ಗಾರ್ಡನ್ ಸಿಟಿ ಬೆಂಗಳೂರಲ್ಲಿ ಶ್ವಾನ ಪ್ರೀಯರಿಗೇನು ಕಮ್ಮಿ ಇಲ್ಲ. ಮನೆಗೊಂದು ಶ್ವಾನ ಇದ್ದರೇನೆ ಬದುಕು ಅರ್ಥಪೂರ್ಣ ಎನ್ನುವವರಿದ್ದಾರೆ. ಅಂಥವರಿಗೆ ಬಿಬಿಎಂಪಿ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮನೆಯಲ್ಲಿ ನಾಯಿ ಸಾಕ್ಬೇಕು ಎಂದರೆ ಪಾಲಿಕೆಯಿಂದ ಪರವಾನಿಗೆ ಪಡೆಯಬೇಕು. ಈ ರೀತಿಯ ಒಂದು ಪಾಲಿಸಿಗೆ ಅನುಮತಿ ಕೊಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿಗೆ ಕಾಯುತ್ತಿರುವ ಪಾಲಿಕೆ.!!
ಶ್ವಾನ ಪ್ರಿಯರೇ ಸಜ್ಜಾಗಿ, ಇನ್ಮುಂದೆ ಬೆಂಗಳೂರಿಗರು ನಾಯಿ ಸಾಕಬೇಕು ಎಂದರೆ ಪಾಲಿಕೆಯಿಂದ ಪರವಾನಿಗೆ ಪಡೆಯುವ ಅಗತ್ಯವಿದೆ. ಈ ಬಗ್ಗೆ ಒಂದು ಡ್ರಾಫ್ಟ್ ತಯಾರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರದ ಅನುಮೋದನೆಗಾಗಿ ಪಾಲಿಕೆ ಈಗ ಕಾಯುತ್ತಿದೆ. ಅಷ್ಟಕ್ಕೂ ಏನಿದು ಪಾಲಿಕೆಯ ಹೊಸ ನಿಯಮ ಎನ್ನುವುದೇ ಕುತೂಹಲಕಾರಿ ಸಂಗತಿ. ಆರಂಭದಲ್ಲಿ ಬಹಳ ಮುತವರ್ಜಿ ವಹಿಸಿ ಬೆಂಗಳೂರು ಶ್ವಾನ ಖರೀದಿಗೆ ಮುಂದಾಗುತ್ತಾರೆ. ಬರಬರುತ್ತಾ, ಅದನ್ನು ನಿರ್ವಹಣೆ ಹಾಗೂ ಅದನ್ನು ನಿಭಾಯಿಸುವದೇ ಜನರಿಗೆ ಕಷ್ಟದ ಕೆಲಸ. ಹೀಗಾಗಿ ಅದನ್ನು ಬೇಕಾಬಿಟ್ಟಿ ಬೀದಿಗೆ ಬಿಟ್ಟು ಬಿಡುತ್ತಾರೆ. ಈಗಾಗಲೇ ನಾಯಿ ದಾಳಿಗೆ ಮಕ್ಕಳು ಬಲಿ, ಮಹಿಳೆಯರ ಮೇಲೆ ನಾಯಿ ದಾಳಿ ಎಂಬಿತ್ಯಾದಿ ಸುದ್ದಿಗಳು ಬೆಂಗಳೂರಿನಲ್ಲಿ ಕಾಮನ್. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಈಗ ಮುಂದಾಗಿದೆ.
ಎರಡು ರೀತಿಯ ಪರವಾನಿಗೆ ನೀಡಲು ನಿರ್ಧರಿಸಿರುವ ಬಿಬಿಎಂಪಿ.!!
ಸದ್ಯ ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಎರಡು ರೀತಿಯ ಲೈಸನ್ಸ್ ನೀಡಲು ನಿರ್ಧರಿಸಿದೆ. ಪೆಟ್ ಡಾಗ್ ಲೈಸೆನ್ಸ್ ಹಾಗೂ ಡಾಗ್ ಬ್ರೀಡ್ ಲೈಸೆನ್ಸ್, ಎಂಬ ಎರಡು ಬಗೆಯ ಪರವಾನಿಗೆ ಪಾಲಿಕೆ ನೀಡಲು ಚಿಂತಿಸಿದೆ. ಎಂದರೆ ಮನೆಯಲ್ಲೇ ಶ್ವಾನ ಸಾಕುವುದಾರೆ ಪೆಟ್ ಡಾಗ್ ಲೈಸೆನ್ಸ್ ಹಾಗೂ ನಾಯಿ ಸಾಕಿ ಮರಿಮಾಡಿಸಿ ಮಾರಾಟ ಮಾಡುವುದಾದರೆ ಡಾಗ್ ಬ್ರೀಡ್ ಲೈಸೆನ್ಸ್ ಜನರು ಪಡೆಯ ಬೇಕಿದೆ. ಆದರೆ ಪೆಟ್ ಡಗ್ ಲೈಸೆನ್ಸ್ ಒಮ್ಮೆ ಪಡೆದರೆ ಸಾಕು. ಆದರೆ ಡಾಗ್ ಬ್ರೀಡ್ ಲೈಸೆನ್ ಅನ್ನು ವರ್ಷಕ್ಕೊಮ್ಮೆ ನವೀಕರಣ ಮಾಡಿಸುವ ಅಗತ್ಯವಿದೆ. ಅಕಸ್ಮಾತ್ ಈ ಎರಡರಲ್ಲಿ ಒಂದು ಪರವಾನಿಗೆ ಪಡೆಯದ ಜನರಿಗೆ ಸಾಕಲು ಅನುಮತಿ ಇರುವುದಿಲ್ಲ. ಮುಂದಿನ 15 ದಿನಗಳಲ್ಲಿ ಈ ಸಂಬಂಧ ಬಿಬಿಎಂಪಿ ಅಧಿಕೃತ ಆದೇಶ ಹೊರಡಿಸಲಿದೆ.
ಸರ್ಕಾರಕ್ಕೆ ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಏನಿದೆ.!?
- ನಾಯಿ ಸಾಕಲು ಪರವಾನಿಗೆ ಕಡ್ಡಾಯ
- ಅನಿಮಲ್ ವೆಲ್ ಫೇರ್ ಇಂಡಿಯಾ ವತಿಯಿಂದ ಲೈಸೆನ್ಸ್ ಪಡೆಯಬೇಕು
- ಸಾರ್ವಜನಿಕ ಜಾಗದಲ್ಲಿ ಶ್ವಾನ ತ್ಯಾಜ್ಯ ಮಾಡಿದರೆ ಕ್ಲಿನಿಂಗ್ ಹೊಣೆ ಮಾಲೀಕರದ್ದೇ
- ಪೆಟ್ ಪೇರೆಂಟ್ಸ್ ಅಂತ ಲೈಸೆನ್ಸ್ ನೀಡಿ ಶ್ವಾನ ಸಾಕಲು ಅವಕಾಶ
- ಶ್ವಾನಗಳ ವ್ಯಾಕ್ಸಿನ್, ಲೈಸೆನ್ಸ್, ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿ ಸಲ್ಲಿಸುವುದು
- ಶ್ವಾನಗಳ ದೇಹದಲ್ಲಿ ಮೈಕ್ರೋ ಚಿಪ್ ಅಳವಡಿಸಿ ಅದನ್ನು ಟ್ರ್ಯಾಕ್ ಮಾಡುವುದು
- ಶ್ವಾನಗಳ ಗುರುತಿಗಾಗಿ Face Recognize ಮಾಡಿಸುವುದು
- ಅನಿಮಲ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾ ವತಿಯಿಂದ ಆರೋಗ್ಯ ಸರ್ಟಿಫಿಕೇಟ್
- ಈ ಪರವಾನಿಗೆ ಪಡೆಯದೆ ಬ್ರೀಡ್ ಮಾಡಿದರೆ ಕಾನೂನು ಕ್ರಮ
- ಪ್ರತಿ ನಾಯಿಗೆ ವಾಸಿಸಲು ಸ್ಥಳ ನಿಗದಿ ಪಡಿಸಬೇಕು
- ಶ್ವಾನಗಳಿಗೆ ಆಹಾರ ಪದ್ದತಿ ರೂಪಿಸಿ, ಅದರಂತೆಯೇ ಆಹಾರ ನೀಡಬೇಕು
- ಇಷ್ಟೆಲ್ಲ ಅನುಕೂಲ ಇದ್ದರೆ ಮಾತ್ರ ಪರವಾನಿಗೆ
ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ವತಿಯಿಂದ 5 ಬಾರಿ ಅಭಿಪ್ರಾಯ ಸಂಗ್ರಹಿಸಿರುವ ಪಾಲಿಕೆ, ಸರ್ಕಾರದಿಂದ ಗ್ರೀನ್ ಸಿಗ್ನಲ್ ಬಂದ ಬಳಿಕ ಬಿಬಿಎಂಪಿ ಅಂತಿಮವಾಗಿ ಲೈಸೆನ್ಸ್ ಶುಲ್ಕ ನಿಗದಿ ಮಾಡಲಿದೆ. ಒಂದು ಅಪಾರ್ಟ್ ಮೆಂಟ್ ಅಥವಾ ಒಂದ್ ಪ್ಲಾಟ್ ಗೆ ಒಂದೇ ನಾಯಿ ಸಾಕಲು ಅವಕಾಶ. ಹೀಗೆ ನಾಯಿಗಳ ಸಂತಾನ್ಪೋತಿ ಹಾಗೂ ಬೀದಿ ನಾಯಿಗಳ ಹೆಚ್ಚಳ ತಡೆಯಲು ಈ ಮೂಲಕವಾಗಿ ಬಿಬಿಎಂಪಿ ತಂತ್ರ ರೂಪಿಸಿದೆ. ಆದರೆ ಈ ತಂತ್ರದ ಪ್ರಸ್ತಾವನೆಯನ್ನು ಪಾಲಿಕೆ ಸರ್ಕಾರದ ಮುಂದಿಟ್ಟಿದೆಯಷ್ಟೇ. ಆದರೆ ಸರ್ಕಾರ ಯಾವ ರೀತಿಯ ನಿಲುವು ತಾಳಿಕೊಳ್ಳಲಿದೆಯೋ ಕಾದು ನೋಡಬೇಕಿದೆ.