ದೇಶದ ಗಮನ ಸೆಳೆದಿದ್ದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಬಿಹಾರ್ ಮೂಲದ ಮುಂಬೈ ಐಐಟಿ ನ ಎಂಜಿನಿಯರಿಂಗ್ ಪದವೀಧರ ಶುಭಂ ಕುಮಾರ್ (ರೋಲ್ ನಂ .1519294) ಮೊದಲ ರ್ಯಾಂಕ್ ಪಡೆದಿದ್ದಾರೆ. ಮಧ್ಯಪ್ರದೇಶದ ಶ್ರೀಮತಿ ಜಾಗೃತಿ ಅವಸ್ಥಿ (ರೋಲ್ ಸಂಖ್ಯೆ. 0415262) ಎರಡನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಮೂರನೇ ರ್ಯಾಂಕ್ ಅಂಕಿತ್ ಜೈನ್ ಪಡೆದಿದ್ದಾರೆ. ಕರ್ನಾಟಕದ ಅಕ್ಷಯ್ ಸಿಂಹ 77 ನೇ ರ್ಯಾಂಕ್ ಗಳಿಸಿದ್ದಾರೆ.
ಅಕ್ಟೋಬರ್ 4 2020ರಂದು ನಡೆಸಲಾದ ಪರೀಕ್ಷೆಗೆ 10,40,060 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 4,82,770 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 5 ಜನವರಿ 2021 ರಲ್ಲಿ ನಡೆದ ಲಿಖಿತ (ಮುಖ್ಯ) ಪರೀಕ್ಷೆಯಲ್ಲಿ 10564 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಪರ್ಸನಾಲಿಟಿ ಪರೀಕ್ಷೆಗೆ ಹಾಜರಾದ 2053 ಅಭ್ಯರ್ಥಿಗಳ ಪೈಕಿ 761 ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ 545 ಪುರುಷರು ಮತ್ತು 216 ಮಹಿಳೆಯರು ಸೇರಿದ್ದಾರೆ. ರ್ಯಾಂಕ್ ಗಳ ಆಧಾರದ ಮೇಲೆ ವಿವಿಧ ಸೇವೆಗಳಿಗೆ ನೇಮಕಗೊಳ್ಳಲಿದ್ದಾರೆ.
ಮೊದಲ ರ್ಯಾಂಕ್ ಪಡೆದ ಶುಭಂ ಕುಮಾರ್ ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಎರಡನೇ ರ್ಯಾಂಕ್ ಪಡೆದ ಜಾಗೃತಿ ಅವಸ್ಥಿ ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಪರೀಕ್ಷೆಗೆ ಆಯ್ಕೆ ಮಾಡಿ ಅರ್ಹತೆ ಪಡೆದರು.ಅಂದಹಾಗೆ ಜಾಗೃತಿ ಭೋಪಾಲ್ನಿಂದ ಬಿ ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ.
25 ಅಗ್ರ ಅಭ್ಯರ್ಥಿಗಳಲ್ಲಿ 13 ಪುರುಷರು ಮತ್ತು 12 ಮಹಿಳೆಯರಿರೋದು ವಿಶೇಷ. ಎಲ್ಲಕ್ಕಿಂತ ಹೆಚ್ಚಾಗಿ, ಅಂಗವೈಕಲ್ಯವನ್ನು ಮೆಟ್ಟಿನಿಂತು 25 ಪ್ರತಿಭಾನ್ವಿತರು ಈ ಬಾರಿಯ ಯುಪಿಎಸ್ ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವುದು ವಿಶೇಷವಾಗಿತ್ತು. ಈ ವಿಕಲಚೇತನ ಸಾಧಕರಲ್ಲಿ 7 ಮೂಳೆ ಅಂಗವೈಕಲ್ಯ, 04 ದೃಷ್ಟಿಹೀನ, 10 ವಯೋಮಾನದ ದುರ್ಬಲ ಮತ್ತು 4 ಬಹು ಅಂಗವೈಕಲ್ಯ ಹೊಂದಿದವರಾಗಿದ್ದಾರೆ.
UPSC (Mains) 2020 ತೇರ್ಗಡೆ ಹೊಂದಿದ 30 ಮಂದಿಯ ವಿವರ.!!
ಕ್ರಮ ಸಂಖ್ಯೆ – ರೋಲ್ ನಂಬರ್ – ಹೆಸರು
1 – 1519294 – ಶುಭಂ ಕುಮಾರ್
2 – 415262 – ಜಾಗೃತಿ ಅವಸ್ಥಿ
3 – 813490 – ಅಂಕಿತ ಜೈನ್
4 – 828612 – ಯಶ್ ಜಲುಕಾ
5 – 829179 – ಮಮತಾ ಯಾದವ್
6 – 1905061 – ಮೀರಾ ಕೆ
7 – 849107 – ಪ್ರವೀಣ್ ಕುಮಾರ್
8 – 121247 – ಜಿವಾನಿ ಕಾರ್ತಿಕ್ ನಾಗ್ಜಿಭಾಯಿ
9 – 5903870 – ಅಪಲಾ ಮಿಶ್ರಾ
10 – 1513584 – ಸತ್ಯಂ ಗಾಂಧಿ
11 – 3502246 – ದೇವಯಾನಿ
12 – 5704748 – ಮಿಥುನ್ ಪ್ರೇಮ್ ರಾಜ್
13 – 1133517 – ಗೌರವ್ ಬುದಾನಿಯಾ
14 – 507076 – ಕರಿಶ್ಮಾ ನಾಯರ್
15 – 819907 – ರಿಯಾ ದಬಿ
16 – 819435 – ಆರ್ತ್ ಜೈನ್
17 – 6305704 – ಸಾರ್ಥಕ್ ಅಗರ್ವಾಲ್
18 – 7804829 – ರಾಧಿಕ ಗುಪ್ತಾ
19 – 833045 – ಶಶ್ವತ್ ತ್ರಿಪುರಾರಿ
20 – 1019374 – ಪಿ ಶ್ರೀಜಾ
21 – 828175 – ವೈಶಾಲಿ ಜೈನ್
22 – 7000714 – ನಿತೀಶ್ ಕುಮಾರ್ ಜೈನ್
23 – 6306505 – ಸದಾಫ್ ಚೌಧರಿ
24 – 5905716 – ಕೃಷ್ಣ ಕುಮಾರ್ ಸಿಂಗ್
25 – 7100243 – ವೈಭವ್ ರಾವತ್
26 – 812086 – ಪುಲ್ಕಿತ್ ಸಿಂಗ್
27 – 1011243 – ಮೈತ್ರೇಯಿ ನಾಯ್ಡು
28 – 2625904 – ದಿವ್ಯಾ ಮಿಶ್ರಾ
29 – 5400358 – ಪ್ರಕಾರ್ ಕುಮಾರ್ ಸಿಂಗ್
30 – 1140688 – ದಿವ್ಯಾಂಶು ಚೌಧರಿ