• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ತೈಲ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕ & ಚಾಲಕರ ಸಂಘದಿಂದ ಮುಷ್ಕರದ ಎಚ್ಚರಿಕೆ!

ಕರ್ಣ by ಕರ್ಣ
October 26, 2021
in ಕರ್ನಾಟಕ
0
ತೈಲ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕ & ಚಾಲಕರ ಸಂಘದಿಂದ ಮುಷ್ಕರದ ಎಚ್ಚರಿಕೆ!
Share on WhatsAppShare on FacebookShare on Telegram

ದಿನದಿಂದ ದಿನಕ್ಕೆ ಕಚ್ಚಾ ತೈಲಗಳ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ  ಜನ ಸಾಮಾನ್ಯರ ಪಾಲಿಗೆ ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತೈಲ ಬೆಲೆ ಏರಿಕೆಯಿಂದ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ದೊಡ್ಡ ನಷ್ಟವನ್ನುಂಟು ಮಾಡುತ್ತಿದೆ. ಹೀಗಾಗಿ ತೈಲ ಬೆಲೆಯನ್ನು ಕಡಿಮೆ ಮಾಡಲು ಒತ್ತಾಯಿಸಿ  ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಮುಷ್ಕರದ ತಾಕೀಕು ನೀಡಿದೆ. 

ADVERTISEMENT

ತೈಲ ಬೆಲೆ ಏರಿಕೆಯಿಂದ ಲಾರಿ ವ್ಯವಹಾರ ಕ್ಷೇತ್ರಕ್ಕೆ ದೊಡ್ಡ ಹೊಡೆತ !

ದುಬಾರಿ ದುನಿಯಾದಲ್ಲಿ ಜೀವನ ಸಾಗಿಸುವುದೇ  ಒಂದು ದೊಡ್ಡ ಸವಾಲಾಗಿ ಹೋಗಿದೆ. ಅದರಲ್ಲೂ ಕಚ್ಚಾ ತೈಲಗಳ ಬೆಲೆ ಏರಿಕೆ ತನ್ನ  ನಾಗಾಲೋಟ ಮುಂದುವರೆಸಿದೆ. ಪೆಟ್ರೋಲ್ ಡೀಸೆಲ್ ಬೆಲೆ ಜನ ಸಾಮಾನ್ಯರ ಕೈಯಿಂದ ದೂರ ಸರಿಯುತ್ತಿದೆ. ಈಗಾಗಲೇ ಶತಕ ದಾಟಿ ಪೆಟ್ರೋಲ್ ಡೀಸೆಲ್ ಬೆಲೆ ಮುನ್ನುಗ್ಗುತ್ತಿದೆ. ಹೀಗಾಗಿ ಈ ತೈಲ ಬೆಲೆ ಏರಿಕೆ ಖಂಡಿಸಿ ಇದೀಗ ರಾಜ್ಯದ ದೊಡ್ಡ ಉದ್ಯಮವಾದ ಲಾರಿ ವ್ಯವಹಾರ ಕ್ಷೇತ್ರ ಅಖಾಡಕ್ಕೆ ಇಳಿದಿದೆ. ಈ ಹಿನ್ನೆಲೆ ಇಂದು ಚಾಮರಾಜಪೇಟೆಯ  ಖಾಸಗಿ ಹೋಟೆಲ್ ಒಂದರಲ್ಲಿ  ಸ್ಟೇಟ್ ಲಾರಿ ಅಸೋಷಿಯೇಶನ್ ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ರಾಜ್ಯದ ಹಲವು ಲಾರಿ ವ್ಯವಹಾರ ನಡೆಸುವ ಉದ್ಯಮಿಗಳು ಪಾಲ್ಗೊಂಡು ಸರ್ಕಾರಕ್ಕೆ ಮೊದಲ ಹಂತದ ಎಚ್ಚರಿಕೆಯನ್ನು ನೀಡಲು ನಿರ್ಧರಿಸಿದ್ದಾರೆ. ಅಂದರೆ, ನವೆಂಬರ್ 5ರವರೆಗೆ ತೈಲ ಬೆಲೆ ಇಳಿಸಲು ಗಡುವು ನೀಡಿದೆ, ಸರ್ಕಾರ ಜಗ್ಗದಿದ್ದರೆ ನವೆಂಬರ್ 15ರಿಂದ ಪೂರ್ಣಾವಧಿಯ ಮುಷ್ಕರಕ್ಕೆ ಇಳಿಯಲು ನಿರ್ಧರಿಸಲಾಗಿದೆ.

10 ರೂ. ತೆರಿಗೆ ಕಡಿತಕ್ಕೆ ಲಾರಿ ಮಾಲೀಕ ಚಾಲಕರ ಆಗ್ರಹ!

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟ. ಅದರಲ್ಲೂ ಡೀಸೆಲ್  ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಒಂದು  ಲೀಟರ್  ಡೀಸೆಲ್ ಮೇಲೆ  10 ರೂ ತೆರಿಗೆ ಕಡಿಮೆ ಮಾಡಬೇಕು. ಜನವರಿ ಕೊನೆ ತನಕ ಪರ್ಮಿಟ್ ಕೊಡಬೇಕು. ಲಾರಿ ಡ್ರೈವರ್‌ಗಳಿಗೆ ಲೋಡಿಂಗ್ ಅನ್ ಲೋಡಿಂಗ್ ನಲ್ಲಿ ಸಾಕಷ್ಟು ಸಮಸ್ಯೆ ಆಗುತ್ತಿದೆ. ಆರ್.ಟಿ.ಒ ಹಾಗೂ ಪೊಲೀಸ್ ಕಿರುಕುಳ ಹೆಚ್ಚಾಗ್ತಾ ಇದೆ ಅಂತ ಅಸಮಾಧನ ವ್ಯಕ್ತಪಡಿಸಿದ್ದಾರೆ. 

ನವೆಂಬರ್ 5ರ ವರೆಗೆ ಗಡುವು… ನವೆಂಬರ್ 15ರಿಂದ ಪೂರ್ಣಾವಧಿ ಮುಷ್ಕರ!

ಈಗಾಗಲೇ ಕೊರೋನಾ ಹೊಡೆತದಿಂದ ಎಲ್ಲಾ ಕ್ಷೇತ್ರದಂತೆ ಲಾರಿ ಉದ್ಯಮ ಕ್ಷೇತ್ರ ಕೂಡ ವಿಲವಿಲ ಒದ್ದಾಡಿದೆ. ಈಗಲೂ ಅದರಿಂದ ಚೇತರಿಸಿಕೊಳ್ಳಲಾಗದೆ ಉದ್ಯಮಗಳು ಸಾಲ ಶೂಲ ಮಾಡಿ ಉದ್ಯಮ ನಡೆಸುವುಂಥಾ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಹಲವು ಕ್ಷೇತ್ರಗಳಂತೆ ಲಾರಿ ಕ್ಷೇತ್ರವೂ ಇದೀಗ ತೈಲ ಬೆಲೆ ಏರಿಕೆ ವಿರುದ್ಧದ ಸಮರಕ್ಕೆ ಕಣಕ್ಕಿಳಿಯುತ್ತಿದೆ. ಸದ್ಯ ತೈಲ ಬೆಲೆಯಿಂದ 10 ರೂಪಾಯಿ ತೆರಿಗೆ ಕಡಿತಕ್ಕೆ ಆಗ್ರಹಿಸಿ ಸರ್ಕಾರಕ್ಕೆ ನವೆಂಬರ್ 5ರ ಗಡುವು ನೀಡಿದೆ. ಅದರೊಳಗೆ ಸರ್ಕಾರ ಬಗ್ಗಿಲ್ಲವಾದರೆ ಲಾರಿ ಉದ್ಯಮಿಗಳು ಸಂಪೂರ್ಣವಾಗಿ ಮುಷ್ಕರಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಒಂದು ವೇಳೆ ಲಾರಿ ಕ್ಷೇತ್ರವೂ ಸಂಪೂರ್ಣವಾಧಿ ಮುಷ್ಕರ ಕೈಗೊಂಡರೆ ಜನರ ದಿನ ಬಳಕೆಯ ವಸ್ತುಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಪರದಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಲಿದೆ. 

Tags: BJPCovid 19Petrol Diesel PricePrice Hikeಕರೋನಾಕೋವಿಡ್-19ಚಾಲಕನರೇಂದ್ರ ಮೋದಿಬಿಜೆಪಿಮಾಲೀಕಲಾರಿ
Previous Post

ಆ್ಯಪ್ ಆಧಾರಿತ ಡಿಜಿಟಲ್ ಪ್ಲಾಟ್ಫಾರ್ಮ್ ನೌಕರರಿಗೂ ಇನ್ನು ಮುಂದೆ ಸಿಗಲಿದೆ ವಾರದ ರಜೆ!

Next Post

UP Election 2022 : ಬಿಜೆಪಿಗೆ ಮತ ಹಾಕದಂತೆ ನಾನು ರೈತರಿಗೆ ಮನವಿ ಮಾಡುತ್ತೇನೆ – ರಾಕೇಶ್ ಟಿಕಾಯತ್

Related Posts

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?
ಕರ್ನಾಟಕ

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

by ಪ್ರತಿಧ್ವನಿ
May 28, 2026
0

ಕರ್ನಾಟಕ ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದ ಆಡಳಿತದ ಬಳಿಕ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ...

Read moreDetails
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

May 28, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
UP Election 2022 : ಬಿಜೆಪಿಗೆ ಮತ ಹಾಕದಂತೆ ನಾನು ರೈತರಿಗೆ ಮನವಿ ಮಾಡುತ್ತೇನೆ – ರಾಕೇಶ್ ಟಿಕಾಯತ್

UP Election 2022 : ಬಿಜೆಪಿಗೆ ಮತ ಹಾಕದಂತೆ ನಾನು ರೈತರಿಗೆ ಮನವಿ ಮಾಡುತ್ತೇನೆ - ರಾಕೇಶ್ ಟಿಕಾಯತ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada