ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆ ಪಿಯುಸಿ ಪರೀಕ್ಷಾ ಸಂಬಂಧಿ ಶಿಕ್ಷಣ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಪರೀಕ್ಷೆ ಕುರಿತು ಇವತ್ತು ಗುರುವಾರ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಡಿಸೆಂಬರ್ 9, 2021ರಿಂದ ಪರೀಕ್ಷೆಗಳು ನಡೆಯಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ನವೆಂಬರ್ 29, 2021ರಿಂದ ರಾಜ್ಯದಲ್ಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿಗದಿ ಪಡಿಸಲಾಗಿತ್ತು. ಆದರೆ, ಸಧ್ಯ ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಮುಂದೂಡಿದ್ದು, ಹೊಸ ದಿನಾಂಕ ಪ್ರಕಟಿಸಿದೆ.
ಹೌದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿದ್ದು, ಹೊಸ ದಿನಾಂಕ ಪ್ರಕಟಿಸಿದೆ. ಅದ್ರಂತೆ, ಈ ಮಧ್ಯಂತರ ಪರೀಕ್ಷೆಗಳು ಡಿಸೆಂಬರ್ 9 ರಿಂದ ಡಿಸೆಂಬರ್ 23ರವರೆಗೆ ನಡೆಯಲಿವೆ.
ಪ್ರಶ್ನೆ ಪತ್ರಿಕೆ ವಿತರಣೆ ಮಾಡುವುದು ಆಯಾ ಕಾಲೇಜುಗಳ ಪ್ರಾಂಶುಪಾಲರದ್ದೇ ಆಗಿರುತ್ತದೆ.
ಪ್ರಥಮ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಆಯಾ ಕಾಲೇಜು ಹಂತದಲ್ಲಿಯೇ ನಡೆಯಲಿದೆ…
ಪ್ರಾಂಶುಪಾಲರು ತಮ್ಮ ಉಸ್ತುವಾರಿಯಲ್ಲಿ ಸಂಬಂಧಪಟ್ಟ ವಿಷಯಗಳ ಉಪನ್ಯಾಸಕರಿಂದ ಪ್ರಶ್ನೆ ಪತ್ರಿಕೆಗಳನ್ನ ಸಿದ್ಧಪಡಿಸಬೇಕು…
ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡಿಸುವುದು, ಅಂಕಗಳನ್ನ ತಿಳಿಸಿ, ಪರೀಕ್ಷೆ ಮುಗಿದ ಮೇಲೆ ಕಾರ್ಯನಿರತ 15 ದಿನಗಳಒಳಗೆ SATS portal ನಲ್ಲಿ ರಿಜಿಸ್ಟರ್ ಮಾಡಬೇಕು…
ಪರೀಕ್ಷೆಗಳು ರಾಜ್ಯದಾದ್ಯಂತ ನಿಯೋಜಿತ ಕೇಂದ್ರಗಳಲ್ಲಿ ನಡೆಯಲಿವೆ. ನಿಗದಿತ ವರದಿ ಮಾಡುವ ಸಮಯಕ್ಕೆ ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರಗಳನ್ನ ತಲುಪಬೇಕು. ಇನ್ನು ಪರೀಕ್ಷೆಗಳನ್ನ ಕೋವಿಡ್ ನಡುವೆ ನಡೆಸುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೋವಿಡ್ ಶಿಷ್ಟಾಚಾರಗಳನ್ನ ಅನುಸರಿಸಬೇಕು ಮತ್ತು ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಬೇಕು.
ಸುತ್ತೋಲೆಯ ವಿವರ ಇಲ್ಲಿದೆ.