ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಹೆಚ್ಚುವರಿ 1,000 ಬಸ್‌ಗಳನ್ನು ನಿರ್ವಹಿಸಲಿದೆ. ನಿಗಮವು ಅಕ್ಟೋಬರ್ 13 ರಿಂದ 21 ರವರೆಗೆ ಮತ್ತು ಅಕ್ಟೋಬರ್ 29 ರಿಂದ ನವೆಂಬರ್ 7 ರವರೆಗೆ ವಿಶೇಷ ಬಸ್‌ಗಳನ್ನು ಓಡಿಸಲಿದೆ ಎಂದು ತಿಳಿಸಿದೆ.
ಕರ್ನಾಟದಲ್ಲಿ ಹಬ್ಬಗಳು ಶುರುವಾಗುತ್ತಿದಂತೆ ಜನರು ತಮ್ಮ ತಮ್ಮ ಊರಿಗೆ ಹೋಗಲು ಸಜ್ಜಾಗುತ್ತಾರೆ, ಅರದಲ್ಲೂ ದಸರಾ, ದೀಪಾವಳಿ ಅಂತಹ ಸಂಧರ್ಭದಲ್ಲಿ ಬಸ್, ಟ್ರೈನ್, ಕ್ಯಾಬ್, ಕಾರು ಎಲ್ಲವೂ ಬರ್ತಿಯಾಗಿಬಿಡುತ್ತದೆ. ರಾಜ್ಯದ ಅನೇಕ ಭಾಗಗಳಿಂದಲ್ಲದೇ ದೇಶ, ವಿದೇಶಗಳ ವಿವಿಧ ಭಾಗಗಳಿಂದ ಮೈಸೂರು ದಸರ ನೋಡಲು ಬರುತ್ತಾರೆ. ಈಗೆ ಬರುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಯಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರ ಸಾಮ್ಯದ KSRTC ಜವಾಬ್ಧಾರಿ. ಹಾಗಾಗಿಯೇ ಪ್ರಯಾಣಿಕರಿಗೆ ಯಾವುದೇ ರೀತಿಯ ಕಿರಿಕಿರಿ ಅಥವಾ ಜನ ದಟ್ಟಣೆಯಾಗದಂತೆ 1000 ಹೆಚ್ಚುವರಿ ಬಸ್ಗಳನ್ನು ನಿಗಮ ಓಡಿಸಲಿದೆ ನಿರ್ಧರಿಸಿದೆ.
ಹೆಚ್ಚುವರಿ ಬಸ್‌ಗಳು ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಸಿರ್ಸಿ, ಕಾರವಾರ, ರಾಯಚೂರು ಗೆ ಹೋರಡಲಿದೆ.

ಪ್ರಯಾಣಿಕರು KSRTC ವೆಬ್‌ಸೈಟ್ www.ksrtc.karnataka.gov.in ಗೆ ಲಾಗಿನ್ ಆಗಿ ಮತ್ತು ಕರ್ನಾಟಕ ಹಾಗು ಇತರ ರಾಜ್ಯಗಳಲ್ಲಿ ಪ್ರಯಾಣಿಸಲು ಆನ್‌ಲೈನ್ ಮೂಲಕ ಮತ್ತು ಸ್ಥಳೀಯ ಕೌಂಟರ್‌ಗಳ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು. ಸಾರ್ವಜನಿಕರು ಈ ಸೇವೆಯ ಪ್ರಯೋಜನವನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ.


