ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರ ಟ್ವೀಟರ್ ಖಾತೆ ಹ್ಯಾಕ್ ಮಾಡಿ ಬಿಟ್ ಕಾಯಿನ್ ಸಂಬಂಧ ಟ್ವೀಟ್ ಮಾಡಲಾಗಿದೆ.
ಹೌದು, .ಬುಧವಾರ ರಾತ್ರಿ ಸುಮಾರು ಮೂರು ಗಂಟೆಗೆ ನರೇಂದ್ರ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿತ್ತು. ಈ ಖಾತೆಯನ್ನ ಜಾನ್ ವಿಕ್ (hckindia@tutanota.com) ಮೂಲಕ ಹ್ಯಾಕ್ ಮಾಡಲಾಗಿದೆ. ಕೂಡಲೇ ಎಚ್ಚೆತ್ತ ಟ್ವಿಟರ್ ಸಂಸ್ಥೆ ಟ್ವಿಟರ್ ಖಾತೆ ಸರಿ ಮಾಡಿದೆ.
ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರ ಟ್ವೀಟರ್ ಖಾತೆ ಹ್ಯಾಕ್ ಮಾಡಿ, ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆಗೆ ಕಾನೂನು ಬದ್ದಗೊಳಿಸಲಾಗಿದೆ. ಸರ್ಕಾರ ಅಧಿಕೃತವಾಗಿ 500 ಬಿಟ್ ಕಾಯಿನ್ ಗಳನ್ನು ಖರೀದಿಸಿದೆ. ಇವುಗಳನ್ನು ದೇಶದ ಪ್ರಜೆಗಳಿಗೆ ಹಂಚುವುದಾಗಿ ಪ್ರಧಾನಿ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.
ಅಲ್ಲದೆ, ಪ್ರಧಾನಿ ಖಾತೆಯಿಂದ ಸರಣಿ ಟ್ವೀಟ್ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರ ಕೋವಿಡ್ 19 ಪರಿಹಾರ ನಿಧಿಗೆ ದೇಣಿಗೆ ನೀಡಿ. ಇದೀಗ ಭಾರತ ಕ್ರಿಪ್ಟೋಕರೆನ್ಸಿಯನ್ನು ಅಳವಡಿಸಿಕೊಂಡಿದೆ. ದಯವಿಟ್ಟು ದೇಣಿಗೆ ನೀಡಿ ಎಂತಲೂ ಬರೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಖಾತೆಯಿಂದ ಈ ಹಿಂದೆ ಮಾಡಿದ್ದ ಟ್ವೀಟ್ ಪರಿಗಣಿಸದಂತೆ ಹಾಗೂ ಪ್ರಧಾನಿ ಮೋದಿ ಖಾತೆಯಿಂದ ಬಿಟ್ ಕಾಯಿನ್ ಸಂಬಂಧ ಮಾಡಲಾದ ಟ್ವೀಟರ್ ಲಿಂಕ್ ಶೇರ್ ಮಾಡದಂತೆ ಮನವಿ ಮಾಡಿದೆ.
ಎಲ್ಲಾ ಟ್ವೀಟ್ಗಳನ್ನು ಸದ್ಯ ಡಿಲೀಟ್ ಮಾಡಲಾಗಿದ್ದು, ಪ್ರಧಾನಿ ಮೋದಿ ಖಾತೆಯನ್ನು ಮರಳಿ ಪಡೆಯಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯರ ವೈಯಕ್ತಿಕ ವೆಬ್ ಸೈಟ್ ಗೆ ಲಿಂಕ್ ಆಗಿರುವ ಈ ಟ್ವಿಟ್ಟರ್ ಖಾತೆ ಸುಮಾರು 2.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ. ಪ್ರಧಾನಿ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಆ ಖಾತೆಯನ್ನು 6.1 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ.