ಮುಂದಿನ ವರ್ಷ ಭಾರತದಲ್ಲಿ ಸಾಲು ಸಾಲು ವಿಧಾನಸಭಾ ಚುನಾವಣೆ 2022 ಗಳು ನಡೆಯಲಿವೆ. ಎಬಿಪಿ-ಸಿ ವೋಟರ್ 2022 ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದು ಹೇಳಿದೆ. ಕಳೆದ ಕೆಲ ದಿನಗಳಿಂದ ದೇಶದ ಗಮನ ಸೆಳೆದಿರುವ ಪಂಜಾಬ್ ಫಲಿತಾಂಶ ಅತಂತ್ರವಾಗಲಿದ್ದು, ಆಮ್ ಆದ್ಮಿ ಪಕ್ಷ ಕಿಂಗ್ ಮೇಕರ್ ಆಗುವ ಲಕ್ಷಣಗಳು ಈ ಸಮೀಕ್ಷೆಯಲ್ಲಿ ಕಾಣಿಸುತ್ತಿವೆ.
ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 241 ರಿಂದ 249ರಲ್ಲಿ ಗೆಲುವು ಕಾಣಬಹುದು. ಎಸ್ಪಿ0 130-138, ಬಿಎಸ್ಪಿ್ 15-19 ಮತ್ತು ಕಾಂಗ್ರೆಸ್ 3 ರಿಂದ 7 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರ ಮುಂದಾಳತ್ವದಲ್ಲಿ ಎದುರಿಸಿದ್ರೆ ಶೇ.41ರಷ್ಟು ಮತಗಳನ್ನು ಬಿಜೆಪಿ ಪಡೆಯಬಹುದು. ಸಮಾಜವಾದಿ ಪಕ್ಷ ಶೇ. 32 ಪಡೆದು ಎರಡನೇ ಸ್ಥಾನದಲ್ಲಿರಲಿದೆ. ಇನ್ನುಳಿದಂತೆ ಮಾಯಾವತಿ ನೇತೃತ್ವದ ಬಿಎಸ್ಪಿ1 ಶೇ.15, ಕಾಂಗ್ರೆಸ್ ಶೇ. 6 ಮತಗಳನ್ನು ಪಡೆಯಲಿವೆ ಎಂದು ಸಿವೋಟರ್ ಸರ್ವೆ ಹೇಳಿದೆ.
ಸಮೀಕ್ಷೆ ಪ್ರಕಾರ ಪಂಜಾಬ್ನಲ್ಲಿ ಅತಂತ್ರ ಫಲಿತಾಂಶ ಬರಬಹುದು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. 117 ವಿಧಾನಸಭಾ ಕ್ಷೇತ್ರದಲ್ಲಿ 49 ರಿಂದ 55 ಕ್ಷೇತ್ರಗಳಲ್ಲಿ ಆಪ್ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ 30-47, ಅಕಾಲಿದಳ 17-25 ಮತ್ತು ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಬಹುದು.
ಉತ್ತರಾಖಂಡದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. ಇಲ್ಲಿ ಬಿಜೆಪಿ ಶೇ.45, ಕಾಂಗ್ರೆಸ್ ಶೇ.34, ಆಮ್ ಆದ್ಮಿ ಪಾರ್ಟಿ ಶೇ.15 ಮತ್ತು ಇತರರಿಗೆ ಶೇ.6ರಷ್ಟು ಮತ ಸಿಗಲಿವೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 42-46, ಕಾಂಗ್ರೆಸ್ 21-25, ಆಮ್ ಆದ್ಮಿ ಪಾರ್ಟಿ 0-4 ಮತ್ತು ಇತರರು ಎರಡು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ವರದಿ ಹೇಳಿದೆ.
ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 24-28ರಲ್ಲಿ ಗೆದ್ದು ಶೇ.38ರಷ್ಟು ಮತ ಪಡೆಯಬಹುದು. ಕಾಂಗ್ರೆಸ್ ಶೇ.18, ಆಮ್ ಆದ್ಮಿ ಪಾರ್ಟಿ ಶೇ.23 ಮತ್ತು ಇತರರು ಶೇ.21ರಷ್ಟು ಮತಗಳನ್ನು ಪಡೆಯಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು.
ಮಣಿಪುರ ಫಲಿತಾಂಶ ಸ್ಪಷ್ಟವಾಗಿಲ್ಲ. ಒಟ್ಟು 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 21-25, ಕಾಂಗ್ರೆಸ್ 18-22ರಲ್ಲಿ ಗೆಲುವು ಸಿಗುವ ಅನುಮಾನಗಳಿವೆ. ಸ್ಥಳೀಯ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಸಎಫ್) 4-8ರಲ್ಲಿ ಜಯ ಸಾಧಿಸುವ ಸಾಧ್ಯತೆಗಳಿವೆ. ಇತರರರ ಒಂದರಿಂದ ಐದು ಕ್ಷೇತ್ರಗಳಲ್ಲಿ ಗೆಲ್ಲಬಹುದು. ಶೇಕಡಾವಾರು ಮತಗಳನ್ನು ಗಮನಿಸಿದ್ರೆ ಬಿಜೆಪಿ ಶೇ.36, ಕಾಂಗ್ರೆಸ್ ಶೇ.34, ಎನ್ಪಿಯಎಫ್ (NPF) ಶೇ.9 ಮತ್ತು ಇತರರು ಶೇ.21ರಷ್ಟು ಮತ ಪಡೆಯಬಹುದು.