• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಎಂಎಲ್ಸಿ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣ; ಸಿಡಿದೆದ್ದ ಕಾರ್ಯಕರ್ತರು

ನಚಿಕೇತು by ನಚಿಕೇತು
November 26, 2021
in ಕರ್ನಾಟಕ, ರಾಜಕೀಯ
0
ಎಂಎಲ್ಸಿ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣ; ಸಿಡಿದೆದ್ದ ಕಾರ್ಯಕರ್ತರು
Share on WhatsAppShare on FacebookShare on Telegram

ಪರಿಷತ್‌ ಫೈಟ್‌ನಲ್ಲಿ ಮೂರು ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ಭಾರೀ ಜಿದ್ದಿಗೆ ಇಳಿದಿವೆ. ಈಗಾಗಲೇ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿವೆ. ಆದ್ರೀಗ ಕಾಂಗ್ರೆಸ್‌ನಲ್ಲಿ ಕ್ಯಾಂಡಿಡೇಟ್‌ಗಳ ವಿಚಾರವೇ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಹಂಚಿಕೆ ವೇಳೆ ಕುಟುಂಬ ರಾಜಕೀಯ ಮಾಡಿದ್ದಾರೆ ಅಂತಾ ಕೈನಲ್ಲಿ ಕಿಡಿ ಹೊತ್ತಿದೆ.

ADVERTISEMENT

ಡಿಸೆಂಬರ್ 10ಕ್ಕೆ ನಡೆಯಲಿರೋ ವಿಧಾನಪರಿಷತ್ ಚುಬಾವಣೆಗೆ ತ್ರಿಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಆದ್ರೀಗ ಇದೇ ವೇಳೆ ಕಾಂಗ್ರೆಸ್‌ನಲ್ಲಿ ಪರಿಷತ್‌ ಚುನಾವಣೆ ವಿಚಾರಕ್ಕೆ ಕಿಡಿಯೊಂದು ಹೊತ್ತಿದೆ. ಎಂಎಲ್ಸಿ ಟಿಕೆಟ್ ಹಂಚಿಕೆ ವೇಳೆ ಸ್ವಜನಪಕ್ಷಪಾತ ಮಾಡಲಾಗಿದೆ ಅಂತಾ ಕೈ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಕಿಡಿ ಕಾರ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಟ್ಯಾಗ್ ಮಾಡಿ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ. ಇದರ ಮಧ್ಯೆ ಕೈಪಡೆಯ ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ನಾಯಕರೂ ಕೂಡಾ ಟೀಕೆ ಮಾಡ್ತಿದ್ದಾರೆ.

ಪರಿಷತ್ ಟಿಕೆಟ್ ಹಂಚಿಕೆ ವೇಳೆ ಕಾಂಗ್ರೆಸ್‌ ಪ್ರಭಾವಿ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ ಅನ್ನೋದು ಕಾರ್ಯಕರ್ತರ ಅಸಮಾಧಾನ. ಹಾಗಾದ್ರೆ, ಯಾರೆಲ್ಲಾ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ ಇಲ್ಲಿದೆ ಮಾಹಿತಿ.

ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ!

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೋದರ ಸಂಬಂಧಿ ಎಸ್‌. ರವಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪರಿಷತ್ ಟಿಕೆಟ್ ನೀಡಲಾಗಿದೆ. ಇತ್ತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಚನ್ನರಾಜ್ ಹಟ್ಟಿಹೊಳಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಅಲ್ಲದೇ ಶಾಸಕ ರಾಜಶೇಖರ್ ಹುಮ್ನಾಬಾದ್ ಸಹೋದರ ಭೀಮರಾವ್ ಪಾಟೀಲ್‌ಗೆ ಬೀದರ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇನ್ನು ಮಾಜಿ ಸಚಿವ ಎಂ.ಬಿ. ಪಾಟೀಲ್ ಸಹೋದರ ಸುನೀಲ್ ಗೌಡ ಪಾಟೀಲ್‌ಗೆ ವಿಜಯಪು-ಬಾಗಲಕೋಟೆ, ರಾಯಚೂರು-ಕೊಪ್ಪಳ ಕ್ಷೇತ್ರದಿಂದ ಶಾಸಕ ಅಮರೇಗೌಡ ಬಯ್ಯಾಪುರ ಅಣ್ಣನ ಮಗ ಶರಣೇಗೌಡ ಬಯ್ಯಾಪುರಗೆ ಟಿಕೆಟ್ ನೀಡಲಾಗಿದೆ.

ಈ ಎಲ್ಲಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿರೋದು ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಳ್ಳೋಕೆ ಕಾರಣವಾಗಿದೆ. ಹೀಗಾಗಿ ನೇರವಾಗಿ ತಮ್ಮ ಪಕ್ಷದ ನಾಯಕರ ವಿರುದ್ಧವೇ ಕಿಡಿ ಕಾರುತ್ತಿದ್ದಾರೆ. ಈ ಅಸಮಾಧಾನದ ಬೆಂಕಿ ಕೈ ಹೈಕಮಾಂಡ್‌ವರೆಗೂ ತಲುಪಿದೆ.

ಪಕ್ಷದ ವಿರುದ್ಧ ಅಸಮಾಧಾನ ಸ್ಫೋಟ

ಕುಟುಂಬಸ್ಥರಿಗೆ ವಿಧಾನ ಪರಿಷತ್ ಟಿಕೆಟ್ ಕೊಟ್ಟಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಕೈಪಡೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬಹಿರಂಗವಾಗಿಯೇ ಪ್ರಭಾಕರ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ, NSUI ಮಾಜಿ ಅಧ್ಯಕ್ಷರಾಗಿರೋ ಪ್ರಭಾಕರ ರೆಡ್ಡಿ ಪಕ್ಷದ ವರಿಷ್ಠರು, ರಾಜ್ಯ ನಾಯಕರಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಕುಟುಂಬ ರಾಜಕೀಯ ಪಕ್ಷದ ಪಡಸಾಲೆಯಲ್ಲೇ ಚರ್ಚೆಗೆ ಗ್ರಾಸವಾಗಿದೆ.
ಇಷ್ಟು ದಿನ ಜೆಡಿಎಸ್‌ ವಿರುದ್ಧ ಕುಟುಂಬ ರಾಜಕೀಯದ ಆರೋಪ ಆಗಾಗ ಕೇಳಿ ಬರ್ತಿತ್ತು. ಇದೀಗ ಕಾಂಗ್ರೆಸ್‌ನಲ್ಲಿ ಸ್ವಜನಪಕ್ಷಪಾತದ ಕಿಡಿ ಹೊತ್ತಿಕೊಂಡಿದೆ. ಇದು ಕಾಂಗ್ರೆಸ್ ಪರಿಷತ್‌ ಚುನಾವಣಾ ಫಲಿತಾಂಶಕ್ಕೆ ಹೊಡೆತ ಕೊಡುತ್ತಾ? ಕಾದು ನೋಡಬೇಕು.

Tags: Congress family politics in MLC ticket allocation
Previous Post

ವಿಜಯಪುರ-ಬಾಗಲಕೋಟೆ: ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲರಿಗೆ ಎಂಎಲ್ಸಿ ಟಿಕೆಟ್ ತಪ್ಪಿಸಿದ ಎಂ.ಬಿ. ಪಾಟೀಲ್

Next Post

ಕೋವಿಡ್ ಸೂಪರ್ ಸ್ಪ್ರೆಡರ್ ಆದ ಧಾರವಾಡದ ಎಸ್ಡಿಎಂ ಮೆಡಿಕಲ್ ಕಾಲೇಜು: ಈವರೆಗೆ 182 ಸೋಂಕಿತರು

Related Posts

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   
ಕರ್ನಾಟಕ

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

by ಪ್ರತಿಧ್ವನಿ
May 1, 2026
0

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆಡಿ ಚಿತ್ರ ಏಪ್ರಿಲ್ 30ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
Next Post
ಕೋವಿಡ್ ಸೂಪರ್ ಸ್ಪ್ರೆಡರ್ ಆದ ಧಾರವಾಡದ ಎಸ್ಡಿಎಂ ಮೆಡಿಕಲ್ ಕಾಲೇಜು: ಈವರೆಗೆ 182 ಸೋಂಕಿತರು

ಕೋವಿಡ್ ಸೂಪರ್ ಸ್ಪ್ರೆಡರ್ ಆದ ಧಾರವಾಡದ ಎಸ್ಡಿಎಂ ಮೆಡಿಕಲ್ ಕಾಲೇಜು: ಈವರೆಗೆ 182 ಸೋಂಕಿತರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada