• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆ ಸಂತ್ರಸ್ತರ ರಕ್ತದಲ್ಲಿ ಮೂಡಿವೆ : ಯೋಗಿ ಆದಿತ್ಯನಾಥ್

ಶರಣು ಚಕ್ರಸಾಲಿ by ಶರಣು ಚಕ್ರಸಾಲಿ
February 1, 2022
in ದೇಶ
0
ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆ ಸಂತ್ರಸ್ತರ ರಕ್ತದಲ್ಲಿ ಮೂಡಿವೆ : ಯೋಗಿ ಆದಿತ್ಯನಾಥ್
Share on WhatsAppShare on FacebookShare on Telegram

ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆಯ ಸಂತ್ರಸ್ತರ ರಕ್ತದಲ್ಲಿ ಹಾಗೂ ಅಯೋಧ್ಯೆಯಲ್ಲಿ ಗುಂಡಿಕ್ಕಿ ಕೊಂದ ಕರಸೇವಕರ ರಕ್ತದಲ್ಲಿ ಚಿತ್ರಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಾರವಾಗಿ ಹೇಳಿದ್ದಾರೆ.

ADVERTISEMENT

ಚುನಾವಣೆ ಸಮೀಪಿಸುತ್ತಿರುವ ಉತ್ತರಪ್ರದೇಶದಲ್ಲಿ ಎಸ್‌ಪಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಸೇರಿದಂತೆ ಬಿಜೆಪಿ ನಾಯಕರು ಸಮಾಜವಾದಿ ಪಕ್ಷದ ಕೆಂಪು ಟೋಪಿಯನ್ನು ಪದೇ ಪದೇ ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತಿರುವುದನ್ನು ಗಮನಿಸಬಹುದು.

ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಮಾತನಾಡುತ್ತ, “ಸಮಾಜವಾದಿ ಪಕ್ಷದ ಕೆಂಪು ಟೋಪಿ ಮುಜಫರ್‌ನಗರ ಗಲಭೆಯ ಸಂತ್ರಸ್ತರು ಮತ್ತು ಅಯೋಧ್ಯೆಯಲ್ಲಿ ಗುಂಡು ಹಾರಿಸಿದ ಕರಸೇವಕರ ರಕ್ತದಲ್ಲಿ ಚಿತ್ರಿಸಲಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಗೋರಖ್‌ಪುರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಎಸ್‌ಪಿಯನ್ನು ಗುರಿಯಾಗಿಸಿಕೊಂಡು ರೆಡ್ ಕ್ಯಾಪ್‌ನಲ್ಲಿರುವವರು ರಾಜ್ಯಕ್ಕೆ “ರೆಡ್ ಅಲರ್ಟ್” ಹಾಗೂ “ಅಪಾಯದ ಸಂಕೇತ” ಎಂದು ಹೇಳಿದ್ದರು. ಈ ಬೆನ್ನಲ್ಲೇ ಈಗ ಯೋಗಿ ಮತ್ತೆ ಕೆಂಪುಟೋಪಿ ಗುರಿಯಾಗಿಸಿಕೊಡು ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಕೆಂಪು ಟೋಪಿಗಳನ್ನು ಎಂದು ಧರಿಸುವವರು “ಗೂಂಡಾಗಳು” ಎಂದು ಈ ಹಿಂದೆ ಆದಿತ್ಯನಾಥ್‌ ಕೂಡ ಹೇಳಿದ್ದರು.

ತಮ್ಮ ಸರ್ಕಾರವು ಜನಸಾಮಾನ್ಯರನ್ನು ರಕ್ಷಿಸಲು ಮತ್ತು ಅವರಲ್ಲಿ ಸುರಕ್ಷತಾ ಭಾವವನ್ನು ಮೂಡಿಸಲು ಕೆಲಸ ಮಾಡುತ್ತಿದೆ. ಅಪರಾಧಿಗಳು ಭಯಭೀತರಾಗುತ್ತಿದ್ದು, ಕೈ ಕಟ್ಟಿ ಪೊಲೀಸರ ಮುಂದೆ ಶರಣಾಗುತ್ತಿದ್ದಾರೆ. ಹಿಂದಿನ ಎಸ್‌ಪಿ ಸರ್ಕಾರವು ರಾಜ್ಯದ ಬಡ ಜನರನ್ನು ನಿರ್ಲಕ್ಷಿಸಿದೆ. ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರವು ಸುಗಂಧ ದ್ರವ್ಯ ವ್ಯಾಪಾರದಲ್ಲಿ ತೊಡಗಿರುವ ತನ್ನ ಸ್ನೇಹಿತರಿಗಾಗಿ ಮಾತ್ರ ಕೆಲಸ ಮಾಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ.

ಎಸ್‌ಪಿ ಪಕ್ಷ ಎಂದಿಗೂ ಉತ್ತರ ಪ್ರದೇಶ ಮತ್ತು ಅದರ ಜನರನ್ನು ತಮ್ಮವರೆಂದು ಪರಿಗಣಿಸಲಿಲ್ಲ. ಅವರ ಅಭಿಪ್ರಾಯಗಳು ಕುಟುಂಬ ಕೇಂದ್ರಿತ ಮತ್ತು ಪಾಕಿಸ್ತಾನ ಕೇಂದ್ರಿತವಾಗಿವೆ. 2017 ರ ಮೊದಲು ರಾಜ್ಯದಲ್ಲಿ ಪ್ರತಿ ಮೂರುದಿನಕ್ಕೊಮ್ಮೆ ಗಲಭೆಗಳು ನಡೆಯುತ್ತಿದ್ದವು. ಹುಡುಗಿಯರು ತಮ್ಮ ಸುರಕ್ಷತೆಯ ಬಗ್ಗೆ ಭಯಪಡುತ್ತಿದ್ದರು. ಬಿಜೆಪಿ ಆಡಳಿತದಲ್ಲಿ ಇದು ಬದಲಾಗಿದೆ ಎಂದು ಆದಿತ್ಯನಾಥ್ ವಿವರಿಸಿದ್ದಾರೆ.

ತಮ್ಮ ಸರ್ಕಾರ ಉತ್ತರ ಪ್ರದೇಶಕ್ಕೆ ಹೊಸ ಗುರುತನ್ನು ಒದಗಿಸಿದೆ ಎಂದು ಪ್ರತಿಪಾದಿಸಿದ ಅವರು, “ಈಗ ಉದ್ಯಮಿಗಳು ಮತ್ತು ಜನರು ರಾಜ್ಯದಿಂದ ವಲಸೆ ಹೋಗುತ್ತಿಲ್ಲ. ಉದ್ಯಮಿಗಳು ಈಗ ರಾಜ್ಯಕ್ಕೆ ಮರಳುತ್ತಿದ್ದಾರೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರವು ನಿರ್ದಿಷ್ಟ ಧರ್ಮದ ಜನರನ್ನು ಗುರಿಯಾಗಿಸಿಕೊಂಡಿದೆ ಮತ್ತು ಎಸ್‌ಪಿ ನಾಯಕ ಅಜಂ ಖಾನ್ ವಿರುದ್ಧ 80 ಕ್ಕೂ ಹೆಚ್ಚು ಪ್ರಕರಣಗಳನ್ನು ಏಕೆ ದಾಖಲಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಆದಿತ್ಯನಾಥ್, ನಮ್ಮ ಸರ್ಕಾರ ಯಾರ ವಿರುದ್ಧವೂ ರಾಜಕೀಯ ಪ್ರೇರಿತ ಎಫ್‌ಐಆರ್ ದಾಖಲಿಸಿಲ್ಲ. ಆಜಂ ಖಾನ್ ವಿರುದ್ಧದ ಪ್ರಕರಣಗಳು ಅವರ ತಪ್ಪುಗಳ ಪರಿಣಾಮವಾಗಿದೆ. ಬಡವರಿಗೆ ಸೇರಿದ ಭೂಮಿಯನ್ನು ಅತಿಕ್ರಮಿಸಿ ಅಲ್ಲಿ ಸಂಸ್ಥೆಯನ್ನು ನಿರ್ಮಿಸಲು ಯಾರಾದರೂ ಪ್ರಯತ್ನಿಸಿದರೆ, ಅಂತಹ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ಸರ್ಕಾರವು ಎಲ್ಲಾ ಜಾತಿ ಮತ್ತು ಹಿನ್ನೆಲೆಯ ಜನರಿಗೆ ಪ್ರಯೋಜನಗಳನ್ನು ನೀಡಿದೆ. ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಸರ್ಕಾರಗಳಲ್ಲಿ ನಾಯಕರು ಮೊದಲು ತಮ್ಮ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ನಮ್ಮ ಸರ್ಕಾರದಲ್ಲಿ ಇದು ಬದಲಾಗಿದೆ. ರಾಜ್ಯದ ಪ್ರತಿ ಕುಟುಂಬಕ್ಕೂ ಮನೆ ನೀಡುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಕಬ್ಬು ರೈತರ ಬಗ್ಗೆ ಮಾತನಾಡಿದ ಯೋಗಿ, “ಸಮಾಜವಾದಿ ಪಕ್ಷವು ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದೆ. ನಮ್ಮ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆಯನ್ನು ಮರು ಸ್ಥಾಪಿಸಿದೆ. ಎಸ್‌ಪಿಗೆ ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ ಇರಲಿಲ್ಲ. “ಡಬಲ್ ಇಂಜಿನ್” ಸರ್ಕಾರವು ಕಳೆದ ಐದು ವರ್ಷಗಳಲ್ಲಿ ರಾಜ್ಯವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ನಾವು ಮಾಡಿದ ಕೆಲಸವು ದೇಶಕ್ಕೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜ್ಯಕ್ಕೆ ಮನ್ನಣೆ ನೀಡಿದೆ ಎಂದು ಹೇಳಿದ್ದಾರೆ.

Tags: BJPCongress Partyyogi-adityanath-says-samajwadi-cap-is-formed-by-blood-strainsನರೇಂದ್ರ ಮೋದಿಬಿಜೆಪಿ
Previous Post

2022ರ ಕೇಂದ್ರ ಬಜೆಟ್‌ನ ಕ್ಷಣ ಕ್ಷಣದ ಮಾಹಿತಿ | 2022 UNION BUDGET HIGHLIGHTS

Next Post

ಇಕಾನಾಮಿಕ್ ಸರ್ವೆಯ ಅಂಕಿ-ಅಂಶ, ಚಾರ್ಟುಗಳಲ್ಲಿ ತೌಡು ಕುಟ್ಟಿದ ಸರ್ಕಾರ!

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
Next Post
ಇಕಾನಾಮಿಕ್ ಸರ್ವೆಯ ಅಂಕಿ-ಅಂಶ, ಚಾರ್ಟುಗಳಲ್ಲಿ ತೌಡು ಕುಟ್ಟಿದ ಸರ್ಕಾರ!

ಇಕಾನಾಮಿಕ್ ಸರ್ವೆಯ ಅಂಕಿ-ಅಂಶ, ಚಾರ್ಟುಗಳಲ್ಲಿ ತೌಡು ಕುಟ್ಟಿದ ಸರ್ಕಾರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada