ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಗುಳೇದಗುಡ್ಡ ಪುರಸಭಾ ಜೆಡಿಎಸ್ ಸದಸ್ಯರು ಕೈ ಜೋಡಿಸಿದ್ದು, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ತಗೆದುಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.
ಅಭಿವೃದ್ದಿಗಾಗಿ ಸಿದ್ದರಾಮಯ್ಯನವರನ್ನು ಬೆಂಬೆಲಿಸಿದ್ದೇವೆ ಎಂದ ಸ್ಥಳೀಯ ಜೆಡಿಎಸ್ ಪುರಸಭೆ ಸದಸ್ಯರು ತಿಳಿಸಿದ್ದು, ಗುಳೇದಗುಡ್ಡ ಪುರಸಭೆ ಅಧ್ಯಕ್ಷೆಯಾಗಿ ಯಲ್ಲವ್ವ ಗೌಡರ, ಉಪಾಧ್ಯಕ್ಷರಾಗಿ ನಾಗರತ್ನ ಲಕ್ಕುಂಡಿ ಆಯ್ಕೆ ಆಗಿದ್ದಾರೆ.
ಗುಳೇದಗುಡ್ಡ ಪುರಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಒಟ್ಟು 23 ಸದಸ್ಯ ಬಲದ ಗುಳೇದಗುಡ್ಡ ಪುರಸಭೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 5, ಬಿಜೆಪಿ 2 ಸದಸ್ಯರು ಆಯ್ಕೆ ಆಗಿದ್ದರು.






