ನಾವು ಸೈಕಲ್, ಎತ್ತಿನಗಾಡಿ, ಟಾಂಗಾ ಸವಾರಿ ಮೂಲಕ ಪ್ರತಿಭಟನೆ ನಡೆಸಿರುವುದು ಮನೋರಂಜನೆಗಲ್ಲ ಜನರ ಮಾತಿಗೆ ಕಾಂಗ್ರೆಸ್ ದ್ವನಿಯಾಗಿದೆ ಎಂದು ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಅಧಿವೇಶನ ಮುಂಚೆಯಿಂದಲೂ ಕಾಂಗ್ರೆಸ್ ಪಕ್ಷ ಪೆಟ್ರೋಲ್-ಡೀಸೆಲ್ ಮತ್ತು ದಿನನಿತ್ಯದ ಬೆಲೆ ಏರಿಕೆಯ ಕುರುತು ಪ್ರತಿಭಟನೆಯನ್ನು ಮಾಡಿಕೊಂಡು ಬಂದಿದೆ.ಆದರೆ ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ಶುರುವಿನಿಂದಲೂ ವಿರೋಧ ಪಕ್ಷವಾದ ಅಂದರೆ ಕಾಂಗ್ರೆಸ್ ನಾಯಕರು ಬೆಲೆ ಏರಿಕೆಯ ಕುರಿತು ವಿಭಿನ್ನವಾದ ಪ್ರತಿಭಟನೆ, ಜಾಥಗಳನ್ನು ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರತದ ಈ ನಡೆಯನ್ನು ವಿರೋಧಿಸಿ ಜನರ ಗಮನ ಸೆಳೆದಿದ್ದಾರೆ.

ಇದೆಲ್ಲ ಬೇಕಿತ್ತೇ ಅವಶ್ಯಕತೆ ಇತ್ತೆ ಎಂಬ ಕೆಲವರು ಅಸಡ್ಡೆ ನಡಾವಳಿಗೆ ಉತ್ತರಿಸಿರುವ ಸಿದ್ದರಾಮಯ್ಯ, ನಾವು ಸೈಕಲ್, ಎತ್ತಿನಗಾಡಿ, ಟಾಂಗಾ ಸವಾರಿ ಮೂಲಕ ಪ್ರತಿಭಟನೆ ನಡೆಸಿರುವುದು ಮನೋರಂಜನೆಗಲ್ಲ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನ ನಮಗೆ ಇನ್ನು ಹಳೆಯ ವಾಹನಗಳೇ ಗತಿ ಎಂದು ಮಾತನಾಡತೊಡಗಿದ್ದಾರೆ. ಅವರ ಮನದ ಮಾತಿಗೆ ಕಾಂಗ್ರೆಸ್ ಪಕ್ಷ ದನಿಯಾಗಿದೆ ಎಂದು ಹೇಳಿದ್ದಾರೆ.


