ಸತತ 15 ದಿನಗಳ ಕಾಲ ಸಾರಿಗೆ ನಿಗಮಗಳ ವಿರುದ್ಧ ಸಮರ ಸಾರಿದ್ದ 4200 ಸಾರಿಗೆ ನೌಕರರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ನೀಡಿತ್ತು. ಎಲ್ಲವೂ ಸರಿ ಇದ್ರೂ ಬಂದು ಹೋಗುವ ಅರೆನಾಯಕರ ಮಾತು ಕೇಳಿ ಬೀದಿಗಳಿದ ಪರಿಣಾಮ ಕೈಲಿದ್ದ ಕೆಲಸವೂ ಇಲ್ಲದಾಗಿತ್ತು. ಇಷ್ಟು ಸಾಲದು ಎಂಬಂತೆ ನಿಗಮಗಳೆ ಕೊಟ್ಟಿದ್ದ ವಸತಿಗೃಹಗಳಿಂದಲೂ ಖಾಲಿ ಮಾಡಿಸಲಾಗಿತ್ತು. ಇದರ ಪರಿಣಾಮ ನರಕ ಯಾತನೆ ಅನುಭವಿಸುವಂತೆ ಆಗಿದೆ. ಆದರೆ ಇದೀಗ ಎಲ್ಲವೂ ಇತ್ಯರ್ಥವಾಗಿ ಸಾರಿಗೆ ನೌಕರರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.
16ನೇ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿದ್ದ ನೌಕರರು !
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬರೊಬ್ಬರಿ 15 ದಿನಗಳ ಕಾಲ ಇಡೀ ರಾಜ್ಯಾದ್ಯಂತ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ರು. 16ನೇ ವೇತನ ಆಯೋಗಕ್ಕೆ ಸೇರ್ಪಡೆ, ಅಂತರನಿಗಮ ವರ್ಗಾಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ಸರ್ಕಾರದ ವಿರುದ್ಧ ಬೀದಿಗಿಳಿದಿದ್ರು. ಬಸ್ ಗಳನ್ನ ರಸ್ತೆಗೆ ಇಳಿಸದೇ, ಗ್ಯಾರೇಜ್ ಗಳಲ್ಲಿ ಸ್ಪ್ಯಾನರ್ ಮುಟ್ಟದೇ ನ್ಯಾಯ ಬೇಕು ನ್ಯಾಯ ಎಂದು ಮುಷ್ಕರ ನಡೆಸಿದ್ರು. ಹೌದು… ಕಳೆದ ಏಪ್ರಿಲ್ 01 ರಿಂದ 15ರ ವರೆಗೆ ಸರ್ಕಾರದ ವಿರುದ್ಧ ಹಗೆ ಸಾಧಿಸಿದ್ದ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದೇ ಮೊಂಡು ತನವನ್ನ ಪ್ರಯೋಗ ಮಾಡಿದ್ರು.
ಇಲ್ಲಸಲ್ಲದ ನಾಯಕತ್ವಕ್ಕೆ ಬಲಿಯಾಗಿದ್ದ ಇಡೀ ನಾಲ್ಕು ನಿಗಮದ ನೌಕರರು ಮಾಡೋ ಕೆಲಸ ಬಿಟ್ಟು ಬೀದಿಗಿಳಿದಿದ್ರು. 16ನೇ ವೇತನ ಆಯೋಗ, ಖಾಯಂ ನೌಕರಿ ಸೇರದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಸರ್ಕಾರಕ್ಕೆ ದಿಕ್ಕಾರವನ್ನ ಕೂಗಿದ್ರು. ಅಂದಿನ ಅವಧಿಯಲ್ಲಿದ್ದ ಮುಖ್ಯಮಂತ್ರಿ ಬಿಎಸ್ ವೈ, ಸೇರಿದಂತೆ ಸಾರಿಗೆ ಸಚಿವ ಲಕ್ಮಣ್ ಸವದಿ ಕೆಲಸಕ್ಕೆ ಹಾಜರಾಗುವಂತೆ ಪರಿಪರಿಯಾಗಿ ಮನವಿ ಮಾಡಿದ್ರು. ಯಾವುದಕ್ಕೂ ಜಗ್ಗದ 4200ಕ್ಕೂ ಹೆಚ್ಚು ನೌಕರರು ತಮ್ಮ ಮುಷ್ಕರವನ್ನ ಮಾತ್ರ ಕೈ ಬಿಡದೆ 15 ದಿನಗಳ ಕಾಲಾ ಮುಂದುವರೆಸಿದ್ರು. ಇದ್ರ ಪರಿಣಾಮ ಸರ್ಕಾರಕ್ಕೆ ಕೋಟ್ಯಾಂತರ ರೂ ನಷ್ಟ ಅನುಭವಿಸುವಂತಾಗಿತ್ತು. ಇದನ್ನ ಮನಗಂಡ ಸರ್ಕಾರ ಮುಷ್ಕರದಲ್ಲಿ ಭಾಗಿಯಾಗಿದ್ದ ಒಟ್ಟು 4500 ಮಂದಿಯನ್ನ ಕೆಲಸದಿಂದ ವಜಾ ಮಾಡಿತ್ತು.
ನಿಗಮಗಳು ನೀಡಿದ್ದ ವಸತಿಗೃಹಗಳಿಂದಲೂ ಖಾಲಿ ಮಾಡಿಸಿತ್ತು. ಬಳಿಕ ಯಾರೋ ಮಾಡಿದ ಕುಮ್ಮಕ್ಕಿಗೆ ಬಲಿ ಎಂದು ಮನಗಂಡ ವಜಾಗೊಂಡ ನೌಕರರಿಗೆ ನಿಜ ಅರಿವಾಗಿದೆ. ಸರ್ಕಾರ ಹಾಗು ಸಂಬಂಧ ಪಟ್ಟ ಅಧಿಕಾರಿಗಳ ಕಚೇರಿಗೆ ಅಲೆದು ಅಲೆದು ಕಳೆದುಕೊಂಡಿದ್ದ ಕೆಲಸ ಇದೀಗ ಪಡೆದುಕೊಂಡಾಗಿದೆ.
ಸಾರಿಗೆ ಮುಖಂಡರ ಜೊತೆ ಸಭೆ ನಡೆಸಿದ ಸಾರಿಗೆ ಸಚಿವ ಶ್ರೀರಾಮುಲು !
ಇದೇ ವಿಚಾರವಾಗಿ ಇಂದು ಸೆವೆನ್ ಮಿನಿಷ್ಟರ್ ಕ್ವಾಟ್ರಸ್ ನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಸೇರಿದಂತೆ ಹಲವಾರು ಟ್ರೇಡ್ ಯೂನಿಯನ್ ಗಳ ನಾಯಕರು ಗಳ ನಡುವೆ ಸಭೆ ನಡೆಯಿತು. ಸಭೆಯಲ್ಲಿ 12 ಡಿಮ್ಯಾಂಡ್ ಗಳನ್ನ ಸರ್ಕಾರದ ಮುಂದೆ ಇಟ್ಟಿದ್ದರು. ಇದೆಲ್ಲದರ ನಡುವೆ ವಜಾಗೊಂಡಿದ್ದ ನೌಕರರ ಮರು ನೇಮಕ ವಿಚಾರವಾಗಿ ಹೆಚ್ಚು ಚರ್ಚೆ ಆಗಿತ್ತು. ಎಲ್ಲವೂ ಸರಿಪಡಿಸಬೇಕೆಂಬ ಮನದಲ್ಲಿದ್ದ ಶ್ರೀರಾಮುಲು ವಜಾಗೊಂಡ 4200 ನೌಕರರಿಗೆ ಸಿಹಿ ಸುದ್ದಿ ನೀಡಿದ್ರು. ಅಲ್ಲದೆ ಟ್ರೈನಿಯಲ್ಲಿದ್ದ ನೌಕರರು ಮುಷ್ಕರದಲ್ಲಿ ಭಾಗಿಯಾಗಿ ಕೆಲಸ ಕಳೆದುಕೊಂಡಿದ್ದಾರೆ. ಅವರಿಗೂ ಸಧ್ಯದಲ್ಲೆ ಕೆಲಸ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ರು.
ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆ ಸಾರಿಗೆ ಸೇವೆಯನ್ನೆ ಅಲ್ಲೋಲ ಕಲ್ಲೋಲ ಮಾಡಿ ಸಾರಿಗೆ ನೌಕರರು ಬೀದಿಗಿಳಿದು ರಂಪಾಟ ಮಾಡಿದ್ರು. ಇದರಿಂದ ಸರ್ಕಾರಕ್ಕೆ ಬೆಟ್ಟದಷ್ಟು ನಷ್ಟ ಆಗಿತ್ತು. ಸಾರ್ವಜನಿಕರು ತೊಂದರೆ ಮೇಲೆ ತೊಂದರೆ ಅನುಭವಿಸುವಂತಾಗಿತ್ತು. ಇದಕ್ಕೆ ಕೆಂಡವಾಗಿದ್ದ ಸರ್ಕಾರ ವಜಾ ಅಸ್ತ್ರ ಪ್ರೆಯೋಗ ಮಾಡಿತ್ತು. ಇದೀಗ ದುಡುಕಿದವನಿಗೆ ಬುದ್ದಿ ಕಲಿಯುವಂತೆ ಮಾಡಿದ ಸರ್ಕಾರ ವಜಾ ಅಸ್ತ್ರ ಪ್ರಯೋಗ ವಾಪಸ್ಸಾತಿಗೆ ಮುಂದಾಗಿದೆ.