• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದಾಖಲೆ‌ ರೀತಿಯಲ್ಲಿ ಲಸಿಕೆ‌ ಹಂಚಿದ ಕರ್ನಾಟಕ: ಒಂದೇ ದಿನದಲ್ಲಿ 26.62 ಲಕ್ಷ ಡೋಸ್ ವ್ಯಾಕ್ಸಿನೇಷನ್‌.!!

ಕರ್ಣ by ಕರ್ಣ
September 17, 2021
in ಕರ್ನಾಟಕ
0
ದಾಖಲೆ‌ ರೀತಿಯಲ್ಲಿ ಲಸಿಕೆ‌ ಹಂಚಿದ ಕರ್ನಾಟಕ: ಒಂದೇ ದಿನದಲ್ಲಿ 26.62 ಲಕ್ಷ ಡೋಸ್ ವ್ಯಾಕ್ಸಿನೇಷನ್‌.!!
Share on WhatsAppShare on FacebookShare on Telegram

ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಮಹಾ ಲಸಿಕೆ‌ ಅಭಿಯಾನ ನಡೆಸಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಕೂಡ 31,75,000 ಲಸಿಕೆ‌ ಹಂಚುವ ಗುರಿ‌ ಹೊಂದಿತ್ತು. ಇದೀಗ ದೇಶದ ಇತರೆ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ ‌ಇಡೀ ದೇಶದಲ್ಲಿ ದಿನವೊಂದಕ್ಕೆ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ‌9 ಗಂಟೆಯ ಅಂಕಿ ಅಂಶ ಪ್ರಕಾರ ಕರ್ನಾಟಕ ‌ಒಟ್ಟು 26.62 ಲಕ್ಷ‌ ಡೋಸ್ ಲಸಿಕೆ ಹಂಚಿಕೆ ಮಾಡಿ ಮುಂಚೂಣಿಯಲ್ಲಿದ್ದ ಉತ್ತರ ಪ್ರದೇಶ ಹಾಗೂ ಬಿಹಾರವನ್ನು‌ ಹಿಂದಿಕ್ಕಿದೆ.

ADVERTISEMENT

ಲಸಿಕೆ ಹಂಚಿಕೆಯಲ್ಲಿ ದೇಶದಲ್ಲೇ ಕರ್ನಾಟಕ ದಾಖಲೆ.!!

ಇತರೆ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಐತಿಹಾಸಿಕ ರೀತಿಯಲ್ಲಿ ಲಸಿಕೆ ಹಂಚಿಕೆ ಮಾಡಿದೆ ಕರ್ನಾಟಕ. ಲಸಿಕೆ ಮಹಾ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದ ಉತ್ತರ ಪ್ರದೇಶ, ಬಿಹಾರವನ್ನು ಕರ್ನಾಟಕ ಹಿಂದಿಕ್ಕಿದೆ. ಒಂದೇ ದಿನದಲ್ಲಿ 26.62 ಲಕ್ಷ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ. ಉತ್ತರ ಪ್ರದೇಶ ಹಾಗೂ ಬಿಹಾರ ಸರಿಯಾಗಿ 24.86 ಲಕ್ಷ ಡೋಸ್ ಲಸಿಕೆ‌ ಹಂಚಿಕೆ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ.‌ ಬೆಂಗಳೂರಿನಲ್ಲಿ 4 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಹಂಚಲಾಗಿದೆ.‌ ಬೆಂಗಳೂರು ಹೊರತಾಗಿ ಬೆಳಗಾವಿ 2.39 ಡೋಸ್, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ 1.33 ಡೋಸ್, ತುಮಕೂರು 1.24 ಡೋಸ್, ಮಂಡ್ಯ 1.15 ಡೋಸ್ ಹಂಚಿಕೆ ಮಾಡಿದೆ. ಶಿವಮೊಗ್ಗ, ಧಾರವಾಡ, ರಾಮನಗರ, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳಲ್ಲಿ ಶೆ. 100 ರಷ್ಟು ಲಸಿಕೆ‌ ನೀಡಿ‌ ಗುರಿ ಮುಟ್ಟುವಲ್ಲಿ‌ ಯಶ ಕಂಡಿದೆ. ಈ ಮೂಲಕ ಸೆಪ್ಟೆಂಬರ್ ನಲ್ಲಿ ಈವರೆಗೆ 87 ಲಕ್ಷ‌ ಡೋಸ್ ಲಸಿಕೆ ಹಂಚಿದ ಹೆಗ್ಗಳಿಕೆ ಕರ್ನಾಟಕದ್ದು. 

ಒಟ್ಟಾರೆ ರಾಜ್ಯದಲ್ಲಿ  5 ಕೋಟಿಗೂ ಅಧಿಕ ಡೋಸ್ ಲಸಿಕೆ ಹಂಚಿಕೆ.!!

ಈ‌ ಲಸಿಕೆ ಮಹಾ ಅಭಿಯಾನದ ಮೂಲಕ ರಾಜ್ಯ ಸರ್ಕಾರದ ಮಹತ್ವದ ಮೈಲಿಗಲ್ಲು‌ ಸಾಧಿಸಿದೆ. ರಾಜ್ಯದಲ್ಲಿ 5.12 ಕೋಟಿ‌ ಡೋಸ್ ಲಸಿಕೆಯನ್ನು ಹಂಚಿಕೆ ಮಾಡಿದೆ. ಈ ಮೂಲಕ‌ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕ ಅಲ್ಪ ಮಟ್ಟಿನ ಜಿಗಿತ ಸಾಧಿಸಿದೆ. ಇದೇ ಮಾದರಿಯಲ್ಲಿ ಲಸಿಕೆ ಹಂಚಿಕೆಯಾದರೆ ಡಿಸೆಂಬರ್ ಅಂತ್ಯೊದಳಗೆ ಇಡೀ ಕರ್ನಾಟಕದ ಜನತೆ ಲಸಿಕೆ‌ ಹಾಕಿಸಿಕೊಂಡು ಕೊರೋನಾ ಮೂರನೇ ಅಲೆಯ ಹೊಡೆತದಿಂದ ಪಾರಾಗಲಿದೆ.

ಒಂದೇ ದಿನಕ್ಕೆ ಇಡೀ ದೇಶದಲ್ಲಿ 2.25 ಕೋಟಿ‌ ಡೋಸ್ ವ್ಯಾಕ್ಸಿನೇಷನ್‌.!!

ಅತ್ತ ಸಮರೋಪಾದಿಯಲ್ಲಿ ಎಲ್ಲಾ ರಾಜ್ಯಗಳು ಲಸಿಕೆ ಅಭಿಯಾನದ ನಡೆಸಿರುವ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ದೇಶದಲ್ಲಿ  2.25 ಕೋಟಿ ಡೋಸ್ ಲಸಿಕೆ‌ ಹಂಚಿಕೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ 79 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ. ಒಟ್ಟಾರೆ ಬಿಜೆಪಿ ಪ್ರಧಾನಿ ಮೋದಿ ಹುಟ್ಟಿದ ದಿನದಂದು ಭರ್ಜರಿ ಲಸಿಕೆ‌ ಹಂಚಿಕೆಮಾಡಿ ಬೃಹತ್ ಲಸಿಕಾ ಅಭಿಯಾನವನ್ನು‌ ಯಶಸ್ವಿಯಾಗಿ ನಡೆಸಿದೆ. 

Tags: coronavirusCovid 19covid-19 vaccineKarnatakaMega vaccine drive today in Karnatakavaccination
Previous Post

ದೇಶದ ಜನಪರ ದನಿಗಳ ದಮನದ ರಾಜಕೀಯ ದಂಡವಾದವೇ ಐಟಿ- ಇಡಿ?

Next Post

ಗುಜರಾತಿನ ಮುಖ್ಯಮಂತ್ರಿ ಬದಲಾವಣೆಯ ಹಿಂದಿನ ರಾಜಕೀಯ ಕಾರಣಗಳೇನು?

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಗುಜರಾತಿನ ಮುಖ್ಯಮಂತ್ರಿ ಬದಲಾವಣೆಯ ಹಿಂದಿನ ರಾಜಕೀಯ ಕಾರಣಗಳೇನು?

ಗುಜರಾತಿನ ಮುಖ್ಯಮಂತ್ರಿ ಬದಲಾವಣೆಯ ಹಿಂದಿನ ರಾಜಕೀಯ ಕಾರಣಗಳೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada