜಾಬ್ ಗೆ ಬೆಂಬಲಿಸಿದೆ. ರೈತರ ಹೋರಾಟ, ಸಿಎಎ ಹೋರಾಟದಲ್ಲಿಯು ಇದೆ ರೀತಿ ನಡೆದಿತ್ತು. ದೇಶದಲ್ಲಿ ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟಿರೋದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ. ಮೋದಿ ಆಡಳಿತ ನೋಡಲಾಗದೆ ಉದ್ದೇಶಪೂರ್ವಕವಾಗಿ ವಿರೋಧ ಪಕ್ಷಗಳು ಹೀಗೆಲ್ಲ ಮಾಡ್ತೀವೆ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಂರಿಗೆ ದೇಶ ಭಕ್ತಿ ಇಲ್ಲ.
ಮುಸ್ಲಿಂರಿಗೆ ದೇಶಭಕ್ತಿಯನ್ನು ನಾವು ಕಲಿಸಲಿಲ್ಲ. ವಕ್ಫ ಬೋರ್ಡ್, ಕಾಶ್ಮೀರ 370, ಅಲ್ಪ ಸಂಖ್ಯಾತ ಆಯೋಗ, ಇಲಾಖೆ ಅವರಿಗಾಗಿ ಪ್ರತ್ಯೇಕ ನಿಧಿ ಕೊಟ್ಟು ಹೀಗೆಲ್ಲ ನಡೆಯುತ್ತಿದೆ. ಅವರು ಸಂವಿಧಾನವನ್ನು ಒಪ್ಪುವುದಿಲ್ಲ. ಸಂವಿಧಾನ ಒಪ್ಪದವರಿಗೆ ಈ ದೇಶದಲ್ಲಿ ಇರಲು ನೈತಿಕತೆ ಇಲ್ಲ ಎಂದರು.