ದುಬಾರಿ ದುನಿಯಾದಿಂದ ಕಂಗೆಟ್ಟಿರೋ ಮಂದಿಗೆ ನಾಳೆಯಿಂದ ಆಟೋಚಾಲಕರೂ ಶಾಕ್ ನೀಡಲಿದ್ದಾರೆ. ರಾಜಧಾನಿಯಲ್ಲಿ ನಾಳೆಯಿಂದಲೇ ಹೊಸ ಆಟೋ ದರ ಜಾರಿಗೆ ಬರ್ತಿದ್ದು, ಜನರ ಜೇಬಿಗೆ ಕತ್ತರಿ ಬೀಳಲಿದೆ. ಅತ್ತ 8 ವರ್ಷಗಳ ಬಳಿಕ ಆಟೋ ಚಾಲಕರ ಮೊಗದಲ್ಲಿ ಸಂತಸ ಮೂಡಿದೆ.
ನಾಳೆಯಿಂದ ಅಧಿಕೃತವಾಗಿ ಆಟೋ ದರ ಏರಿಕೆ.!!
ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಕಟದಿಂದ ಹೊರಬರಲಾಗದ ಗ್ರಾಹಕನಿಗೆ ನಾಳೆಯಿಂದ ಆಟೋ ಚಾಲಕರು ಮತ್ತೊಂದು ಶಾಕ್ ನೀಡಲಿದ್ದಾರೆ. ನಾಳೆಯಿಂದ ಬೆಂಗಳೂರಿನಾದ್ಯಂತ ಆಟೋ ದರ ಏರಿಕೆಯಾಗಲಿದೆ. 8 ವರ್ಷಗಳಿಂದ ಆಟೋದರ ಏರಿಕೆಗೆ ಬ್ರೇಕ್ ಹಾಕಿದ್ದ ಜಿಲ್ಲಾಡಳಿತ ಕೊನೆಗೂ ಆಟೋ ದರ ಏರಿಕೆಗೆ ಅಸ್ತು ಎಂದಿತ್ತು. ಈ ಹಿನ್ನಲೆ ಆಟೋವನ್ನೇ ನಂಬಿ ಓಡಾಡುವರಿಗೆ ಕೊಂಚ ಹೆಚ್ಚು ಹೊರೆಯಾಗಲಿದೆ.
ಪರಿಷ್ಕೃತ ಆಟೋ ದರ.!!
– ಮೊದಲ 2 kmಗೆ 30 ರೂ.
– ನಂತರದ ಪ್ರತಿ km ಗೆ 15 ರೂ.
– ಮೊದಲ ಐದು ನಿಮಿಷ ಕಾಯುವಿಕೆ ಉಚಿತ
– ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.
– 20 kg ವರೆಗೆ ಲಗೇಜ್ ಸಾಗಣೆ ಉಚಿತ
– 21 kg ಇಂದ 50 kg ವರೆಗೆ 5 ರೂ.
– ರಾತ್ರಿ ಮೀಟರ್ ಮೇಲೆ ಅರ್ಧದಷ್ಟು ಹೆಚ್ಚು ಪಡೆಯಲು ಅವಕಾಶ
ಹಿಂದೆ ಮಿನಿಮಮ್ ಚಾರ್ಚ್ 25 ರೂ ಇತ್ತು. ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5ರೂ ಸೇರ್ಪಡೆಯಾಗಲಿದ್ದು, ನಾಳೆಯಿಂದ ಮಿನಿಮಾಮ್ ಚಾರ್ಜ್ 30ಕ್ಕೆ ಏರಿಕೆಯಾಗಲಿದೆ. ಜೊತೆಗೆ ಪ್ರತೀ ಕಿ.ಮೀಗೆ ಹಿಂದೆ 13 ರೂಪಾಯಿ ದರ ಇತ್ತು, ಸದ್ಯ ಮೀಟರ್ ದರವನ್ನು ಸಹ ಏರಿಕೆ ಮಾಡಿದ್ದು ಪ್ರತೀ ಕಿಲೋಮೀಟರ್ಗೆ 15ರೂ ಆಗಲಿದೆ. ಅದೇರೀತಿ ವೈಟಿಂಗ್ ಚಾರ್ಜ್ ನಿಮಿಷಕ್ಕೆ 5 ರೂ ನಿಗದಿ ಮಾಡಲಾಗಿದ್ದು 20 ಕೆಜಿ ಲಗೇಜ್ ಉಚಿತ ವಿರಲಿದೆ. 21 ಕೆಜಿಗಿಂತ ತೂಕದ ಲಗೇಜ್ಗೆ 5 ರೂ ನಿಗಧಿ ಮಾಡಲಾಗಿದೆ. ಹಾಗೇ ರಾತ್ರಿ ಈ ಹಿಂದಿನಂತೆ ಮೀಟರ್ ಮೇಲೆ ಅರ್ಧದಷ್ಟು ಹೆಚ್ಚುವರಿ ದರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2013 ರಲ್ಲಿ ಈ ಹಿಂದೆ ಆಟೋ ದರ ಏರಿಕೆ ಮಾಡಲಾಗಿತ್ತು. ಆದಾದ ಬಳಿಕ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದ್ರು ಜಿಲ್ಲಾಡಳಿತ ಮಾತ್ರ ಆಟೋದರ ಏರಿಕೆಗೆ ಮನಸ್ಸು ಮಾಡಿರಲಿಲ್ಲ. 8 ವರ್ಷಗಳ ಬಳಿಕ ಆಟೋ ಚಾಲಕರು ಮತ್ತು ಮಾಲೀಕರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿ ಆಟೋ ಪ್ರಯಾಣ ದರ ಏರಿಕೆಗೆ ಅಸ್ತು ಎಂದಿದೆ, ಸದ್ಯ ದರ ಏರಿಕೆ ಹಿನ್ನೆಲೆ ಜಿಲ್ಲಾಡಳಿತ ನಿರ್ಧಾರಕ್ಕೆ ಆಟೋ ಸಂಘಟನೆಗಳು ಸಂತಸ ವ್ಯಕ್ತಪಡಿಸಿದ್ದು, ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ನಾಳೆಯಿಂದ ಇತರೆ ವಸ್ತುಗಳಂತೆ ಆಟೋ ಪ್ರಯಾಣ ದರವು ಏರಿಕೆಯಾಗುತ್ತಿದೆ. ಇದು ಆಟೋ ನಂಬಿ ಓಡಾಡುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದಂತೂ ಸತ್ಯ.