• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬಿಬಿಎಂಪಿ ಚುನಾವಣೆ : ವಾರ್ಡ್‌ ವಿಂಗಡಣೆ ಆಟ ಬಿಜೆಪಿಗೆ ಗೆಲುವು ತಂದು ಕೊಡುತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
February 5, 2022
in ಕರ್ನಾಟಕ, ರಾಜಕೀಯ
0
ಬಿಬಿಎಂಪಿ ಚುನಾವಣೆ : ವಾರ್ಡ್‌ ವಿಂಗಡಣೆ ಆಟ ಬಿಜೆಪಿಗೆ ಗೆಲುವು ತಂದು ಕೊಡುತ್ತಾ?
Share on WhatsAppShare on FacebookShare on Telegram

ಬಿಬಿಎಂಪಿ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಅದರಲ್ಲೂ ಹೈಕಮಾಂಡ್‌ ಮುಂದೆ ಮಾನ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ಮುಂದಿರುವ ಅಗ್ನಿ ಪರೀಕ್ಷೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಬೀಗದಿದ್ದರೆ ಮುಂದಿನ ದಿನಗಳನ್ನು ಅರಾಮವಾಗಿ ಮನೆಯಲ್ಲಿ ಕಳೆಯಬಹುದು. ಇತ್ತ ಕಾಂಗ್ರೆಸ್‌ ಗೆ ಬಿಬಿಎಂಪಿಯನ್ನು ಮತ್ತೊಮ್ಮೆ ಗೆದ್ದು ಮುಂದಿನ ವಿಧಾನಸಭಾ ಚುನಾವಣೆಯ ಹುರುಪನ್ನು ಇಮ್ಮಡಿ ಮಾಡಿಕೊಳ್ಳಬೇಕು. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿಕೆ ಶಿವಕುಮಾರ್‌ ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬಿಬಿಎಂಪಿ ಗೆಲ್ಲಿಸಿ ಮತ್ತೊಮ್ಮೆ ಪಕ್ಷದೊಳಗೆ ತಮ್ಮ ತಮ್ಮ ಹಿಡಿತ ಗಟ್ಟಿಗೊಳಿಸುವ ಅವಶ್ಯಕತೆ ಇದೆ. ಎಂದಿನಂತೆ ಜೆಡಿಎಸ್‌ ಗೆಲ್ಲುವ ಅಲ್ಪಸ್ವಲ್ಪ ವಾರ್ಡ್‌ಗಳನ್ನು ಮುಂದಿಟ್ಟು ಸ್ಥಾಯಿ ಸಮಿತಿಯ ಮೇಲೆ ತಮಗಿರುವ ಆಧಿಪತ್ಯ ಮುಂದುವರೆಸಿಕೊಳ್ಳುವ ಲೆಕ್ಕಾಚಾರವಂತೂ ಇದೆ. ಹೀಗೆ ಪ್ರತಿ ಪಕ್ಷಗಳಿಗೂ ಈ ಬಾರಿಯ ಬಿಬಿಎಂಪಿ ಚುನಾವಣೆ ಅಗ್ನಿ ಪರೀಕ್ಷೆಯ ಅಖಾಡವಾಗಿ ಮಾರ್ಪಾಡಾಗಿದೆ.

ADVERTISEMENT

ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಕಳೆದ ಬೈ ಎಲೆಕ್ಷನ್‌ ಹಾಗೂ ಸ್ಥಳೀಯ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಿಕೊಂಡಿಲ್ಲ. ಇದು ಕಮಲ ಹೈ ಕಮಾಂಡ್‌ ರಾಜ್ಯ ಬಿಜೆಪಿಗರನ್ನು ತುಚ್ಛವಾಗಿ ಕಾಣೋದಕ್ಕೆ ದಾರಿ ಮಾಡಿ ಕೊಟ್ಟಿತು. ಹೀಗಾಗಿ ಈ ಬಿಬಿಎಂಪಿ ಚುನಾವಣೆ ರಾಜ್ಯ ಬಿಜೆಪಿ ಪಾಲಿಕೆಗೆ ಮಹತ್ವದ್ದು ಮತ್ತು ನಿರ್ಣಾಯಕ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಸಿಎಂ ಬೊಮ್ಮಾಯಿ ವಿಶೇಷವಾಗಿರುವ ಪ್ಲ್ಯಾನ್‌ಗಳೆನ್ನೆಲ್ಲಾ ಮಾಡಿಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿಯ ಓರ್ವ ನಾಯಕ ಪ್ರತಿಧ್ವನಿಯ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ ಎಂದರು.

ವಾರ್ಡ್ ವಿಂಗಡಣೆ : ಬಿಜೆಪಿ ಹೊಸ ಲೆಕ್ಕಾಚಾರ

ಈ ಬಾರಿ 198 ವಾರ್ಡ್‌ ಗಳನ್ನು ವಿಂಗಡಿಸಿ 242 ವಾರ್ಡ್‌ಗಳನ್ನಾಗಿಸಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ ಬಿಬಿಎಂಪಿ. ಈ ವಾರ್ಡ್‌ ವಿಂಗಡಣೆಯ ಹಿಂದಿರುವ ಹಿಡನ್‌ ಅಜೆಂಡಾವೇ ಬೇರೆ ಇದೆ. ಏನೆಂದರೆ, ವಾರ್ಡ್‌ಗಳನ್ನು ಹೆಚ್ಚಿಸಿ ಹೆಚ್ಚೆಚ್ಚು ವಾರ್ಡ್‌ಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ರೂಪುರೇಷೆ ಹಾಕಿಕೊಂಡಿರುವ ಬಿಜೆಪಿ, ತನ್ನ ಪ್ರಾಬಲ್ಯ ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ವಾರ್ಡ್‌ ವಿಂಗಡಣೆ ಮಾಡಿಕೊಂಡಿದೆ. ಮುಖ್ಯವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬಿಜೆಪಿ ಹಿಡಿತದ ಆಳ ಅಗಲ ಈಗ ಗೌಪ್ಯವಾಗಿ ಉಳಿದಿರುವ ವಿಚಾರವೇನು ಅಲ್ಲ. ಎಲ್ಲಿ ಸೋತರೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಮಾತ್ರ ಬಿಜೆಪಿ ಸೋತು ಹಿಡಿತ ಕಳೆದುಕೊಳ್ಳುವುದಿಲ್ಲ ಎಂದು ಬಿಜೇಪಿಯೇತರ ನಡುವೆಯೇ ಇರುವ ಮಾತು. ಹೀಗೆ ಆರ್‌ಆರ್‌ ನಗರ ವಲಯ, ಬೊಮ್ಮನಹಳ್ಳಿ ವಲಯ, ಕೆಆರ್‌ ಪುರಂ ಈ ಭಾಗದಲ್ಲಿ ಹೆಚ್ಚೆಚ್ಚು ವಾರ್ಡ್‌ಗಳನ್ನು ವಿಂಗಡಿಸಿ ಬಿಬಿಎಂಪಿ ಚುನಾವಣೆ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ ಬಿಜೆಪಿ.

ಮೇಕೆದಾಟು ಪಾದಯಾತ್ರೆ : ಕೈ ರಣತಂತ್ರ


ಇದು ಕಾಂಗ್ರೆಸ್ಗೂ ಗೊತ್ತಿರುವ ವಿಚಾರವೇ. ಇದೇ ಕಾರಣಕ್ಕೆ ಇದರ ವಿರುದ್ಧ ಪ್ರತಿಭಟಿಸಿ ಇದನ್ನು ಜನರಿಗೆ ಅರಿವು ಮಾಡಿಸಬೇಕು ಎಂದು ಕೆಪಿಸಿಸಿ ಕಚೇರಿಯಲ್ಲಿ ಕೂತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಹಾಗೂ ತಂಡ ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ ಚುನಾವಣೆ ಕಾವು ಹೆಚ್ಚಿದ ಕೂಡಲೇ ಮೂರು ಪ್ರಮುಖ ಅಂಶಗಳನ್ನಿಟ್ಟುಕೊಂಡು ಬೀದಿಗಳಿಯಲು ನಿರ್ಧರಿಸಿದೆ. ಒಂದು, ಅವೈಜ್ಞಾನಿಕವಾಗಿ ವಾರ್ಡ್‌ ವಿಂಗಡಣೆ ಮಾಡಲಾಗಿದೆ. ಎರಡು, ಗಾರ್ಬೇಜ್‌ ಬಿಲ್‌ ಹೇರಿಕೆ ಮಾಡಿ ಜನರ ಮೇಲೆ ಮತ್ತಷ್ಟು ಹೊರೆ ಹಾಕಲಾಗುತ್ತಿದೆ. ಮೂರು, ಕೊರೋನಾ ಪರಿಸ್ಥಿತಿಯನ್ನು ಬಿಜೆಪಿ ನಿಭಾಯಿಸಿದ ರೀತಿ. ಹೀಗೆ ಮೂರು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಬಿಬಿಎಂಪಿ ಚುನಾವಣಾ ರಣರಂಗಕ್ಕೆ ದಾಪುಗಾಲಿಡಲು ಕಾಂಗ್ರೆಸ್‌ ನಿರ್ಧರಿಸಿದೆ. ಈಗಾಗಲೇ ಈ ಬಗ್ಗೆ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಜೊತೆಗೆ ಬೆಂಗಳೂರಿನ ಕೈ ಕೌನ್ಸಿಲರ್‌ಗಳಾಗಬಹುದಾದ ನಾಯಕರು ಮೀಟಿಂಗ್‌ ಮಾಡಿ ಚುನಾವಣೆ ತಯಾರಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ಕೈಗೊಳ್ಳಲಾಗಿದ್ದ ಮೇಕೆದಾಟು ಪಾದಯಾತ್ರೆ ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಕೈ ಬಳಿ ಇರುವ ಪ್ರಮುಖ ಅಸ್ತ್ರ. ಮೇಕೆದಾಟು ಪಾದಯಾತ್ರೆಯಿಂದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ ಎಂಬುವುದು ಸತ್ಯ. ಅದನ್ನೇ ಮುಂದಿಟ್ಟುಕೊಂಡು ಬೆಂಗಳೂರಿನ ಕುಡಿಯವ ನೀರಿಗೆ ಮೇಕೆದಾಟು ಪಾದಯತ್ರೆಯೇ ಪರಿಹಾರ ಎಂಬ ನೆಲೆಗಟ್ಟಿನಲ್ಲಿ ಜನರ ಕಡೆಗೆ ಹೆಜ್ಜೆ ಹಾಕಲು ಕಾಂಗ್ರೆಸ್‌ ಹಿರಿಯ ನಾಯಕರ ನಿರ್ದೇಶನವಿದೆ.

ಒಂದು ಕಡೆ ವಾರ್ಡ್‌ ವಿಂಗಡಿಸಿ ಹಿಂಬಂದಿಯಿಂದ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಈ ಬಿಬಿಎಂಪಿ ಚುನಾವಣೆ ಸುಲಭದ ತುತ್ತಲ್ಲ. ಕಳೆದ ಬಾರಿ ಗದ್ದುಗೆ ಗೆದ್ದುಕೊಂಡಿದ್ದ ಬಿಜೆಪಿ ಗೌತಮ್‌ ಕುಮಾರ್‌ಗೆ ಮೇಯರ್‌ ಪಟ್ಟ ಕಟ್ಟಿ ಅಧಿಕಾರ ನಡೆಸಿ ಮಳೆಯಿಂದಾದ ಅನಾಹುತಗಳಿಂದ ಎಷ್ಟು ಸಾಧ್ಯವೋ ಅಷ್ಟು ಕೆಟ್ಟ ಹೆಸರು ಪಡೆದುಕೊಂಡಿತ್ತು. ಅದಾಗಿ ಕೊರೋನಾ ಧಾವಿಸಿದ್ದರಿಂದ ಅದೀಗ ಜನರ ನೆನಪಿನಲ್ಲಿ ಇರಲು ಸಾಧ್ಯವಿಲ್ಲ. ಇದು ಸ್ವಲ್ಪ ಮಟ್ಟಿಗೆ ಈ ಚುನಾವಣೆಯಲ್ಲಿ ಬಿಜೆಪಿಯ ಕೈ ಹಿಡಿಯಲಿದೆ. ಆದರೆ ಎರಡು ಬೈ ಎಲೆಕ್ಷನ್‌ ಹಾಗೂ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ ಪೈಪೋಟಿಗೆ ಬಿಜೆಪಿ ಖಂಡಿತ ಬೆದರಿದೆ. ಹೀಗಾಗಿಯೇ ವಾರ್ಡ್‌ ವಿಂಗಡಣೆ ಅಸ್ತ್ರ ಮುಂದಿಟ್ಟಿದ್ದು, ಇನ್ನೇನು 198 ಇದ್ದ ವಾರ್ಡ್‌ ಸಂಖ್ಯೆ 242 ಆಗಲಿದೆ. ಇದರ ಜೊತೆಗೆ ಇನ್ನೇನು ಕೆಲವೇ ದಿನಗಳಲ್ಲಿ ಬಿಬಿಎಂಪಿ ಈ ಪ್ರಸಕ್ತ ಸಾಲಿನ ಪ್ರಾಸ್ತವಿಕ ಬಜೆಟ್‌ ಮಂಡಿಸಲಿದೆ. ಈ ಬಜೆಟ್‌ನಲ್ಲಿ ಭರಪೂರ ಅನುಮೋದನೆ ನೀಡಲು ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಮಲ್ಲೇಶ್ವರದ ಕಚೇರಿಯಿಂದ ಸಿಕ್ಕಿದೆ.

ಹೀಗೆ ಬಿಬಿಎಂಪಿ ಚುನಾವಣೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿ ನಿಂತಿದೆ. ಇಲ್ಲಿ ಸೋತರೆ ಅಲ್ಲಿ ಸೋಲು ಎಂಬರ್ಥದಲ್ಲಿ ಅಲ್ಲದಿದ್ದರೂ ಬಿಜೆಪಿ ಸೋತರೆ ಹೈ ಕಮಾಂಡ್‌ ಮುಂದೆ ತಮ್ಮ ಕಿಮ್ಮತ್ತು ಕಳೆದುಕೊಂಡು ಇಲ್ಲದ ಬೆಲೆಯಲ್ಲಿ ಮತ್ತೊಂದಿಷ್ಟು ಬೆಲೆ ಕಳೆದುಕೊಳ್ಳಲಿದೆ. ಇದೇ ವೇಳೆ ಕಾಂಗ್ರೆಸ್‌ ಸೋತರೆ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ನಡುವಿನ ಮನಸ್ತಾಪವೇ ಇದಕ್ಕೆ ಕಾರಣ ಎಂಬ ಸಂಗತಿ ಮತ್ತೊಮ್ಮೆ ದೆಹಲಿ ಎಐಸಿಸಿ ಬಾಗಿಲು ಬಡಿಯಲಿದೆ. ಇದರ ನಡುವೆ ಕುಮಾರಣ್ಣ ಸಿಕ್ಕಷ್ಟು ಬಾಚಿಕೊಳ್ಳುವ ಎಂದಿನ ತಂತ್ರಗಾರಿಕೆಯೊಂದಿಗೇ ಇದ್ದು, ಕನಿಷ್ಠ 3 ಸ್ಥಾಯಿ ಸಮಿತಿ ಧಕ್ಕಿಸಿಕೊಳ್ಳುವ ಆಟ ಆಡಲಿದೆ.

Tags: BJPCongress PartyCovid 19ಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿಬಿಬಿಎಂಪಿ ಚುನಾವಣೆವಾರ್ಡ್‌ ವಿಂಗಡಣೆ
Previous Post

ವ್ಯಕ್ತಿ ಸ್ವಾತಂತ್ತ್ಯ ಬಗ್ಗೆ ಮಾತಾಡೋರು ಮಹಿಳೆಯರನ್ನ ಮಸಿದಿಗೆ ಏಕೆ ಪ್ರವೇಶ ಮಾಡಲ್ಲ : sunil kumar

Next Post

ಹಿಜಾಬ್ ವಿವಾದದ ಬೆನ್ನಲ್ಲೇ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬರುವವರ ಸಂಖ್ಯೆ ಹೆಚ್ಚಳ

Related Posts

Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
0

https://youtu.be/DaADq5Dowbg

Read moreDetails

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

July 10, 2025

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

July 10, 2025
ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

July 10, 2025
Next Post
ಹಿಜಾಬ್ ವಿವಾದದ ಬೆನ್ನಲ್ಲೇ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬರುವವರ ಸಂಖ್ಯೆ ಹೆಚ್ಚಳ

ಹಿಜಾಬ್ ವಿವಾದದ ಬೆನ್ನಲ್ಲೇ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬರುವವರ ಸಂಖ್ಯೆ ಹೆಚ್ಚಳ

Please login to join discussion

Recent News

Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 
Top Story

ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada