ಭಾರಿ ಕೂತೂಹಲ ಮೂಡಿಸಿದ್ದ ಕರ್ನಾಟಕದ ಉಪಚುನಾವಣೆಯ ಸಿಂದಗಿ ಕ್ಷೇತ್ರದ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಜೆಡಿಎಸ್ ತೀವ್ರ ಮುಖಭಂಗಕ್ಕೀಡಾಗಿದೆ.
ಹೌದು, ಸಿಂದಗಿ ಕ್ಷೇತ್ರ ಉಪ ಚುನಾವಣೆಯ ಎಲ್ಲಾ ಸುತ್ತಿನ ಮತ ಎಣಿಕೆ ಮುಗಿಯುವ ಹಂತದಲ್ಲಿದ್ದು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 93,865 ಮತಗಳು ಪಡೆದು 31,573 ಸಾವಿರ ಅಂತರದಲ್ಲಿ ಮುಂದಿದ್ದು ಗೆಲುವಿನ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೊಳಿ 62,680 ಓಟ್ ಪಡೆದು ಸೋಲನ್ನನುಭವಿಸಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಜೆಡಿಎಸ್‌ನ ನಾಜಿಯಾ ಶಕೀಲ್ ಅಂಗಡಿ 4353 ಮತಗಳನ್ನ ಗಳಿಸಿ ತೀವ್ರ ಮುಖಭಂಗಕ್ಕೀಡಾಗಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದ್ದು ಯಾರ ಯಾರು ಎಷ್ಟು ಮತಗಳನ್ನ ಪಡೆದಿದ್ದಾರೆ ಎಂದು ಸಂಜೆ ವೇಳೆಗೆ ತಿಳಿದು ಬರಲಿದೆ.
ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪಕ್ಷ ನಾಯಕರು ಸಿಂದಗಿ ಕ್ಷೇತ್ರದಲ್ಲಿ ಹತ್ತಾರು ದಿನ ಠಿಕಾಣಿ ಹೂಡಿದ್ದರೂ ಜೆಡಿಎಸ್ ಪಕ್ಷ ಕ್ಷೇತ್ರವನ್ನು ಕಳೆದು ಕೊಂಡಿದೆ. ಜೊತೆಗೆ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
ಪಕ್ಷದ ಅಭ್ಯರ್ಥಿ ರಮೇಶ ಭೂಸನೂರು ಗೆಲುವು ಖಚಿತವಾಗುತ್ತಲೇ ಮತ ಎಣಿಕೆ ಕೇಂದ್ರದ ಎದುರು ಬಿಜೆಪಿ ಕಾರ್ಯಕರ್ತರ ಹರ್ಷ ಮುಗಿಲುಮುಟ್ಟಿದೆ.
ಸಿಂದಗಿ ವಿಜಯದ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು,