ರಾಜ್ಯದಲ್ಲಿ ಕೊವೀಡ್, ಓಮೈಕಾನ್ ನಿಯಂತ್ರಣ ವಿಚಾರವಾಗಿ ಇಂದು ಸಂಜೆ 6:30 ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯಲಿದೆ.
ರಾಜ್ಯದಲ್ಲಿ ಕೊವೀಡ್ ನಿಯಂತ್ರಣಕ್ಕೆ ಶಿಫಾರಸು ಕೇಳಿರುವ ಸಿಎಂ ಅವರು ತಜ್ಞರ ಸಮಿತಿಯು ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಸಿಎಂ ಅವರಿಗೆ ವರದಿ ಈಗಾಗಲೇ ಒಪ್ಪಿಸಲಾಗಿದೆ.
ಸಭೆಯಲ್ಲಿ ಲಾಕ್ ಡೌನ್ ಭವಿಷ್ಯ ನಿರ್ಧಾರ
ಮತ್ತೊಮ್ಮೆ ತಜ್ಞರ ಅಭಿಪ್ರಾಯ ಪಡೆದ ನಂತರ ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ಸರ್ಕಾರವು ಲಾಕ್ಡೌನ್ ಅಥವಾ ಕಠಿಣ ರೂಲ್ಸ್ ಜಾರಿಯ ಮಾರ್ಗ ಸೂಚಿ ಬಿಡುಗಡೆ ಸಾಧ್ಯತೆ ಇದೆ.

ಸಾರ್ವಜನಿಕ ಸಾರಿಗೆ 50% ಕಾರ್ಯಾಚರಣೆ ಅವಕಾಶ, ಬಸ್, ಮೆಟ್ರೋದಲ್ಲಿ 50% ಸೀಟು ಮಾತ್ರ ತುಂಬಲು ಅವಕಾಶ, ಕಾರ್ಖಾನೆಗಳು, ಐಟಿ-ಬಿಟಿ ಕಂಪನಿಗಳಿಗೆ 50% ಕಾರ್ಯಾಚರಣೆ ಅಥವಾ ವರ್ಕ್ ಫ್ರಮ್ ಹೋಂಗೆ ಸೂಚನೆ
ಹಾಗೆಯೇ ಸರ್ಕಾರಿ ಕಚೇರಿಗಳು, ಖಾಸಗೀ ಕಚೇರಿಗಳಲ್ಲಿ 50% ಕಾರ್ಯಾಚರಣೆ ಉಳಿದ 50% ವರ್ಕ್ ಫ್ರಮ್ ಹೋಂಗೆ ಸೂಚನೆ, ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಸೆಮಿ ಲಾಕ್ಡೌನ್ ಮಾಡುವ ಸಂಭವವಿದೆ.