• Home
  • About Us
  • ಕರ್ನಾಟಕ
Saturday, November 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಎರಡನೇ ಹಂತ ನಮ್ಮ ಮೆಟ್ರೋ ಕಾಮಗಾರಿ : 13 ತಿಂಗಳ ಬಳಿಕ 855 ಮೀಟರ್ ಉದ್ದದ ಟನಲ್ ನಿಂದ ಹೊರಬಂದ TBM ಊರ್ಜಾ !

ಕರ್ಣ by ಕರ್ಣ
September 22, 2021
in ಕರ್ನಾಟಕ
0
ಎರಡನೇ ಹಂತ ನಮ್ಮ ಮೆಟ್ರೋ ಕಾಮಗಾರಿ : 13 ತಿಂಗಳ ಬಳಿಕ 855 ಮೀಟರ್ ಉದ್ದದ ಟನಲ್ ನಿಂದ ಹೊರಬಂದ TBM ಊರ್ಜಾ !
Share on WhatsAppShare on FacebookShare on Telegram

ನಮ್ಮ‌ ಮೆಟ್ರೋಗೆ  ಇಂದು ಸಂತಸದ ದಿನ. ಸುದೀರ್ಘ 13 ತಿಂಗಳ ಬಳಿಕ ಸಾಕಷ್ಟು ಅಡೆ ತಡೆ ಸವಾಲುಗಳನ್ನು ಮೆಟ್ಟಿ ನಿಂತು TBM ಊರ್ಜಾ ತನಗೆ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಇಂದು ಭೂಮಿಯಿಂದ ಹೊರ ಬಂದಿದೆ. ಇನ್ನು ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸಿದ್ರೆ, ಮೆಟ್ರೋ ಸಿಬ್ಬಂದಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.

ADVERTISEMENT

13 ತಿಂಗಳು.. 855 ಮೀಟರ್ ಉದ್ದದ ಸುರಂಗಮಾರ್ಗ.. ನಮ್ಮ ಮೆಟ್ರೋ ಯಶಸ್ವಿ ಕಾಮಗಾರಿ !

ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ  ಎಲ್ಲರು ಕುತೂಹಲದಿಂದ ವೀಕ್ಷಣೆ ಮಾಡಲು ಕಾಯುತ್ತಿದ್ದ ದೃಶ್ಯ ಇದೆ ನೋಡಿ. ಸತತ 13 ವರೆ ತಿಂಗಳ ಯಶಸ್ವಿ ಕಾರ್ಯಚರಣೆ ಮುಗಿಸಿ, ಮೆಟ್ರೋ ಮಾರ್ಗಕ್ಕೆ ಸುರಂಗ ಕೊರೆಯುತ್ತಿದ್ದ ಊರ್ಜಾ ಹೆಸರಿನ ಟಿಬಿಎಂ  ಕಂಟೋನ್ಮೆಂಟ್ ನಿಂದ ಶಿವಾಜಿನಗರದವರೆಗೆ 855 ಮೀಟರ್ ಸುರಂಗ ಕೊರೆದು, ಇಂದು ಬೆಳಿಗ್ಗೆ 10 ಗಂಟೆಗೆ ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಭೂಮಿ ಯಿಂದ ಯಶಸ್ವಿಯಾಗಿ ಹೊರ ಬರುವ ಮೂಲಕ ಮೆಟ್ರೋ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಖದಲ್ಲಿ ಸಂತಸ ಮೂಡಿಸಿತು. ಈ ಅದ್ಬುತ ಕ್ಷಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಸಾಕ್ಷಿಯಾದರು.‌ ಬಳಿಕ ಮಾತನಾಡಿದ ಸಿಎಂ, ಮೆಟ್ರೋ ಸುರಂಗ ಮಾರ್ಗ ‌ಮಾಡುವುದು ಸವಾಲಿನ ಕೆಲಸ. ಎಲ್ಲಾ ಸವಾಲಿನ ನಡುವೆ  ಮೆಟ್ರೋ ನಿಗಮ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.‌ ಮೊದಲ ಹಂತದ ವೇಳೆ ಹಲವಾರು ಸಮಸ್ಯೆಗಳು ಎದುರಾಗಿದ್ದು, ಎರಡನೇ ಹಂತವೂ ಮೆಟ್ರೊ ನಿಗಮಕ್ಕೆ ಚಾಲೆಂಜ್ ಆಗಿದೆ.‌ ನಮ್ಮ ಮೆಟ್ರೋದ ಮೂರು ಹಂತಗಳು ಪೂರ್ಣಗೊಂಡ ಬಳಿಕ ಸಾರಿಗೆ ವ್ಯವಸ್ಥೆಗೆ ನಮ್ಮ‌ ಮೆಟ್ರೊ ಲೈಫ್ ಲೈನ್ ಆಗಲಿದೆ ಎಂದರು.‌

ನಮ್ಮ ಮೆಟ್ರೋ ಹಂತ ಎರಡರ ಹೊಸ ಮಾರ್ಗದ ಕಾಳೇನಾ ಅಗ್ರಹಾರ ಮತ್ತು ನಾಗವಾರ  ನಡುವೆ 21.26 ಕಿ.ಮೀ ಮೆಟ್ರೊ ಮಾರ್ಗವಿದ್ದು,  7.5 ಕಿ.ಮಿ ಎಲಿವೇಟೆಡ್ ಹಾಗೂ 13.76 ಕಿ.ಮೀ ಸುರಂಗ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಜೋಡಿ ಸುರಂಗ ಮಾರ್ಗಗಳು ನಿರ್ಮಾಣ ವಾಗುತ್ತಿದ್ದು ಇದರ ಉದ್ದ 21 ಕಿ.ಮೀ ಇದೆ. ಸುರಂಗ ಕೊರೆಯುವ ಕಾರ್ಯದಲ್ಲಿ ಸದ್ಯ 9 ಯಂತ್ರಗಳು ಕಾರ್ಯಪ್ರವೃತ್ತವಾಗಿದ್ದು ಅದರಲ್ಲಿ ಊರ್ಜಾ ಪ್ರಥಮವಾಗಿ ಹೊರಬಂದಿದೆ. ಶಿವಾಜಿನಗರ ಅತ್ಯಂತ ಹಳೆಯ ವಸತಿ ಪ್ರದೇಶವಾಗಿರುವುದರಿಂದ ಹಳೆಯ ಮನೆಗಳು, ಸಡಿಲವಾದ ಮಣ್ಣು, ಬಾವಿ, ಹಳೆಯ ಬೋರ್‌ವೆಲ್‌ಗಳು ಸುರಂಗ ಮಾರ್ಗದಲ್ಲಿ ಇದ್ದ ಪರಿಣಾಮ ಸಾಕಷ್ಟು ಜಾಗರುಕತೆಯಿಂದ ಕೆಲಸ ಮಾಡಲಾಗಿದೆ. 

ಈ  ಸುರಂಗ ಕೊರೆಯುವ ವೇಳೆ ಶಿವಾಜಿನಗರದ ಹಲವು ಹಳೆಯ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆ  ಮನೆಗಳನ್ನ ಖಾಲಿ ಮಾಡಿಸಿ ಬೇರೆ ಕಡೆ ಇರಲು ವ್ಯವಸ್ಥೆ ಮಾಡಿತ್ತು BMRCL. ಈಗ ಹೊರಬಂದಿರುವ ಊರ್ಜಾ ಯಂತ್ರವನ್ನು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗುವುದು. ಅಲ್ಲಿಯೂ ಈ ಯಂತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಇದರ ಜೊತೆಗೆ ಉಳಿದ 8 TBM ಯಂತ್ರಗಳು ಆದಷ್ಟು ಬೇಗ ತನ್ನ ಗುರಿ ಮುಟ್ಟಲಿ ಅನ್ನೋದೆ ಬೆಂಗಳೂರು ಜನರ ಆಶಯ.

Tags: Bangalore Metro Rail CorporationBasavaraj BommaiBJPMetro DipoMetro Worknamma metroಬಿಜೆಪಿ
Previous Post

ಪ್ರಧಾನಿ ಮೋದಿ ಅಮೇರಿಕಾ ಪ್ರವಾಸ; ಕಳೆದ ಎರಡು ವರ್ಷಗಳಲ್ಲಿ ಕೈಗೊಂಡ ವಿದೇಶ ಪ್ರವಾಸಗಳೆಷ್ಟು? ಇಲ್ಲಿದೆ ವಿವರ

Next Post

ಚುನಾವಣಾ ತಂತ್ರಗಾರಿಕೆಯಲ್ಲಿ BJP ಕಾಂಗ್ರೆಸಿಗಿಂತಲೂ ಮುಂದಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ -Brijesh Kalappa

Related Posts

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?
Top Story

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

by ಪ್ರತಿಧ್ವನಿ
November 22, 2025
0

ಮೇಷ ರಾಶಿಯ ಈ ದಿನದ ಭವಿಷ್ಯ ಮೇಷ ರಾಶಿಯವರು ಇಂದು ಆರಂಭಿಸುವ ಕೆಲಸಗಳು ವೇಗವಾಗಿ ಸಾಗಲಿದೆ. ಅತಿಯಾಗಿ ನಂಬಿಕೆ ಇಡುವವರ ಬಗ್ಗೆ ಎಚ್ಚರ ಇರಲಿ. ಹಣಕಾಸಿನಲ್ಲಿ ಜಾಗ್ರತೆ...

Read moreDetails
ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

November 21, 2025
Next Post
ಚುನಾವಣಾ ತಂತ್ರಗಾರಿಕೆಯಲ್ಲಿ BJP ಕಾಂಗ್ರೆಸಿಗಿಂತಲೂ ಮುಂದಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ -Brijesh Kalappa

ಚುನಾವಣಾ ತಂತ್ರಗಾರಿಕೆಯಲ್ಲಿ BJP ಕಾಂಗ್ರೆಸಿಗಿಂತಲೂ ಮುಂದಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ -Brijesh Kalappa

Please login to join discussion

Recent News

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?
Top Story

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

by ಪ್ರತಿಧ್ವನಿ
November 22, 2025
ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

November 22, 2025
ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!