• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಗುಜರಾತಿನ ಮುಖ್ಯಮಂತ್ರಿ ಬದಲಾವಣೆಯ ಹಿಂದಿನ ರಾಜಕೀಯ ಕಾರಣಗಳೇನು?

ಫಾತಿಮಾ by ಫಾತಿಮಾ
September 18, 2021
in Uncategorized
0
ಗುಜರಾತಿನ ಮುಖ್ಯಮಂತ್ರಿ ಬದಲಾವಣೆಯ ಹಿಂದಿನ ರಾಜಕೀಯ ಕಾರಣಗಳೇನು?
Share on WhatsAppShare on FacebookShare on Telegram

ಬಿಜೆಪಿಯ ರಾಜಕೀಯ ಪ್ರಯೋಗಶಾಲೆ ಎಂದೇ ಗುರುತಿಸಿಕೊಳ್ಳುವ ಗುಜರಾತ್ ಕಳೆದ ಕೆಲವು ದಿನಗಳಿಂದ ಮತ್ತೊಮ್ಮೆ ರಾಜಕೀಯ ಪಂಡಿತರ ಗಮನ ಸೆಳೆಯುತ್ತಿದೆ. ರಾಷ್ಟ್ರ ರಾಜಕಾರಣದ ವಿಷಯದಲ್ಲೂ ಪ್ರಧಾನಿ‌ ನರೇಂದ್ರ ಮೋದಿಯವರು ಹೆಚ್ಚಾಗಿ ‘ಗುಜರಾತ್ ಮಾದರಿ’ಯ ಪ್ರಸ್ತಾಪವನ್ನು ಮಾಡುತ್ತಲೇ ಅಧಿಕಾರಕ್ಕೆ ಬಂದಿದ್ದಾರೆ. ಕೇವಲ 26 ಸಂಸದರನ್ನು ಹೊಂದಿರುವ ಈ ರಾಜ್ಯ ಸದಾ ರಾಜಕೀಯ ತಂತ್ರಗಾರಿಕೆಗಳಿಂದಲೇ ರಾಷ್ಟ್ರದ ಗಮನ ಸೆಳೆಯುತ್ತದೆ.

ADVERTISEMENT

ಕಳೆದ ಆರು ತಿಂಗಳುಗಳಲ್ಲಿ ಕರ್ನಾಟಕವೂ ಸೇರಿದಂತೆ ನಾಲ್ಕು ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ. ಕೆಲವು ಕಡೆ ಜಾತಿ ಸಮೀಕರಣಗಳನ್ನು ಸಮದೂಗಿಸಲು, ಇನ್ನು ಕೆಲವು ರಾಜ್ಯಗಳಲ್ಲಿ ಪಕ್ಷದ ಒಂದು ಗುಂಪಿನ ಬೇಡಿಕೆಯನ್ನು ಈಡೇರಿಸಲು ಮತ್ತು ಕೆಲವು ಕಡೆ ಸ್ಥಳೀಯ ನಾಯಕತ್ವ ಹೈಕಮಾಂಡ್‌ಗಿಂತಲೂ ಹೆಚ್ಚು ಬಲಿಷ್ಠವಾಗಬಾರದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ.

ಭೂಪೇಂದ್ರ ಪಟೇಲ್

ಈಗ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು  ಪದಚ್ಯುತಿಗೊಂಡ ನಾಲ್ಕನೇ ಮುಖ್ಯಮಂತ್ರಿಯಾಗಿದ್ದು ಭೂಪೇಂದ್ರ ಪಟೇಲ್ ಅವರನ್ನು ನೂತನ‌ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಇದು ಗುಜರಾತ್‌ನಲ್ಲಿ ಮತ್ತೊಂದು ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಿದೆ. ಹೊಸ ಸರ್ಕಾರದಲ್ಲಿ ವಿಜಯ್ ರೂಪಾನಿ ಸರ್ಕಾರದ ಒಬ್ಬ ಸಚಿವರಿಗೂ ಅವಕಾಶ ನೀಡಲಾಗಿಲ್ಲ.  ಹಿಂದಿನ ಸರ್ಕಾರದ ಎಲ್ಲಾ ಮಂತ್ರಿಗಳನ್ನು ಅಧಿಕಾರ ಕೇಂದ್ರದಿಂದ ಹೊರಗಿಟ್ಟಿರುವುದು ಬಹುಶಃ ದೇಶದಲ್ಲಿ ಇದೇ ಮೊದಲ ಬಾರಿ.

ಭೂಪೇಂದ್ರ ಪಟೇಲ್ ಅವರು ಮೊದಲ ಬಾರಿಯ ಶಾಸಕರಾಗಿದ್ದು ಯುಪಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರ ಪರಮಾಪ್ತ.  ಕೋವಿಡ್ -19 ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ರೂಪಾನಿ ನೇತೃತ್ವದ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ರಾಜ್ಯದ ಮತದಾರರಲ್ಲಿ ಸುಮಾರು 14 ಪ್ರತಿಶತದಷ್ಟು ಜನರನ್ನು ಹೊಂದಿರುವ ಪ್ರಬಲ ಪಾಟಿದಾರ್ ಸಮುದಾಯವನ್ನು ಸಮಾಧಾನಪಡಿಸಲು ಈ ಕ್ರಮ‌ ಕೈಗೊಳ್ಳಲಾಗಿದೆ ಎಂಬುವುದು ರಾಜಕೀಯ ಪಂಡಿತರ ಲೆಕ್ಕಾಚಾರ.

2001 ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ, 2002 ರಲ್ಲಿ ವಿಧಾನಸಭಾ ಚುನಾವಣೆಯನ್ನು ದೊಡ್ಡ ಅಂತರದಲ್ಲಿ ಗೆದ್ದಿದ್ದರು. ಅದಾದ  ನಂತರ, 2005 ರ ಚುನಾವಣೆಗಳಲ್ಲಿ ಅಚ್ಚರಿಯ ನಡೆಯೆಂಬಂತೆ ಮೋದಿ ಎಲ್ಲಾ ಹಾಲಿ ಕಾರ್ಪೊರೇಟರ್‌ಗಳನ್ನು ಬದಲಾಯಿಸಿದ್ದರು. ಆದರೆ ಎಲ್ಲರ ನಿರೀಕ್ಷೆಗಳನ್ನು ಮೀರಿ ಈ ಪ್ರಯೋಗವು ಭಾರೀ ಯಶಸ್ವಿಯಾಗಿತ್ತು.

ವಿಜಯ್‌ ರೂಪಾನಿ

ರಾಷ್ಟ್ರ ರಾಜಕಾರಣದಲ್ಲಿ ಮೋದಿಯವರು ಚಾಲ್ತಿಯಲ್ಲಿ ಇರಬೇಕಾದರೆ 2022ರಲ್ಲಿ ನಡೆಯಲಿರುವ ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು ಅವರ ಪರ ಇರಲೇಬೇಕಿರುವುದನ್ನು ಗಮನದಲ್ಲಿಟ್ಟುಕೊಂಡು ಹೊಸ ಸರ್ಕಾರದಲ್ಲಿ ಜಾತಿ ಸಮೀಕರಣಗಳು ಸಮತೋಲಿತವಾಗಿರುವಂತೆ ನೋಡಿಕೊಳ್ಳಲಾಗಿದೆ.  ಪ್ರಸ್ತುತ ಮಂತ್ರಿಮಂಡಲದ 10 ಕ್ಯಾಬಿನೆಟ್ ಮಂತ್ರಿಗಳು ಮತ್ತು 14 ರಾಜ್ಯ ಮಂತ್ರಿಗಳಲ್ಲಿ, ಏಳು ಪಾಟಿದಾರರು, ಏಳು ಒಬಿಸಿ ಸದಸ್ಯರು, ಇಬ್ಬರು ಬ್ರಾಹ್ಮಣರು, ಮೂರು ಎಸ್ಟಿಗಳು, ಇಬ್ಬರು ಎಸ್ಸಿಗಳು, ಇಬ್ಬರು ಕ್ಷತ್ರಿಯರು ಮತ್ತು ಒಬ್ಬ ಜೈನರಿದ್ದಾರೆ. ಈ ಸಂಪುಟದಲ್ಲಿ ಕೇವಲ ಮೂವರು ಮಂತ್ರಿಗಳು ಮಾತ್ರ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.  ಆನಂದೀಬೆನ್ ಪಟೇಲ್ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ರಾಜೇಂದ್ರ ತ್ರಿವೇದಿ, ಶಂಕರಸಿಂಹ ವಘೇಲಾ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಾಘವಜಿ ಪಟೇಲ್ ಮತ್ತು ಕೇಶುಭಾಯಿ ಪಟೇಲ್ ಮತ್ತು ನರೇಂದ್ರ ಮೋದಿ ಸರ್ಕಾರಗಳ ಭಾಗವಾಗಿದ್ದ ಕಿರಿತ್ಸಿನ್ ರಾಣಾ ಅವರನ್ನು ಹೊರತು ಪಡಿಸಿ ಉಳಿದ ಯಾರೂ ಅನುಭವಸ್ಥರಲ್ಲ.

ಜಿಡಿಪಿ ಕುಸಿತ, ಆರ್ಥಿಕ ನಿರ್ವಹಣೆಯಲ್ಲಿನ ವೈಫಲ್ಯ, ವಿತ್ತೀಯ ಕೊರತೆ, ತೈಲ ಬೆಲೆ ಏರಿಕೆ, ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯ, ಅಸಮರ್ಪಕ ಜಿಎಸ್ಟಿ ನೀತಿ ಹೀಗೆ ಹಲವು ಕಾರಣಗಳಿಂದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಸರ್ಕಾರ ಜನತೆಯ ಗಮನವನ್ನು ಬೇರೆ ಕಡೆ ಹರಿಸಲು ಮತ್ತು ಎಲ್ಲಾ ವೈಫಲ್ಯಗಳಿಗೂ ರಾಜ್ಯ ಸರ್ಕಾರವೇ ಕಾರಣ ಎಂಬಂತೆ ಬಿಂಬಿಸಲು ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿದೆ ಎಂಬ ಅಭಿಪ್ರಾಯಗಳೂ ಇವೆ.

ಹೀಗೆ ದಿಢೀರನೆ, ಯಾವ ಕಾರಣವನ್ನೂ ನೀಡದೆ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಸಂಸ್ಕೃತಿ ಮೊದಲು ಕಾಂಗ್ರೆಸ್‌ನಲ್ಲಿತ್ತು. ಈಗ ಅದೇ ಸಂಸ್ಕೃತಿಯನ್ನು ಬಿಜೆಪಿಯು ಎರವಲು ಪಡೆದಂತೆ ತೋರುತ್ತಿದೆ. ಸದ್ಯಕ್ಕೆ ಗುಜರಾತ್ ಬಿಜೆಪಿಯಲ್ಲಿ ಎಲ್ಲವೂ ಸರಿಯಿರುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕೊನೆಯ ಕ್ಷಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಒಂದು ದಿನ ಮುಂದೂಡಬೇಕಾಗಿ ಬಂದುದು ಯಾವ ಸ್ಥಿತಿಯನ್ನು ಸೂಚಿಸುತ್ತದೆ ಎಂಬುವುದಕ್ಕೆ ಕಾಲವೇ ಉತ್ತರ ನೀಡಬಲ್ಲುದಷ್ಟೇ.

Tags: BJPನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ದಾಖಲೆ‌ ರೀತಿಯಲ್ಲಿ ಲಸಿಕೆ‌ ಹಂಚಿದ ಕರ್ನಾಟಕ: ಒಂದೇ ದಿನದಲ್ಲಿ 26.62 ಲಕ್ಷ ಡೋಸ್ ವ್ಯಾಕ್ಸಿನೇಷನ್‌.!!

Next Post

ಭಾರತದ ಲಕ್ಷಾಂತರ ಬಡವರಿಗೆ ಇನ್ನೂ ತಲುಪುತ್ತಿಲ್ಲ ಪಡಿತರ.!

Related Posts

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು
Uncategorized

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

by ಪ್ರತಿಧ್ವನಿ
April 13, 2026
0

ಧಾರವಾಡ ನಗರದ ಮಾಳಾಪುರ ಬಡಾವಣೆಯ ಹಾಶ್ಮಿ ನಗರದಲ್ಲಿ ನಡೆದ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ ಪ್ರಕರಣವನ್ನು ಉಪನಗರ ಠಾಣೆ ಪೊಲೀಸರು ಶೀಘ್ರವೇ ಭೇದಿಸಿದ್ದಾರೆ. ಕೊಲೆ...

Read moreDetails
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

April 9, 2026
ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

April 9, 2026
ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

April 9, 2026
Next Post
ಭಾರತದ ಲಕ್ಷಾಂತರ ಬಡವರಿಗೆ ಇನ್ನೂ ತಲುಪುತ್ತಿಲ್ಲ ಪಡಿತರ.!

ಭಾರತದ ಲಕ್ಷಾಂತರ ಬಡವರಿಗೆ ಇನ್ನೂ ತಲುಪುತ್ತಿಲ್ಲ ಪಡಿತರ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada