ಶ್ರೀರಾಮ ಎಂದರೆ ತ್ಯಾಗ ಮತ್ತು ನೈತಿಕತೆ. ಆದರೆ ಇದನ್ನು ಬೈಪಾಸ್ ಮಾಡಿ ಬಿಜೆಪಿ,ಆರ್ ಎಸ್ ಎಸ್ ನಾಯಕರು ಹಾಗೂ ರಾಮಮಂದಿರ ನಿರ್ಮಾಣ ಟ್ರಸ್ಟ್ನ ಕೆಲವು ಪ್ರತಿನಿಧಿಗಳು ಸೇರಿಕೊಂಡು ರಾಮಮಂದಿರದ ಹೆಸರಲ್ಲಿ ಲೂಟಿ ಮಾಡಿದ್ದಾರೆ. ರಾಮನ ಹೆಸರಿನಲ್ಲಿ ಇಂಥದೊಂದು ಬೃಹತ್ ಭ್ರಷ್ಟಾಚಾರ ನಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಗಳು ಕೂಡ ಸಹಕಾರಿಯಾಗಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿದ ದೇಣಿಗೆಯ ಹೇಯ ದುರ್ಬಳಕೆ ಹಾಗೂ ದೇವಸ್ಥಾನದ ಜಮೀನು ಖರೀದಿಯಲ್ಲಿ ನಡೆದಿರುವ ಕೋಟಿ ಕೋಟಿ ಹಗರಣದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು. ಆ ಪ್ರಮುಖ ಅಂಶಗಳು ಈ ರೀತಿ ಇವೆ.
2 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ರಾಮಮಂದಿರ ನಿರ್ಮಾಣ ಟ್ರಸ್ಟ್ಗೆ 26,50,00,000 (26.50 ಕೋಟಿ) ರೂಪಾಯಿಗೆ ಮಾರಾಟ ಮಾಡಲಾಗಿದೆ. ದಲಿತರಿಂದ ಇತರರು ಭೂಮಿ ಖರೀದಿಸಲು ಕಾನೂನಿನಲ್ಲಿ ಅಗತ್ಯ ಇಲ್ಲ. ಆದರೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಸುತ್ತಾ ಇದ್ದ ದಲಿತರ ಜಮೀನನ್ನು ಬಲವಂತದಿಂದ ಕಿತ್ತುಕೊಳ್ಳಲಾಗಿದೆ.
ಬಾಬಾ ಹರಿದಾಸ್ ಅಲಿಯಾಸ್ ಹರೀಶ್ ಪಾಠಕ್ ಮತ್ತು ಅವರ ಪತ್ನಿ ಕುಸುಮ್ ಪಾಠಕ್ 2021ರ ಮಾರ್ಚ್ 18ರಂದು ಸಂಜೆ 7:10 ಗಂಟೆಗೆ 1.208 ಹೆಕ್ಟೇರ್ (12,080 ಚದರ ಮೀಟರ್) ಭೂಮಿಯನ್ನು ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿಗೆ ನೋಂದಾಯಿತ ಮಾರಾಟ ಪತ್ರದ ಮೂಲಕ 2 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಐದು ನಿಮಿಷಗಳ ನಂತರ, ಅಂದರೆ 2021ರ ಮಾರ್ಚ್ 18ರಂದು ಸಂಜೆ 7:15ಕ್ಕೆ ಅದೇ 12,080 ಚದರ ಮೀಟರ್ ಭೂಮಿಯನ್ನು ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿಯವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ 18,50,00,000 (18.5 ಕೋಟಿ) ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಎಲ್ಲಾ ದಾಖಲೆಗಳಿಗೆ ಅನಿಲ್ ಮಿಶ್ರಾ ಮತ್ತು ಹೃಷಿಕೇಶ್ ಉಪಾಧ್ಯಾಯ ಸಾಕ್ಷಿಯಾಗಿದ್ದಾರೆ. ಅನಿಲ್ ಮಿಶ್ರಾ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಪ್ರಾಂತೀಯ ಉಸ್ತುವಾರಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಜೀವ ಸದಸ್ಯರು. ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣ ಟ್ರಸ್ಟ್ನ ಸದಸ್ಯರನ್ನಾಗಿ ಮಾಡಿದ್ದಾರೆ. ಹೃಷಿಕೇಶ್ ಉಪಾಧ್ಯಾಯ ಅಯೋಧ್ಯೆಯ ಮೇಯರ್ ಮತ್ತು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ನಿಕಟವಾಗಿರುವ ಪ್ರಮುಖ ಬಿಜೆಪಿ ನಾಯಕ.
2021ರ ಮಾರ್ಚ್ 18 ರಂದು ರಾತ್ರಿ 7:10ರಿಂದ 7:15ರ ನಡುವೆ ಅಂದರೆ ಐದು ನಿಮಿಷಗಳ ನಡುವೆ ರಾಮ ಮಂದಿರ ನಿರ್ಮಾಣಕ್ಕಾಗಿ ಖರೀದಿಸಲಾಗುತ್ತಿರುವ ಭೂಮಿಯ ಬೆಲೆ 2 ಕೋಟಿಯಿಂದ 18.5 ಕೋಟಿ ಆಗುತ್ತದೆ. ಪ್ರಪಂಚದ ಇತಿಹಾಸದಲ್ಲಿ ಪ್ರತಿ ಸೆಕೆಂಡಿಗೆ 5,50,000 ರೂಪಾಯಿಗಳಂತೆ ಬೆಳೆಯುತ್ತಿರುವ ಭೂಮಿಯ ವಿಶಿಷ್ಟ ಬೆಲೆ ಇದು. ಕೋಟಿಗಟ್ಟಲೆ ಭಾರತೀಯರು ನಂಬಿಕೆಯಿಂದ ಮಂದಿರ ನಿರ್ಮಾಣಕ್ಕೆ ನೀಡಿದ ಹಣದಿಂದ ಭ್ರಷ್ಟಾಚಾರ ನಡೆದಿದೆ.
ಅಚ್ಚರಿಯ ಸಂಗತಿ ಎಂದರೆ ರವಿಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಅವರಿಗೆ ಸಂಜೆ 5:22ಕ್ಕೆ ಭೂಮಿ ಖರೀದಿಗೆ ಮುದ್ರಾಂಕ ಶುಲ್ಕ ಪಾವತಿಸಿ ಇ-ಸ್ಟ್ಯಾಂಪ್ ಪ್ರಮಾಣಪತ್ರ ನೀಡಲಾಗಿದೆ. ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಅವರಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖರೀದಿಸಿದ ಭೂಮಿಗೆ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಇ-ಸ್ಟ್ಯಾಂಪ್ ಪ್ರಮಾಣಪತ್ರವನ್ನು ಸಂಜೆ 5:11ಕ್ಕೆ ನೀಡಲಾಗಿದೆ. ಅಂದರೆ, ಟ್ರಸ್ಟ್ ಈಗಾಗಲೇ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಅವರಿಂದ ಭೂಮಿ ಖರೀದಿಸಲು ಮುದ್ರಾಂಕ ಶುಲ್ಕವನ್ನು ಠೇವಣಿ ಮಾಡಿತ್ತು.

ಆ ಭೂಮಿಯನ್ನು ಖರೀದಿಸಲು ಸ್ಟಾಂಪ್ ಪೇಪರ್ ಅನ್ನು ಮೊದಲೇ ಖರೀದಿಸುತ್ತಾರೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್ ಮತ್ತು ಅದರ ಕಾರ್ಯದರ್ಶಿ ಚಂಪತ್ ರೈ ಅವರಿಗೆ ಹೇಗೆ ಗೊತ್ತಾಯಿತು? ಸಂಜೆ 5:22 ಮತ್ತು ಸಂಜೆ 7:10 ಗಂಟೆಗೆ ನೋಂದಾವಣೆ ಮಾಡಲಾಗುತ್ತದೆ ಮತ್ತು ಐದು ನಿಮಿಷಗಳ ನಂತರ 2 ಕೋಟಿಗೆ ಖರೀದಿಸಿದ ಭೂಮಿಯನ್ನು ರಾಮಮಂದಿರ ಟ್ರಸ್ಟ್ಗೆ ₹ 18.5 ಕೋಟಿಗೆ ಮಾರಾಟ ಮಾಡುತ್ತದೆ ಎಂದು ವಿವರಿಸಿದ ಪ್ರಿಯಾಂಕಾ ಗಾಂಧಿ ಅವರು ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸೇಲ್ ಡೀಡ್ ನಲ್ಲಿ ಕೇವಲ 2 ಕೋಟಿಗೆ ಖರೀದಿಸಿದ ಭೂಮಿಯನ್ನು ಶ್ರೀ ರಾಮಮಂದಿರ ನಿರ್ಮಾಣ ಟ್ರಸ್ಟ್ಗೆ 26,50,00,000 (ರೂ. 26.50 ಕೋಟಿ) ಮಾರಾಟ ಮಾಡಲು ಕಾರಣವೇನು?
ಮಾರ್ಚ್ 18, 2021ರಂದು ಸಂಜೆ 7:10 ಗಂಟೆಗೆ 12,080 ಚದರ ಮೀಟರ್ ಭೂಮಿಯ ಸೇಲ್ ಡೀಡ್ ನಿಂದ 2 ಕೋಟಿಗೆ ಖರೀದಿಸಲಾಗಿದೆ ಮತ್ತು ರಾಮ ಜನ್ಮಭೂಮಿ ಟ್ರಸ್ಟ್ನ ಟ್ರಸ್ಟಿ ಅನಿಲ್ ಮಿಶ್ರಾ ಅವರು ಸೇಲ್ ಡೀಡ್ ನಲ್ಲಿ ಸಾಕ್ಷಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವೇ? ಸಂಜೆ 7:15 ಕ್ಕೆ ಕೇವಲ 5 ನಿಮಿಷಗಳ ನಂತರ ರಾಮ ಜನ್ಮಭೂಮಿ ಟ್ರಸ್ಟ್ ಅದೇ ಭೂಮಿಯನ್ನು 18.50 ಕೋಟಿಗೆ ಏಕೆ ಖರೀದಿಸಿದ್ದು ಗೊಂದಲ ಸ್ಪಷ್ಟವಿಲ್ಲವೇ?
ಮಾರ್ಚ್ 18, 2021 ರಂದು ಸಂಜೆ 6.51 ಗಂಟೆಗೆ 10,370 ವರ್ಮ್ ಮೀಟರ್ ಭೂಮಿಯನ್ನು ರಾಮ ಜನ್ಮಭೂಮಿ ಟ್ರಸ್ಟ್ 8 ಕೋಟಿ ರೂ.ಗೆ ಮಂಜೂರು ಮಾಡಿದೆ. ನಂತರ 23 ನಿಮಿಷಗಳ ನಂತರ ಮಾರ್ಚ್ 18, 2021 ರಂದು ಸಂಜೆ 7:15 ಗಂಟೆಗೆ ಅದೇ ಪ್ರದೇಶದ 12,080 ಚದರ ಮೀಟರ್ ಭೂಮಿಯನ್ನು ರಾಮಜ್ ಜನ್ಮಭೂಮಿ ಟ್ರಸ್ಟ್ 18.50 ಕೋಟಿ ರೂ.ಗೆ ಹೇಗೆ ಖರೀದಿಸಿತು?
79 ದಿನಗಳ ಅಂತರದಲ್ಲಿ ದೀಪ್ ನಾರಾಯಣ್ ಈ ಭೂಮಿಯನ್ನು ಚಂಪತ್ ರಾಯ್ ಅವರಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮೂಲಕ 2,50,00,000 ರೂ.ಗೆ ಮಾರಾಟ ಮಾಡಿದರು. ಅಂದರೆ, ಜಮೀನಿನ ಖರೀದಿ ದರ 28,090 ರೂ. ಪ್ರತಿ ಚದರ ಮೀಟರ್ಗೆ, ಸೇಲ್ ಡೀಡ್ ಪ್ರಕಾರ ಭೂಮಿಯ ಕಲೆಕ್ಟರ್ ದರವು 4,000 ರೂ. ಆಗಿದೆ. ಪ್ರತಿ ಚದರ ಮೀ. 80 ದಿನಗಳಲ್ಲಿ ಭೂಮಿಯ ಬೆಲೆ 1250 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ರತಿ ಚದರ ಮೀಟರ್ಗೆ 2247 ರೂ.ಗೆ ಬಿಜೆಪಿ ಮುಖಂಡ ದೀಪ್ ನಾರಾಯಣ್ ಖರೀದಿಸಿದ ಭೂಮಿಯನ್ನು 80 ದಿನಗಳಲ್ಲಿ ರಾಮಮಂದಿರ ನಿರ್ಮಾಣ ಟ್ರಸ್ಟ್ಗೆ ಪ್ರತಿ ಚದರ ಮೀಟರ್ಗೆ ರೂ.28,090 ದರದಲ್ಲಿ ಮಾರಾಟ ಮಾಡಲಾಗಿದೆ. ಇದು ಹಗರಣವಲ್ಲದೆ ಮತ್ತೇನು?
ರಾಮಮಂದಿರ ನಿರ್ಮಾಣಕ್ಕೆ ಬಂದಿದ್ದ ದೇಣಿಗೆಯು ಲೂಟಿ ಆಗಿರುವ ಬಗ್ಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಏಕೆ ಮೌನವಾಗಿದ್ದಾರೆ. ರಾಮಮಂದಿರ ನಿರ್ಮಾಣದಲ್ಲಿ ನಡೆದಿರುವ ಭ್ರಷ್ಟಾಚಾರದ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದೇ? ರಾಮ ಮಂದಿರ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರನ್ನು ತನಿಖೆ ಮಾಡಲಾಗುತ್ತದೆಯೇ? ಅಯೋಧ್ಯೆಯ ಬಿಜೆಪಿ ಮೇಯರ್, ಬಿಜೆಪಿ ಶಾಸಕರು ಮತ್ತು ಅವರ ನಾಯಕರ ವಿರುದ್ಧ ತನಿಖೆ ನಡೆಯಲಿದೆಯೇ? ರಾಮ ಮಂದಿರ ನಿರ್ಮಾಣ ಟ್ರಸ್ಟ್ನಲ್ಲಿ ದೇಣಿಗೆ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸುವುದೇ? ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.