ಪಶ್ಚಿಮ ಬಂಗಾಳದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಮತ್ತು ತ್ರಿಪುರಾ ಬಿಜೆಪಿ ಶಾಸಕ ಆಶಿಸ್ ದಾಸ್ ಇಂದು ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತಾಡಿದ TMC ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ “ನಾವು ಎಡ ಮತ್ತು ಬಲ ಎರಡನ್ನೂ ಮುಗಿಸುತ್ತೇವೆ ” ಎಂದು ಹೇಳಿದ್ದಾರೆ.
ಹೌದು, ಅಭಿಷೇಕ್ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಮತ್ತು ತ್ರಿಪುರಾ ಬಿಜೆಪಿ ಶಾಸಕ ಆಶಿಸ್ ದಾಸ್ ಇಬ್ಬರೂ ಸೇರ್ಪಡೆ ಕೊಂಡಿದ್ದಾರೆ. ಬಿಜೆಪಿಯಲ್ಲಿದ್ದ ಹಾಲಿ/ಮಾಜಿ ಶಾಸಕರು ಮತ್ತೆ TMC ಪಕ್ಷಕ್ಕೆ ಮರಳಿರುವುದು ಬಿಜೆಪಿ ಪಕ್ಷದ ಯಾವುದೇ ಭದ್ರಕೋಟೆಯು ಸುರಕ್ಷಿತವಾಗಿಲ್ಲ ಎಂಬದನ್ನು ಸೂಚಿಸುತ್ತದೆ. ಮುಂದಿನ ವರ್ಷ ಗೋವಾ ಚುನಾವಣೆ ನಡೆಯಲಿದ್ದು ಮತ್ತು 2023ರಲ್ಲಿ ತ್ರಿಪುರಾ ಚುನಾವಣೆ ನಡೆಯಲಿದ್ದು ಎರಡು ಚುನಾವಣೆಗೂ TMC ಭರ್ಜರಿ ಸಿದ್ದತೆ ನಡೆಸುತ್ತಿದೆ.
“ನಾವು ತ್ರಿಪುರಾದಲ್ಲಿ ಎಡ ಮತ್ತು ಬಲ ಎರಡನ್ನೂ ಮುಗಿಸುತ್ತೇವೆ. ಇದು ಬಂಗಾಳದ ಪುನರಾವರ್ತನೆಯಾಗಲಿದೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
“ಬಿಜೆಪಿ ವೈರಸ್‌ಗೆ ಒಂದೇ ಒಂದು ಲಸಿಕೆ ಇದೆ. ಅದರ ಹೆಸರು ಮಮತಾ ಬ್ಯಾನರ್ಜಿ… ತ್ರಿಪುರಾದ ಜನರು ಅವರಿಗೆ ಡಬಲ್ ಡೋಸ್ ನೀಡಬೇಕಾಗುತ್ತದೆ – ನಾಗರಿಕ ಚುನಾವಣೆಯಲ್ಲಿ ಮೊದಲನೆ ಡೋನ್ ನೀಡಿದರೆ , 2023 ರ ವಿಧಾನಸಭಾ ಚುನಾವಣೆಯಲ್ಲಿ ಎರಡನೆ ಡೋಸ್ ನೀಡಬೇಕಿದೆ” ಎಂದು ಹೇಳಿದ್ದಾರೆ. ಮುಂದಿನ ತಿಂಗಳು ತ್ರಿಪುರಾದಲ್ಲಿ ನಡೆಯಲಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷ ಸ್ಪರ್ಧಿಸಲಿದೆ ಎಂದು ಅಭಿಷೇಕ್ ಬ್ಯಾನರ್ಜಿ ಖಚಿತಪಡಿಸಿದ್ದಾರೆ.
ಮಧ್ಯಾಹ್ನದ ನಂತರ, ಅಗರ್ತಲಾದಲ್ಲಿ ರ್ಯಾಲಿ ಸೈಟ್ ಅನ್ನು ಅಪರಿಚಿತ ಜನರು ಧ್ವಂಸಗೊಳಿಸಿದ್ದಾರೆ. ಪಕ್ಷದ ಧ್ವಜ ಮತ್ತು ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಅಭಿಷೇಕ್ ಆರೋಪಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸೆಪ್ಟೆಂಬರ್‌ನಿಂದ ರ್ಯಾಲಿ ನಡೆಸಲು ಮುಂದಾಗಿದೆ. ಕೋವಿಡ್ ಅನ್ನು ಉಲ್ಲೇಖಿಸಿ ನಾಲ್ಲು ಬಾರಿ ರಾಜ್ಯ ಪೊಲೀಸರು ತಡೆದು ನಿರ್ಬಂಧಿಸಿದ್ದರು ಇದನ್ನು ಪ್ರಶ್ನಿಸಿ ನಿನ್ನೆ TMC ಪಕ್ಷ ನ್ಯಾಯಾಲಯಕ್ಕೆ ಹೋಯಿತು.
ನಿನ್ನೆ ಸಂಜೆ ತ್ರಿಪುರಾ ಹೈಕೋರ್ಟ್ ರ್ಯಾಲಿಗೆ ಅನುಮತಿ ನೀಡಿತ್ತು. ಆದರೆ, ಒಂದೇ ಬಾರಿಗೆ 500ಕ್ಕೂ ಹೆಚ್ಚು ಜನರನ್ನು ಸ್ಥಳದಲ್ಲಿ ಇರುವಂತಿಲ್ಲ ಎಂದು ನ್ಯಾಯಮೂರ್ತಿ ಸುಭಾಶಿಶ್ ತಾಲಪಾತ್ರ ಷರತ್ತು ವಿಧಿಸಿದ್ದರು.
ಬಿಪ್ಲಬ್ ದೇಬ್ (Biplab Deb-led) ನೇತೃತ್ವದ ಸರ್ಕಾರವು ನಮ್ಮ ನಡೆಗೆ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಆರೋಪಿಸಿದೆ. ಬಿಜೆಪಿಯು ಅಭಿಷೇಕ್‌ಗೆ ಹೆದರುತ್ತಿದೆ ಎಂದು ತೃಣಮೂಲದ ಹಿರಿಯ ನಾಯಕ ಪಾರ್ಥ ಚಟರ್ಜಿ ಹೇಳಿದ್ದಾರೆ.
ರಾಜೀಬ್ ಬ್ಯಾನರ್ಜಿ — 2011 ಮತ್ತು 2016 ರಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದರು — ಜನವರಿಯಲ್ಲಿ ರಾಜೀನಾಮೆ ನೀಡಿದರು. ಮತ್ತೆ ಈಗ TMC ಗೆ ಮರಳಿದ್ದು, ತ್ರಿಪುರ ಚುನಾವಣೆಯಲ್ಲಿ TMC ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸಿನಲ್ಲಿ ಇದ್ದಾರೆ.