• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಟ್‌ಕಾಯಿನ್‌ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಸುಮ್ಮನೆ ಬಿಡುವುದಿಲ್ಲ: ಬಸವರಾಜ್‌ ಬೊಮ್ಮಾಯಿ

Any Mind by Any Mind
November 14, 2021
in ಕರ್ನಾಟಕ, ರಾಜಕೀಯ
0
ಬಿಟ್‌ಕಾಯಿನ್‌ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಸುಮ್ಮನೆ ಬಿಡುವುದಿಲ್ಲ: ಬಸವರಾಜ್‌ ಬೊಮ್ಮಾಯಿ
Share on WhatsAppShare on FacebookShare on Telegram

ರಾಜ್ಯ ರಾಜಕೀಯದಲ್ಲಿ ಭಾರೀ ಗದ್ದಲ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣವು ರಾಷ್ಟ್ರೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ದಾರಿ ಮಾಡಿ ಕೊಟ್ಟಿದ್ದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆರೋಪ, ಪ್ರತ್ಯಾರೋಪಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ADVERTISEMENT

ಶನಿವಾರ ಕಾಂಗ್ರೆಸ್ ಪಕ್ಷ ಮಾಡಿದ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಅಸಲಿಗೆ ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದೆ. ಇತ್ತ ಬೆಂಗಳೂರು ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ತನಿಖೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ “ಯಾವುದೇ ಸ್ವರೂಪ ಅಥವಾ ಆಯಾಮದ ಯಾವುದೇ ಹಗರಣವು ಸಂಪೂರ್ಣವಾಗಿ ನಡೆದಿಲ್ಲ. ಆದ್ದರಿಂದ ಈ ಹಗರಣದಲ್ಲಿ ಯಾರದು ಪಾತ್ರವಿಲ್ಲ ಇದು ಕೇವಲ ಕಾಂಗ್ರೆಸ್ ಪಕ್ಷದ ವಿಕೃತ ಕಲ್ಪನೆಯಾಗಿದೆ. ಆದಾಗ್ಯೂ, ಕಾಂಗ್ರೆಸ್ನವರ ಪ್ರಕಾರ ಹೊಸ ಪಾತ್ರಧಾರಿಗಳು ಹುಟ್ಟಿಕೊಂಡಿರುವುದು ಅವರ ಕಲ್ಪನ ಲೋಕದಲ್ಲಿರಬೇಕು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಿ ಪೋರ್ಟಲ್ಗಳನ್ನು ಹ್ಯಾಕ್ ಮಾಡಿ, ಕ್ರಿಪ್ಟೋಕರೆನ್ಸಿ ಬಳಸಿ ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಖರೀದಿಸಿರುವ ಆರೋಪದ ಮೇಲೆ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಒಂಬತ್ತು ಕೋಟಿ ಮೌಲ್ಯದ ಬಿಟ್ಕಾಯಿನ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ನಂತರ ‘ಪ್ರಭಾವಿ ರಾಜಕಾರಣಿಗಳು’ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಇನ್ನು ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಐಸಿಸಿ ವಕ್ತಾರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ.

1.      2016ರಿಂದಲೂ ಈ ವಿಚಾರ ಇತ್ತು, ಅವಾಗ ನಿಮದೆ ಸರ್ಕಾರ ಅಧಿಕಾರದಲ್ಲಿತ್ತು, ಅವಾಗ ನಿಮ್ಮ ಸಿಎಂ ಮತ್ತು ಮಂತ್ರಿ ಗಳು ತಾನೇ ಇದದ್ದು ಯಾಕೆ ಈ ಬಗ್ಗೆ ನೀವು ಕೇಳಿಲ್ಲ..?

2.      2018ರಲ್ಲಿ ಶ್ರೀಕಿಯನ್ನು ಹಿಡಿದಿದ್ರಿ.. ಆಮೇಲೆ ನೀವೇ ಬಿಟ್ಟುಕಳುಹಿಸಿದ್ರಿ. ಯಾಕೆ ಅವಾಗ ನೀವು ಅವನನ್ನು ವಿಚಾರಣೆ ಮಾಡಲಿಲ್ಲ..?

3.      ಟ್ವಿಟರ್ ಆಧಾರದ ಮೇಲೆ ಹಣ ವರ್ಗಾವಣೆ ಬಗ್ಗೆ ಕೇಳಿದ್ದೀರಿ..? ಟ್ವಿಟರ್ ದು ಒಂದು ವಿಷಯವಾ..? ಅದರ ಬಗ್ಗೆ ಸೂಕ್ತ ದಾಖಲೆ ಇಟ್ಟು ಚರ್ಚೆ ಮಾಡಿ…

4.      ಯಾರೋ ಇಬ್ಬರು ಪ್ರಭಾವಿಗಳು ಅಂತೀರಲ್ಲ. ಹೆಸರೇಳಿ..? ಶ್ರೀಕಿಯನ್ನು ಬಿಟ್ಟುಕಳಿಸಿದವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಆಕ್ರೋಶಭರಿತರಾಗಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ಹಗರಣದಲ್ಲಿ ಯಾರೇ ಶಾಮೀಲಾಗಿದ್ದರು ಬಿಡುವುದಿಲ್ಲ ನಮ್ಮ ಸರ್ಕಾರವೇ ಈ ಬಿಟ್ ಕಾಯಿನ್ ಹಗರಣವನ್ನ ಬಯಲಿಗೆಳದಿದ್ದು ಈ ಬಗ್ಗೆ ಜಾರಿ ನಿರ್ದೇಶಾನಾಲಯವು ತನಿಖೆ ನಡೆಸುತ್ತಿದ್ದು ನಮ್ಮ ಕಡೆಯಿಂದ ಅಗತ್ಯ ಮಾಹಿತಿಯನ್ನು ನೀಡಲಾಗಿದೆ. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ರು ಅಂತಹವರನ್ನು ಸುಮ್ಮನೆ ಬಿಡುವ ಮಾತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ನವರು ತಮ್ಮ ಅವಧಿಯಲ್ಲಿ ಆದ ತಪ್ಪನ್ನು ಮುಚ್ಚಿಕೊಳ್ಳಲು ಸಂಬಂಧ ಇಲ್ಲದವರ ಹೆಸರನ್ನು ಹೇಳುತ್ತಿದೆ. ಕಾಂಗ್ರೆಸ್ನವರ ಪ್ರಕಾರ ಇಬ್ಬರು ಪ್ರಭಾವಿಗಳು ಈ ಹಗರಣದಲ್ಲಿ ಭಾಗಿಯಾಗಿದ್ರೆ ಅವರ ಹೆಸರುಗಳನ್ನು ಬಹಿರಂಗಪಡಿಸಲಿ ನಾವು ಯಾ ಮುಲಾಜನ್ನು ನೋಡುದೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರವೇ ಅವನನ್ನು ಬಂಧಿಸಿದ್ದು ( ಹ್ಯಾಕರ್ ಶ್ರೀಕಿ) ನಮ್ಮ ಸರ್ಕಾರವೇ ಅವನ ಮೇಲೆ ಏಫಐಆರ್ ದಾಖಲಿಸಿದ್ದು ಎಂದು ಹೇಳಿದ್ದಾರೆ.

Tags: BitcoinBJPCongress Partycryptocurrencyಕರೋನಾಕೋವಿಡ್-19ಬಿಜೆಪಿಬಿಟ್‌ಕಾಯಿನ್‌ಸಿದ್ದರಾಮಯ್ಯ
Previous Post

ಮನಸೂರೆಗೊಂಡ ತೆಂಗಿನಕಾಯಿ ಸುಲಿಯುವ ಯಂತ್ರ!

Next Post

ತಮಿಳುನಾಡಿನಲ್ಲಿ ಭಾರೀ ಮಳೆ; 20ಕ್ಕೂ ಹೆಚ್ಚು ಮಂದಿ ಸಾವು; ಸಾವಿರಾರು ಮನೆಗಳು ಜಲಾವೃತ

Related Posts

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!
ರಾಜಕೀಯ

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

by ಪ್ರತಿಧ್ವನಿ
April 16, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮದ್ಯ ತೆರಿಗೆ ನೀತಿ, ಶಿಕ್ಷಣ ವ್ಯವಸ್ಥೆ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಬಿಜೆಪಿ ಎಂಎಲ್‌ಸಿ ಎಚ್ ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

April 16, 2026
ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

April 16, 2026
ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

April 15, 2026
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
Next Post
ತಮಿಳುನಾಡಿನಲ್ಲಿ ಭಾರೀ ಮಳೆ; 20ಕ್ಕೂ ಹೆಚ್ಚು ಮಂದಿ ಸಾವು; ಸಾವಿರಾರು ಮನೆಗಳು ಜಲಾವೃತ

ತಮಿಳುನಾಡಿನಲ್ಲಿ ಭಾರೀ ಮಳೆ; 20ಕ್ಕೂ ಹೆಚ್ಚು ಮಂದಿ ಸಾವು; ಸಾವಿರಾರು ಮನೆಗಳು ಜಲಾವೃತ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada