• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಒಂದೇ ವ್ಯಕ್ತಿಗೆ 11 ಡೋಸ್ ಲಸಿಕೆ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳು : ತನಿಖೆಗೆ ಆದೇಶಿಸಿದ ಬಿಹಾರ ಸರ್ಕಾರ

Any Mind by Any Mind
January 7, 2022
in ಇದೀಗ
0
Share on WhatsAppShare on FacebookShare on Telegram

ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹಾಗೂ ಓಮಿಕ್ರಾನ್ ರೂಪಾಂತರಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು ಇತ್ತ ಭಾರತ ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಆದರೆ, ಬಿಹಾರದಲ್ಲಿ ವ್ಯಕ್ತಿಯೊಬ್ಬರಿಗೆ 11 ಡೋಸ್ ಲಸಿಕೆಯನ್ನು ನೀಡಿ ಬಿಹಾರದ ಅರೋಗ್ಯ ಇಲಾಖೆಯ ಅಧಿಕಾರಿಗಳು ಸುದ್ದಿಯಲ್ಲಿದ್ದಾರೆ.

ADVERTISEMENT

ಬಿಹಾರದ ಮಾಧೇಪುರ್ ಜಿಲ್ಲೆಯ ಚೌಸಾದ ನಿವಾಸಿ ಬ್ರಹ್ಮದೇವ್ ಮಂಡಲ್(84) ಎಂಬ ವ್ಯಕ್ತಿ ತಾನು 11 ಡೋಸ್ ಲಸಿಕೆ ಪಡೆದಿರುವುದರಿಂದ ಹಲವು ಪ್ರಯೋಜನಗಳಾಗಿವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿ ಲಸಿಕೆ ಒಂದು ಅಮೃತ ನಾನು ಅದರಿಂದ ಸಾಕಷ್ಟು ಗಳಿಸಿದ್ದೇನೆ. ಲಸಿಕೆ ಪಡೆದ ನಂತರ ನನ್ನಗಿದ ಸೊಂಟ ನೋವು ಮಾಯಾವಾಗಿದೆ ಮತ್ತು ನನ್ನ ದೇಹದಲ್ಲಿ ಆಮ್ಲಜನಕದ ಮಟ್ಟ ತುಂಬ ವೃದ್ಧಿಯಾಗಿದೆ, ನಾನು ಯಾವುದೇ ಖಾಯಿಲೆಯಿಂದ ಬಳಲುತ್ತಿಲ್ಲ ಎಂದು ಹೇಳಿದ್ದಾರೆ.

ಸರ್ಕಾರವು ಲಸಿಕೆ ಅಭಿಯಾನವನ್ನು ಜಾರಿಗೆ ತಂದು ತುಂಬ ಒಳ್ಳೆಯ ಕೆಲಸವನ್ನು ಮಾಡಿದೆ. ದೇಶದ ನಾಗರೀಕರು ಹೆಚ್ಚು ಡೋಸ್ಗಳನ್ನು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರದ ಈ ಕ್ರಮವನ್ನ ವಿರೋಧಿಸುವ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.

ಇಷ್ಟು ಡೋಸ್ ಲಸಿಕೆಗಳನ್ನು ಹೇಗೆ ಪಡೆದರಿ ಎಂದು ಕೇಳಿದಾಗ ನಾನು ಲಸಿಕೆ ಪಡೆಯಲು ನನ್ನ ಬಳಿ ಇರುವ ಫೋನ್ ನಂಬರ್ ಹಾಗೂ ಆಧಾರ್ ಕಾರ್ಡ್ಅನ್ನು ಬಳಸಿರುವುದಾಗಿ ಹೇಳಿದ್ದಾರೆ. ಸರ್ಕಾರಕ್ಕೆ ನಾನು ಹಲವು ಭಾರೀ ಲಸಿಕೆ ಪಡೆದರೂ ಸಹ ಯಾವುದೇ ತರಹದ ಅನುಮಾನ ಮೂಡದೇ ಇರುವುದು ಅದರ ಕಾರ್ಯಶೈಲಿಯನ್ನು ಎತ್ತಿ ತೋರಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಡೋಸ್ಗಳನ್ನು ತೆಗೆದುಕೊಳ್ಳುವುದಾಗಿ ಮಂಡಲ್ ಹೇಳಿದ್ದಾರೆ.

ಮಂಡಲ್ ಇತ್ತೀಚಿಗೆ ಚೌಸಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಮ್ಮ 12ನೇ ಡೋಸ್ಅನ್ನು ಪಡೆಯಲು ಹೋಗಿದ್ದರು ಆದರೆ, ಅಲ್ಲಿ ಲಸಿಕೆ ಖಾಲಿಯಾಗಿದ್ದ ಕಾರಣ ಮನೆಗೆ ಹಿಂತಿರುಗಿದ್ದರು. ಅಂಚೆ ಇಲಾಖೆಯ ನಿವೃತ್ತ ನೌಕರರಾಗಿರುವ ಮಂಡಲ್ ತಾವು ತೆಗೆದುಕೊಂಡಿರುವ ಪ್ರತಿ ಡೋಸ್ನ ಪ್ರಮಾಣಪತ್ರವನ್ನು ಹೊಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಂಡಲ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧೇಪುರ್ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ವೈದ್ಯಾಧಿಕಾರಿ ಅಮರೇಂದ್ರ ಪ್ರತಾಪ್ ಸಾಹಿ ಮಂಡಲ್ ನಿಜವಾಗಿಯೂ 11 ಡೋಸ್ ಲಸಿಕೆ ಪಡೆದಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎಂದು ವೇಳೆ ಆ ವ್ಯಕ್ತಿ 11 ಡೋಸ್ ಲಸಿಕೆ ಪಡೆದಿರುವುದು ನಿಜವಾದಲ್ಲಿ ಇಂತಹ ನಿರ್ಲಕ್ಷಕ್ಕೆ ಕಾರಣವಾಗಿರುವವರ ವಿರುದ್ದ ಕಠಿಣ ಕ್ರಮವನ್ನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಸರೇಳಲು ಇಚ್ಚಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೆಚ್ಚು ಜನರು ಇರುವ ಕಡೆ ಲಸಿಕೆ ಪಡೆಯಲು ಬಂದಾಗ ಹೀಗಾಗುತ್ತದೆ. ಮೊದಲು ಆಧಾರ್ ಕಾರ್ಡ್ ಹಾಗೂ ಫೋನ್ ನಂಬರ್ಗಳನ್ನು ಪಡೆಯಲಾಗುವುದು ನಂತರ ಡೇಟಾ ಎಂಟ್ರಿ ಮಾಡಿದ್ದಾಗ ಹೀಗಾಗಿರಬಹುದು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಆ ವ್ಯಕ್ತಿ ನಿಜವಾಗಿಯೂ 11 ಡೋಸ್ ಲಸಿಕೆ ಪಡೆದಿದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಸದ್ಯ ಸುದ್ದಿಯಲ್ಲಂತು ಇದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ ಅಲ್ಲಿಯವರೆಗೂ ಕಾದು ನೋಡೋಣ.

Tags: 11 ಡೋಸ್ ಲಸಿಕೆBJPCongress PartyCovid 19ಕರೋನಾಕೇಂದ್ರ ಆರೋಗ್ಯ ಇಲಾಖೆಕೋವಿಡ್-19ನರೇಂದ್ರ ಮೋದಿಬಿಜೆಪಿಬಿಹಾರ ಸರ್ಕಾರ
Previous Post

ಭದ್ರತಾ ಲೋಪ :‌ ಪ್ರಧಾನಿ ಸಮೀಪದಲ್ಲೇ ‘ಬಿಜೆಪಿ ಜಿಂದಾಬಾದ್’ ಎಂದು ಘೋಷಣೆ ಕೂಗುವ ವಿಡಿಯೋ  ವೈರಲ್

Next Post

ಮತ್ತೆ ಲಸಿಕೆ ತಗೊಳಿ ಅಂತಿರಲ್ಲ ನಮ್ ದೇಹಗಳೇನು ಕೆಮಿಕಲ್ ಪ್ಯಾಕ್ಟರಿನಾ?

Related Posts

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?
Top Story

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ನಟಿಗೆ ನಿರ್ಮಾಪಕರೊಬ್ಬರು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಧಾರವಾಹಿಯಲ್ಲಿ ನಟಿಸಿದ ನಟಿಗೆ ಸಂಭಾವನೆ ನೀಡದ ನಿರ್ಮಾಪಕರಿಂದ ವಂಚನೆ...

Read moreDetails
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
Next Post
ಮತ್ತೆ ಲಸಿಕೆ ತಗೊಳಿ ಅಂತಿರಲ್ಲ ನಮ್ ದೇಹಗಳೇನು ಕೆಮಿಕಲ್ ಪ್ಯಾಕ್ಟರಿನಾ?

ಮತ್ತೆ ಲಸಿಕೆ ತಗೊಳಿ ಅಂತಿರಲ್ಲ ನಮ್ ದೇಹಗಳೇನು ಕೆಮಿಕಲ್ ಪ್ಯಾಕ್ಟರಿನಾ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada