ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರ ನೆರಳಿನಂತೆ ನಡೆದುಕೊಂಡರೆ ಮುಂದೊಂದು ದಿನ ಆ ನೆರಳನ್ನು ರಾಜ್ಯದಿಂದಲೇ ನಾಶ ಮಾಡಬೇಕಾಗುತ್ತದೆ, ಎಂದು ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಸಿದ್ದಾರೆ.
ವಿಜಯಪುರ ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಬದಲಾಗಬೇಕು ಇಲ್ಲವಾದ್ದಲ್ಲಿ ಪಕ್ಷ ಮುಂಬರುವ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳಬಹುದು ಎಂದು ಅವರು ರಾಜ್ಯ ನಾಯಕರಿಗೆ ಎಚ್ಚರಿಸಿದ್ದಾರೆ.
ಮಂತ್ರಿಗಿರಿಗಾಗಿ ನಾನು ದೆಹಲಿಗೆ ಹೋಗಿ ಲಾಬಿ ಮಾಡುವುದಿಲ್ಲ. ರಾಜ್ಯ ಬಿಜೆಪಿ ಹಿರಿಯರಲ್ಲಿ ನಾನೂ ಒಬ್ಬ, ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು ನಾನು, ಕೆಲ ಸಮಯ ಅನಿವಾರ್ಯ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿದ್ದೇ ಅಷ್ಟೇ ಎಂದು ಹೇಳಿದ್ದರು.
ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಿರಲಿಲ್ವಾ ? ಬೊಮ್ಮಾಯಿ ಅವರೇನು ಮೂಲ ಬಿಜೆಪಿನಾ? ಆರ್.ಎಸ್.ಎಸ್ ನಲ್ಲಿ ಧ್ವಜ ಪ್ರಣಾಮ ಮಾಡಿದ್ದಾರ ? ಎಂದು ಅವರು ಪ್ರಶ್ನಿಸಿದ್ದರು.
ಇದೇ ವೇಳೆ ಸ್ವಾಮಿಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಠದಲ್ಲಿ ಕುಳಿತು ಬಿಜೆಪಿ ನಾಶವಾಗುತ್ತದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಅವರ ಕೆಲಸ ಏನಿದ್ದರು ಮಠದಲ್ಲಿ ಕುಳಿತು ಭೋದನೆ ಮಾಡುವುದು , ಲವ್ ಜಿಹಾದ್, ಗೋ ಹತ್ಯೆ ವಿರುದ್ದ ಮಾತನಾಡುವುದು , ಸಮಾನ ನಾಗರೀಕತೆಗಾಗಿ , ಎರಡು ಮಕ್ಕಳಿದ್ದವರಿಗೆ ಸಬ್ಸಿಡಿ ಕೊಡಿಸುವ ಪರವಾಗಿ ಅರಮನೆ ಮೈದಾನದಲ್ಲಿ ಮಠಾಧೀಶರು ಹೋರಾಡಬೇಕಿತ್ತೇ ಹೊರತು ಒಬ್ಬ ವ್ಯಕ್ತಿ ಪರವಾಗಿ ಅಲ್ಲ ಎಂದು ಹೇಳಿದ್ದಾರೆ.
ಯತ್ನಾಳ ಹೇಳಿಕೆಗೆ ಪ್ರತಿಕ್ರಯಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ʼಈಗ ಹಿಂದುತ್ವದ ಬಗ್ಗೆ ಮಾತನಾಡುತ್ತಿರುವ ಬಸನಗೌಡ ಪಾಟೀಲ ಯತ್ನಾಳ್ ಅವರೇ ಜೆಡಿಎಸ್ಗೆ ಹೋಗಿದ್ದಾಗ ನಿಮ್ಮ ಸಿದ್ದಾಂತ ಎಲ್ಲಿ ಹೋಗಿತ್ತುʼ ಎಂದು ಪ್ರಶ್ನಿಸಿದ್ದರು .
ʼಹಿಂದುತ್ವದ ಬಗ್ಗೆ ಯತ್ನಾಳ್ ಮಾತನಾಡುತ್ತಿದ್ದಾರೆ ಈಗ ಅವರಿಗೆ ಜ್ಞಾನೋದಯವಾಗಿರಬೇಕುʼ ಯಡಿಯೂರಪ್ಪನವರು ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಯತ್ನಾಳ್ ಅವರಂತಹ ಪಕ್ಷಾಂತರಿ ಯಡಿಯೂರಪ್ಪನವರು ಅಲ್ಲ ಎಂದು ಹೇಳಿದರು ʼಜೆಡಿಎಸ್ ಗೆ ಹೋದಾಗ ಹಿಂದುತ್ವ ನೆನಪಿರಲಿಲ್ಲವೇ ʼ ಎಂದು ಯತ್ನಾಳ್ ಅವರನ್ನು ಕುಟುಕಿದ್ದಾರೆ.
ಯಡಿಯೂರಪ್ಪನವರ ನಾಯಕತ್ವದಲ್ಲಿ ಹಲವಾರು ಶಾಸಕರು ಗೆದ್ದು ಬಂದಿದ್ದಾರೆ ರಾಷ್ಟೀಯ ನಾಯಕರ ಮಾತಿಗೆ ಬೆಲೆ ಕೊಟ್ಟು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಯಡಿಯೂರಪ್ಪನವರ ಬಗ್ಗೆ ಮಾತನಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ನಿಮ್ಮ ವರ್ಚಸ್ಸು ಹಾಳಾಗುತ್ತದೆ ಎಂದು ಯತ್ನಾಳ್ ವಿರುದ್ದ ರೇಣುಕಾಚಾರ್ಯ ಕಿಡಿಕಾರಿದ್ದಾರೆ.