ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಆರೋಪವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದರು ಈ ಪ್ರತಿಭಟನೆಯಲ್ಲಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತ ಕೂಡ ಬಾಗಿಯಾಗಿದ್ದರು. ಈ ವಿಷಯವನ್ನು ಮಾಧ್ಯಮಗಳು ದತ್ತ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಯನ್ನು ಬಿತ್ತರಿಸಿ ಅನೇಕರನ್ನು ಗೊಂದಲಕ್ಕೆ ದಾರಿ ಮಾಡಿಕೊಟ್ಟಿದ್ದು ಈ ಕುರಿತು ಖುದ್ದು ದತ್ತ ಅವರೇ ನಾನು ಪ್ರತಿಭನೆಯಲ್ಲಿ ಏಕೆ ಭಾಗಿಯಾಗಿದ್ದೆ ಎನ್ನುವುದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಪೆಗಾಸಸ್ ಪ್ರಕರಣದ ಬಗ್ಗೆ ವಿಸ್ತಾರವಾದ ವಿವರಿಸುತ್ತಾ, ಹೋರಾಟದ ಸಾಗರಕೆ ಸಾವಿರಾರು ನದಿಗಳು ಎಂಬಂತೆ, ಮೋದಿ ಸರ್ಕಾರದ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದ್ದಾರೆ.
ಈ ಕುರಿತು ನೆನ್ನೆ ಸಂಜೆ ಪೇಸ್ ಬುಕ್ ಲೈವ್ ಬಂದಿದ್ದ ಅವರು, ವಿಧಾನಸೌದದಲ್ಲಿ ಒಂದು ಘಟನೆ ನಡೆಯಿತು ಅದರ ಬಗ್ಗೆ ಮಾಧ್ಯಮಗಳು ಅವರಿಗೆ ತೋಚಿದಾಗೆ ಸುದ್ದಿ ಮಾಡಿದ್ದಾರೆ. ಈ ಕುರಿತು ಸ್ಪಷ್ಟೀಕರಣ ಕೊಡೊದು ತಪ್ಪೊ ಸರಿಯೊ ಗೊತ್ತಿಲ್ಲ. ಆದರೆ ಹಲವು ವರ್ಷಗಳಿಂದ ನಾನು ಜನತಾದಳ ಪಕ್ಷದ ಒಡನಾಟದಲ್ಲಿ ನನ್ನ ಬಲ್ಲವರು ಮತ್ತು ಹಿರಿಯರಿಗೆ ಇದು ಆಶ್ಚರ್ಯ ಏನು ತಂದಿಲ್ಲ ಯಾಕಂದ್ರೆ ಏನೇ ಆದರು ಇವನು ಇಲ್ಲಿಯೇ ಇರುತ್ತಾನೆ ಎನ್ನುವ ನಂಬಿಕೆ ನಮ್ಮ ಪಕ್ಷದವರಲ್ಲಿದೆ. ಹಾಗಾಗಿ ನಾನು ಪಕ್ಷಾಂತರ ಮಾಡುವ ಯೋಚನೆ ಸಹ ಮಾಡಿಲ್ಲ ನಾನು ನನ್ನ ಪಕ್ಷಕ್ಕೆ ಎಷ್ಟು ನಿಷ್ಠಾವಂತ ಎಂದು ಜನರೇ ಹೇಳುತ್ತಾರೆ ಅದಕ್ಕೆ ನಾನು ತುಂಬಾ ಪ್ರಖ್ಯಾತಿ ಎಂದು ಹೇಳಿದ್ದಾರೆ.
ಇಡೀ ದೇಶದಲ್ಲಿ ಸಂವಿಧಾನಬಾಯಿರವಾಗಿ ಒಂದು ಸರ್ಕಾರ ಕೇಂದ್ರದಲ್ಲಿ ಕೂತಿದೆ. ಮೋದಿ ನೇತೃತ್ವದ ಸರ್ಕಾರ ಇವತ್ತು ಎಲ್ಲಾ ವಿರೋಧ ಪಕ್ಷದ ನಾಯಕನ್ನು ವಸಕಿಯಾಕುವ ಆರ್ಭಟದ ಕೆಲಸ ಮಾಡುತ್ತಿದೆ. ಈ ಹಿಂದೆ ಸ್ಟಾಲಿನ್ ಎಂಬಾತ ವಿರೋಧ ಪಕ್ಷಗಳನ್ನು ಬುಡಸಮೇತ ಕಿತ್ತು ಹಾಕಿದರಿಂದ ಅವನಿಗೆ ಉಕ್ಕಿನ ಪೊರಕೆ ಕೊಟ್ಟಿದನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಹಾಗೇಯೇ ಮೋದಿ ಸಂಪೂರ್ಣ ವಿರೋಧ ಪಕ್ಷವನ್ನ ಮತ್ತು ವಿರೋಧಿಸುವ ನಾಯಕರನ್ನು ಒಂದು ರೀತಿ ಮಣಿಸುವ ಹಾಗೂ ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದೆ. ಇದಕ್ಕೆ ಬಳಕೆ ಮಾಡಿಕೊಳ್ಳುತ್ತಿರೊ ತಂತ್ರ ಸಂವಿಧಾನಬಾಯಿರವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ವಿಧಾನಸೌಧದ ಬಳಿ ಪ್ರತಿಭಟನೆ ಮಾಡಿದ್ರು ಅದರಲ್ಲಿ ನಾನು ಪಾಲ್ಕೊಂಡಿದ್ದೆ, ಸಂವಿಧಾನಬಾಹಿರ ಮೋದಿ ಸರ್ಕಾರ ವಿರುದ್ಧ ಯಾವುದೇ ಪಕ್ಷದವರು, ಪ್ರಗತಿಪರರು ಪ್ರತಿಭಟನೆ ಮಾಡಿದರೆ ನಾನು ಪಾಲ್ಗೊಳ್ಳುತ್ತೇನೆ ಅದರಲ್ಲಿ ಎರಡು ಮಾತೇ ಇಲ್ಲ. ಇದು ನಮ್ಮ ಸಾಮಾಜಿಕ ಜವಾಬ್ದಾರಿ. ಜನವಿರೋಧಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ನಾವೆಲ್ಲರೂ ಒಂದಾಗಲೇಬೇಕು. ಹೋರಾಟದ ಸಾಗರಕೆ ಸಾವಿರಾರು ನದಿಗಳು ಎಂಬಂತೆ ನಾವೆಲ್ಲರೂ ಒಂದಾಗಿ ವಿರೋಧ ವ್ಯಕ್ತಪಡಿಸಬೇಕು. ಆದರೆ ಮಾಧ್ಯಮಗಳು ದತ್ತ ಪಕ್ಷಾಂತರ ಮಾಡಲಿದ್ದಾರೆ ಎಂಬ ಅವರಿಷ್ಟದ್ದ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದೆ ನನ್ನ ಬಲ್ಲವರಿಗೆ ನನ್ನ ಬಗ್ಗೆ ಗೊತ್ತಿದೆ ಅವರಿಗೆ ಸ್ಪಷ್ಟೀಕರಣ ಕೊಡೊದು ಬೇಡ. ಆದರೆ ಮೋದಿ ಸರ್ಕಾರದ ಕೆಟ್ಟ ಆಡಳಿತವನ್ನು ನೋಡಿಯೂ ನಾನು ಹೇಗೆ ತಾನೆ ಸುಮ್ಮನೆ ಕೂರಲಿ ಹಾಗಗಿ ನಾನು ಸಿದ್ದರಾಮಯ್ಯ, ಡಿಕೆಶಿ ಜೊತೆ ಪ್ರತಿಭಟನೆಯನ್ನು ಹೆಜ್ಜೆ ಹಾಕಿದ್ದೇನೆ ಹೊರತು ಪಕ್ಷಾಂತರ ಆಗಲು ಅಲ್ಲ ಎಂದು ತಿಳಿಸಿದ್ದಾರೆ.
ಪೆಗಾಸಸ್ ಕುರಿತು ಪ್ರತಿಕ್ರಿಯಿಸಿದ ದತ್ತ, ಇಸ್ರೇಲ್ ಸಂಭಂದಿಸಿದ ಒಂದು ಸಂಸ್ಥೆ ಆಡಳಿತ ಸರ್ಕಾರಗಳಿಗೆ ವಿರೋಧಿಗಳ ಅಥವಾ ವಿರೋಧ ಪಕ್ಷದವರ ಗೌಪ್ಯ ಖಾಸಗಿ ವಿಷಯಗಳನ್ನು ಕದ್ದು ನೀಡುತ್ತಿದ್ದು ಇದೊಂದು ದೊಡ್ಡ ವಿಷಯವಾಗಿದೆ. ಈಗೆ ಈ ಪೆಗಾಸಸ್ ಸಂಸ್ಥೆಗೆ ಆಡಳಿತ ಪಕ್ಷವನ್ನು ಯಾರೆಲ್ಲ ವಿರೋಧ ಮಾಡ್ತಾರೊ ಅಂತವರ ಹಿಟ್ ಲಿಸ್ಟ್ ರೆಡಿ ಮಾಡಿ ಕಳಿಸಿ ಅವರ ಗೌಪ್ಯ ಮಾಹಿತಿಯನ್ನು ತರಿಸಿಕೊಳ್ಳುತ್ತಿದೆ. ಇದರಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ, ದೇವೇಗೌಡ, ಕುಮಾರಸ್ವಾಮಿ, ಮಮತಾ ಬ್ಯಾನರ್ಜಿ ಇಷ್ಟೇ ಅಲ್ಲದೇ ಸರ್ವೋಚ್ಚ ನ್ಯಾಯಾಲಯದ ಜಡ್ಜ್ಗಳು ಮತ್ತು ನಲವತ್ತು ಪ್ರಮುಖ ಪತ್ರಕರ್ತರು ಹೀಗೆ ಪಟ್ಟಿ ಮಾಡಿ ಅವರ ಗೌಪ್ಯ ಮಾಹಿತಿಯನ್ನು ತರಿಸಿಕೊಂಡಿದ್ದಾರೆ. ಬರೀ ಒಂದು ಪೋನ್ ಟಾಪಿಂಗ್ ಆರೋಪಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅಂತವರು ರಾಜಿನಾಮೆ ಕೊಟ್ಟು ಹೊರನಡೆದರು ಆದರೆ ಮೋದಿಯನ್ನು ಇನ್ನೂ ಮುಂದುವರೆಯಪ್ಪ ಎನ್ನುತ್ತಿದ್ದಾರೆ.
ವಿರೋಧಿಗಳ ಎಲ್ಲಾ ತರಹದ ಮಾಹಿತಿಯನ್ನು ಕದ್ದು ಕೇಳಲು ಖರ್ಚು ಮಾಡಿದ ಹಣ ಎಷ್ಟು ಅಂದ್ರೆ ನನಗೆ ಬಂದ ಮಾಹಿಯ ಪ್ರಕಾರ, 700 ಕೋಟಿ ರುಪಾಯಿ ಅಂತೆ. ಐವತ್ತು ಜನರ ಮಾಹಿತಿಯನ್ನು ಕದ್ದು ಕೇಳುವ ತಂತ್ರಾಂಶಕ್ಕೆ, ಮಾಹಿತಿಯ ಖರೀದಿಗೆ 700 ಕೋಟಿ ರುಪಾಯಿ ಪೆಗಾಸಸ್ ಕಂಪನಿಗೆ ಕೊಡಬೇಕಂತೆ ಎಂದು ಹೇಳಿದ್ದಾರೆ. ಬರೀ 700 ಕೋಟಿಯಷ್ಟು ಮಾತ್ರ ಮಾಹಿತಿ ಸಿಕ್ಕಿದೆ ನಮ್ಮ ರಾಜ್ಯದ ಸಿದ್ದರಾಮಯ್ಯ, ದೇವೇಗೌಡ ಕುಮಾರಸ್ವಾಮಿ ಅಲ್ಲದೇ ಪಶ್ಚಿಮ ಬಂಗಾಳದ ಮಮತ ಬ್ಯಾನರ್ಜಿ, ಕೇಜ್ರಿವಾಲ್ , ನ್ಯಾಯಾಧೀಶರು , ಪತ್ರಕರ್ತರೆಲ್ಲರನ್ನು ಸೇರಿಸಿದರೆ 3000 ಕೋಟಿಯಷ್ಟಾಗುತ್ತದೆ. ಇಷ್ಟು ಕೋಟಿ ಕೊಟ್ಟು ನರೇಂದ್ರ ಮೋದಿಯವರು ಈ ತಂತ್ರಾಂಶವನ್ನು ಖರೀದಿ ಮಾಡುವ ಕೆಲಸ ಮಾಡಿದ್ದಾರಲ್ಲ ಇದೆಲ್ಲ ಯಾರ ಹಣದಲ್ಲಿ ಖರೀದಿ ಮಾಡಿದ್ದಾರೆ? ನಮ್ಮ ಹಣದಿಂದಲೇ, ನಾವು ಕಟ್ಟಿದ ಟ್ಯಾಕ್ಸ್ ಹಣದಿಂದಲೇ ನಮ್ಮ ಮಾಹಿತಿಯನ್ನು ಖರೀದಿಸಿ ಕದ್ದು ಕೇಳುತ್ತಿದ್ದಾರೆ ಎಂದರೆ ಎಂತಹ ಸಂವಿಧಾನಬಾಹಿರವಾದಂತದ್ದು ಎಂದು ಹೇಳಿದ್ದಾರೆ.
ಬೇಹುಗಾರಿಕೆ ಅನ್ನೊದಕ್ಕೆ ನೀತಿ ನಿಯಮ ಇದೆ, ಭಯೋತ್ಪಾದಕತೆ, ಉಗ್ರ ಚಲನವಲನ, ದೇಶದ ರಕ್ಷಣಗೆ ದಕ್ಕೆ ಬರುವಂತ ಚಲನವಲನ, ಬೇರೆ ದೇಶಗಳ ಚಲನವಲನಗಳನ್ನು ಬೇಹುಗಾರಿಕೆ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ನಮ್ಮ ದೇಶದ ನಾಗರೀಕರ ಮೇಲೆ ಬೇಹುಗಾರಿಕೆ ಮಾಡುವುದು ಸರಿಯೇ? ಪೆಗಾಸಸ್ ಸಂಸ್ಥೆಯೇ ಹೇಳುತ್ತಿದ್ದೆ ಅಧಿಕಾರದಲ್ಲಿ ಇರುವ ಆಡಳಿತ ಸರ್ಕಾರಕ್ಕೆ ನಾವು ಸ್ಪೈವೇರ್ ಮಾಡಿರುವ ಗೌಪ್ಯ ಮಾಹಿತಿಯನ್ನು ಮಾರಿದ್ದೇವೆ ಎಂದು. ಆದರೆ ನಾವು ಖರೀದಿ ಮಾಡಿಲ್ಲ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಆಗಾದರೆ ದೇಶದಲ್ಲಿ ಯಾರ ಸರ್ಕಾರ ಇದೆ ಎಂದು ಪ್ರಶ್ನಿಸಿದ್ದಾರೆ.
ಈ ಗಂಭೀರ ವಿಷಯವನ್ನು, ನಾವೆಲ್ಲರೂ ಎಮರ್ಜೆನ್ಸಿ ವಿರುದ್ಧ ಮತ್ತು ಕಾಂಗ್ರೆಸ್ ವಿರುದ್ಧ ಹೇಗೆ ಜೆಪಿ ನೇತೃತ್ವದದಲ್ಲಿ ಒಗ್ಗಟ್ಟಿನಲಿ ಹೋರಾಡಿದೆವೊ ಹಾಗೆಯೇ ನಾವೆಲ್ಲರೂ ಒಟ್ಟಿಗೆ ಸೇರಿ ಮೋದಿ ವಿರುದ್ಧ ಹೋರಾಟ ಮಾಡಬೇಕಿದೆ. ಇದು ತುಂಬಾ ತುರ್ತು ಸಹ ಎಂದು ಹೇಳಿದ್ದಾರೆ.
ನಾನು ಒಪ್ಪಿಕೊಂಡು, ಅಪ್ಪಿಕೊಂಡಿರುವ ಜಾತ್ಯಾತೀತ ಜನತಾದಳದಲ್ಲಿ ನಾನು ಇದ್ದೇನೆ. ಈ ದೇಶದಲ್ಲಿ ಎಲ್ಲಾ ಪಕ್ಷಗಳ ನಾಯಕರಿಗೆ ಹೊಲಿಸಿಕೊಂಡರೆ ನಮ್ಮ ದೇವೇಗೌಡರಷ್ಟು ಜಾತ್ಯಾತೀತ, ಅವರಷ್ಟು ವಿಚಾರವಂತ, ಅವರಷ್ಟು ಪ್ರಕತಿಪರ, ಅವರಷ್ಟು ವಿಚಾರವಂತ ರಾಜಕಾರಣಿ ಬೇರೆಲ್ಲೂ ಇಲ್ಲ. ಹಾಗಾಗಿ ನಾನು ಯಾವಾಗಲು ಅವರ ಜೊತೆ ಪಕ್ಷದ ಜೊತೆ ಇದ್ದೆ ಇರುತ್ತೇನೆ. ನಾನು ಪಕ್ಷಾಂತರ ಮಾಡಲಾರೆ ನನಗೆ ಹೆಮ್ಮೆ ಇದೆ ನಮ್ಮ ನಾಯಕ ಬಗ್ಗೆ ನಮ್ಮ ಪಕ್ಷದ ಬಗ್ಗೆ ಎಂದು ಹೇಳಿದ್ದಾರೆ.