ಇತ್ತೀಚೆಗೆ ಸೆಪ್ಟೆಂಬರ್ 9ನೇ ತಾರೀಕಿನಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬ್ರಿಕ್ಸ್ ಶೃಂಗ ಸಭೆ ನಡೆಯಿತು. ಈ ಸಭೆಯಲ್ಲಿ ತಾಲಿಬಾನ್ ವಶಕ್ಕೆ ಪಡೆದಿರುವ ಅಫ್ಘಾನಿಸ್ತಾನದ ಬೆಳವಣಿಗೆ ಬಗ್ಗೆ ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿದವು. ಇಂದಿನ ಅಫ್ಘಾನಿಸ್ತಾನದ ಪರಿಸ್ಥಿತಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಎಂದು ರಷ್ಯಾ ಆರೋಪಿಸಿತ್ತು. ಇನ್ನೊಂದೆಡೆ ತಾಲಿಬಾನ್ ಉಗ್ರರನ್ನು ಬೆಂಬಲಿಸುತ್ತಿರುವ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಎಚ್ಚರಿಕೆ ನೀಡಿತ್ತು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ 13ನೇ ಬ್ರಿಕ್ಸ್ ದೇಶಗಳ ವರ್ಚುವಲ್ ಶೃಂಗಸಭೆಯಲ್ಲಿ ಇಂದು ವಿಶ್ವ ಎದುರಿಸುತ್ತಿರುವ ಭಯೋತ್ಪಾದನೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಯ್ತು. ಈ ವೇಳೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಅಫ್ಘಾನ್ ಬೆಳವಣಿಗೆಯಿಂದ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಧಕ್ಕೆಯಾಗುವ ಆತಂಕ ವ್ಯಕ್ತಪಡಿಸಿದವು. ತಾಲಿಬಾನ್ ವಿರುದ್ಧ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದವು.
ಇನ್ನು, ಸಭೆಯಲ್ಲಿ ಅಮೆರಿಕ ಮತ್ತು ಪಾಕ್ ವಿಚಾರವೂ ಚರ್ಚೆಯಾಯ್ತು. ಅಫ್ಘಾನಿಸ್ತಾನದಲ್ಲಿ ರಚನೆಯಾದ ತಾಲಿಬಾನ್ ಸರ್ಕಾರ ಜಾಗತಿಕ ಭದ್ರತೆಗೆ ಧಕ್ಕೆ ತರಲಿದೆ. ಮಾನವ ಹಕ್ಕು ಉಲ್ಲಂಘನೆ, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರ ಮೇಲೆ ತಾಲಿಬಾನಿಗಳು ದಾಳಿ ಕಂಡಲ್ಲಿ ಗುಂಡಿಟ್ಟು ದಾಳಿ ನಡೆಸಿದ್ದಾರೆ. ಇಲ್ಲಿನ ತಾಲಿಬಾನಿಗಳ ಉಗ್ರ ಚಟುವಟಿಕೆಗಳು ಜಾಗತಿಕ ಆತಂಕಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂತು.
ಐದು ರಾಷ್ಟ್ರಗಳ 12ನೇ ಬ್ರಿಕ್ಸ್ ಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ದಕ್ಷಿಣ ಆಫ್ರಿಕ ಅಧ್ಯಕ್ಷ ಸಿರಿಲ್ ರಾಮಫೋಸಾ, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಪಾಲ್ಗೊಂಡಿದ್ದರು. ಈ ಸಭೆಯ ಅಧ್ಯಕ್ಷತೆ ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು. ಸಭೆಯಲ್ಲಿ ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಬ್ರಿಕ್ಸ್ ನಿರ್ಧಾರ ಕೈಗೊಂಡಿದೆ.

ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಬ್ರಿಕ್ಸ್, ಅಫ್ಘಾನ್ ಮತ್ತೊಮ್ಮೆ ಭಯೋತ್ಪಾದಕರ ಸ್ವರ್ಗ ಆಗಬಾರದು ಎಂದು ಪಣತೊಟ್ಟಿತು. ಅಫ್ಘಾನ್ ಉಗ್ರರ ತಾಣವಾಗಲು ಅವಕಾಶ ಕೊಡಬಾರದು. ನಮ್ಮ ದೇಶಗಳಿಗೆ ಯಾವುದೇ ಆತಂಕ ಎದುರಾಗಬಾರದು. ಅಫ್ಘಾನ್ನಲ್ಲಿ ಮಾನವ ಹಕ್ಕು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ರಕ್ಷಣೆ ಮಾಡಬೇಕು ಎಂದು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು ತೀರ್ಮಾನಿಸಿದರು.
ಬ್ರಿಕ್ಸ್ ದೇಶಗಳ ಪ್ರಮುಖ ಹೈಲೈಟ್ಸ್
ಭಯೋತ್ಪಾದನೆಯು ವಿಶ್ವ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ
ಭಯೋತ್ಪಾದನೆ ಪ್ರತಿಪಾದಿಸಬಾರದು, ಸಹಾಯ & ಪ್ರೋತ್ಸಾಹ ನೀಡಬಾರದು
ರಾಷ್ಟ್ರಗಳು ತಮ್ಮ ತಪ್ಪನ್ನು ಅರಿತು, ಪರಾಮರ್ಶೆ ಮಾಡಿಕೊಳ್ಳಬೇಕು
ಭಯೋತ್ಪಾದನೆಯನ್ನು ಸಂಘಟಿತವಾಗಿ ಹಿಮ್ಮೆಟ್ಟಿಸುವ ಅವಶ್ಯಕತೆ
ಅಫ್ಘಾನಿಸ್ತಾನದ ಸದ್ಯದ ಬೆಳವಣಿಗೆಗಳಿಗೆ ಅಮೆರಿಕವೇ ಕಾರಣ
ಅಮೆರಿಕವು ಸೇನೆ ಹಿಂದಕ್ಕೆ ಕರೆಸಿಕೊಂಡಿದ್ದರಿಂದಲೇ ಹೀಗಾಗಿದೆ
ಅಮೆರಿಕ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪ
ಅಫ್ಘಾನ್ನ ಆಂತರಿಕ ವಿಚಾರದಲ್ಲಿ ಇತರ ದೇಶದ ಹಸ್ತಕ್ಷೇಪ ತಪ್ಪು
ಅಫ್ಘಾನ್ ಬೆಳವಣಿಗೆಯಿಂದ ಪ್ರಾದೇಶಿಕ, ಜಾಗತಿಕ ಭದ್ರತೆಗೆ ಧಕ್ಕೆ
ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಬ್ರಿಕ್ಸ್ ಪಣ
ಅಫ್ಘಾನ್ ಮತ್ತೊಮ್ಮೆ ಭಯೋತ್ಪಾದಕರ ಸ್ವರ್ಗ ಆಗಬಾರದು
ಮಾನವ ಹಕ್ಕು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ರಕ್ಷಣೆ
ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆಯ ನೀಡಿದ ಪ್ರಧಾನಿ ಮೋದಿ
ಅಫ್ಘಾನಿಸ್ತಾನದ ಬೆಳವಣಿಗೆಗೆ ಅಮೆರಿಕ ಕಾರಣ ಎಂದ ರಷ್ಯಾ







