ಈ ವರ್ಷ ಪ್ರಾರಂಭದಲ್ಲಿ ನಡೆಯುವ ಪಂಚರಾಜ್ಯ ಚುನಾವಣೆಗೆ ಚುನಾವಣೆ ಆಯೋಗ ಇಂದು (ಶನಿವಾರ) ಮಧ್ಯಾಹ್ನ 3:30ಕ್ಕೆ ದಿನಾಂಕವನ್ನ ಘೋಷಿಸಲಿದೆ ಎಂದು ಆಯೋಗದ ಉನ್ನತ ಸುದ್ದಿ ಮೂಲಕಗಳು ತಿಳಿಸಿವೆ.
ಉತ್ತರಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ್ ಹಾಗೂ ಗೋವಾ ರಾಜ್ಯಗಳಿಗೆ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿನ ನಡುವೆ ಚುನಾವಣಾ ಆಯೋಗ ದಿನಾಂಕ ಘೋಷಿಸಲು ಹೊರಟಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ದೇಶದಲ್ಲಿ ನಿನ್ನೆ ಒಂದೇ ದಿನ 1.41 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ ಮತ್ತು ಪಾಸಿಟಿವಿಟಿ ದರ ಶೇ.21ರಷ್ಟು ಜಾಸ್ತಿಯಾಗಿದೆ.