ಸಂಸತ್ತು ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಆರಂಭದ ಮುನ್ನವೇ ವಿರೋಧ ಪಕ್ಷಗಳ ನಾಯಕರ ಮಲ್ಲಿಕಾರ್ಜುನ ಖರ್ಗೆ, ಅಭಿವೃದ್ಧಿಗೆ ತೊಡಕಾಗಿರುವ ಬಿಜೆಪಿಯನ್ನು ಅಧಿವೇಶನದಲ್ಲಿ ನಾವು ಈ ಪೆಗಾಸಸ್ ಸಮಸ್ಯೆಯ ಕುರಿತು ಪ್ರಶ್ನೆ ಎತ್ತುತ್ತೇವೆ ಎಂದು ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಸಭೆಯಲ್ಲಿ ನಾವು ಈ ಪೆಗಾಸಸ್ ಸಮಸ್ಯೆಯನ್ನು ಕುರಿತು ಪ್ರಶ್ನೆ ಎತ್ತುತ್ತೇವೆ. ರಾಷ್ಟ್ರದ ಅಭಿವೃದ್ಧಿಗೆ ಯಾರೂ ಅಡ್ಡಿಯಾಗುತ್ತಿಲ್ಲ, ಬದಲಿಗೆ ಬಿಜೆಪಿ ಅಡ್ಡಿಯಾಗುತ್ತಿದೆ. ಅವರು ಹೆಚ್ಚಿನ ಸೆಸ್ ವಿಧಿಸುವ ಮೂಲಕ, ಇಂಧನ ಬೆಲೆಯನ್ನು ಹೆಚ್ಚಿಸುವ ಮೂಲಕ, ಲಕ್ಷ ಕೋಟಿ ಹಣವನ್ನು ಸಂಪಾದಿಸಿದ್ದಾರೆ. ಆ ಹಣವನ್ನು ಯೋಜನೆಗಳಿಗೆ ವ್ಯರ್ಥ ಮಾಡುತ್ತಿದೆ ಎಂದು ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಮೊದಲು ಚರ್ಚೆ, ನಂತರ ಪ್ರಸ್ತುತಿ. ಪಿಎಂ ಮೋದಿ ಅವರು ಕೋವಿಡ್ ಕುರಿತು ಪ್ರಸ್ತುತಿ ನೀಡಲು ಬಯಸಿದರೆ, ಅದನ್ನು ಅವರು ಕೇಂದ್ರ ಸಭಾಂಗಣದಲ್ಲಿರುವ ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ಪ್ರತ್ಯೇಕವಾಗಿ ನೀಡಬೇಕು. ಸಂಸದರಿಗೆ ತಮ್ಮ ಕ್ಷೇತ್ರಗಳಲ್ಲಿ ಕೋವಿಡ್ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ.
ಏನಿದು ಪೆಗಾಸಿಸ್:
ಇಸ್ರೇಲಿ ಎನ್ ಎಸ್ ಒ ಕಂಪನಿಯ ಪೇಗಾಸಸ್ ಸ್ಪೈವೇರ್ ಬಳಸಿ ದೇಶದ 300 ಕ್ಕೂ ಹೆಚ್ಚು ಮಂದಿ ಪತ್ರಕರ್ತರು, ಹೋರಾಟಗಾರರು, ರಾಜಕಾರಣಿಗಳ ಮೊಬೈಲ್ ಹ್ಯಾಕ್ ಮಾಡಿ ಅವರ ಮೇಲೆ ಕಳ್ಳಗಣ್ಣು ಇಡಲಾಗಿತ್ತು ಎಂಬುದು. ಸ್ವತಃ ನರೇಂದ್ರ ಮೋದಿಯವರ ಸಂಪುಟದ ಇಬ್ಬರು ಸಚಿವರು, ಮೂವರು ಪ್ರತಿಪಕ್ಷ ನಾಯಕರು, ನ್ಯಾಯಾಧೀಶರೊಬ್ಬರು ಹಾಗೂ ಹಲವು ಮಂದಿ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳ ಪತ್ರಕರ್ತರು ಹಾಗೂ ಉದ್ಯಮಿಗಳ ಮೊಬೈಲ್ ಗಳ ಮೇಲೆ ಹದ್ದಿನಕಣ್ಣಿಡಲಾಗಿತ್ತು ಎಂಬ ಸಂಗತಿ ಫ್ರೆಂಚ್ ಮೂಲದ ಫಾರ್ಬಿಡನ್ ಸ್ಟೋರೀಸ್ ಮತ್ತು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸ್ವಯಂಸೇವಾ ಸಂಸ್ಥೆಗಳು ಹಲವು ಜಾಗತಿಕ ಮಾಧ್ಯಮಗಳ ಸಹಯೋಗದಲ್ಲಿ ನಡೆಸಿದ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಪೆಗಾಸಸ್ ಬೇಹುಗಾರಿಕಾ ಸಾಫ್ಟ್ವೇರ್ ಅನ್ನು ಇಸ್ರೇಲಿ ಕಂಪನಿ ಎನ್ಎಸ್ಒ ಅಭಿವೃದ್ಧಿಪಡಿಸಿದೆ. ಸೈಬರ್ ಶಸ್ತ್ರಾಸ್ತ್ರ ತಯಾರಿಸುವಲ್ಲಿ ಈ ಕಂಪನಿ ಪರಿಣಿತಿ ಪಡೆದಿದೆ. ಇದಕ್ಕೆ ದಿ ಪೆಗಾಸಸ್ ಪ್ರಾಜೆಕ್ಟ್ ಎಂದು ಹೆಸರಿಡಲಾಗಿದೆ. 2016ರಲ್ಲಿ ಮೊದಲಿಗೆ ಇದು ಮುಖ್ಯವಾಹಿನಿಗೆ ಬಂದಿತು. ಅರಬ್ ಕಾರ್ಯಕರ್ತರೊಬ್ಬರು ಸಂಶಯಾಸ್ಪದ ಸಂದೇಶವೊಂದನ್ನು ಸ್ವೀಕರಿಸಿದ್ದರು. ಈ ವೇಳೆ ಪೆಗಾಸಸ್ ಐಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ನಂಬಲಾಗಿತ್ತು. ಹಲವು ದಿನಗಳ ಆವಿಷ್ಕಾರದ ನಂತರ ಆಯಪಲ್ ಕಂಪನಿ ತನ್ನ ಐಒಎಸ್ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿತು, ಇದು ಫೋನ್ಗಳನ್ನು ಹ್ಯಾಕ್ ಮಾಡಲು ಪೆಗಾಸಸ್ ಬಳಸುತ್ತಿರುವ ಭದ್ರತಾ ಲೋಪದೋಷವನ್ನು ತೇಪೆ ಹಾಕಿತು. ಆದಾಗ್ಯೂ, ಪೆಗಾಸಸ್ ಐಫೋನ್ ಮಾತ್ರವಲ್ಲ ಆಯಂಡ್ರಯ್ಡ್ ಫೋನ್ಗಳ ಮೇಲೆಯೂ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಒಂದು ವರ್ಷದ ಹಿಂದೆ ಸಂಶೋಧಕರು ಪತ್ತೆ ಹಚ್ಚಿದರು. ಅಷ್ಟರಲ್ಲಾಗಲೇ ಸಾಕಷ್ಟು ಮಾಹಿತಿಗಳಿಗೆ ಕನ್ನಹಾಕಲಾಗಿತ್ತು. ಇದರ ಬೆನ್ನಲ್ಲೇ ಪೆಗಾಸಸ್ ಸೃಷ್ಟಿ ಮಾಡಿದ್ದಕ್ಕೆ ಎನ್ಎಸ್ಒ ಗ್ರೂಪ್ ವಿರುದ್ಧ 2019ರಲ್ಲಿ ಫೇಸ್ಬುಕ್ ದೂರು ನೀಡಿತ್ತು.
ಪೆಗಾಸಸ್ ಬೇಹುಗಾರಿಕಾ ಸಾಫ್ಟ್ವೇರ್ ಅನ್ನು ಇಸ್ರೇಲಿ ಕಂಪನಿ ಎನ್ಎಸ್ಒ ಅಭಿವೃದ್ಧಿಪಡಿಸಿದೆ. ಸೈಬರ್ ಶಸ್ತ್ರಾಸ್ತ್ರ ತಯಾರಿಸುವಲ್ಲಿ ಈ ಕಂಪನಿ ಪರಿಣಿತಿ ಪಡೆದಿದೆ. ಇದಕ್ಕೆ ದಿ ಪೆಗಾಸಸ್ ಪ್ರಾಜೆಕ್ಟ್ ಎಂದು ಹೆಸರಿಡಲಾಗಿದೆ. 2016ರಲ್ಲಿ ಮೊದಲಿಗೆ ಇದು ಮುಖ್ಯವಾಹಿನಿಗೆ ಬಂದಿತು. ಅರಬ್ ಕಾರ್ಯಕರ್ತರೊಬ್ಬರು ಸಂಶಯಾಸ್ಪದ ಸಂದೇಶವೊಂದನ್ನು ಸ್ವೀಕರಿಸಿದ್ದರು. ಈ ವೇಳೆ ಪೆಗಾಸಸ್ ಐಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ನಂಬಲಾಗಿತ್ತು. ಹಲವು ದಿನಗಳ ಆವಿಷ್ಕಾರದ ನಂತರ ಆಯಪಲ್ ಕಂಪನಿ ತನ್ನ ಐಒಎಸ್ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿತು, ಇದು ಫೋನ್ಗಳನ್ನು ಹ್ಯಾಕ್ ಮಾಡಲು ಪೆಗಾಸಸ್ ಬಳಸುತ್ತಿರುವ ಭದ್ರತಾ ಲೋಪದೋಷವನ್ನು ತೇಪೆ ಹಾಕಿತು. ಆದಾಗ್ಯೂ, ಪೆಗಾಸಸ್ ಐಫೋನ್ ಮಾತ್ರವಲ್ಲ ಆಯಂಡ್ರಯ್ಡ್ ಫೋನ್ಗಳ ಮೇಲೆಯೂ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಒಂದು ವರ್ಷದ ಹಿಂದೆ ಸಂಶೋಧಕರು ಪತ್ತೆ ಹಚ್ಚಿದರು. ಅಷ್ಟರಲ್ಲಾಗಲೇ ಸಾಕಷ್ಟು ಮಾಹಿತಿಗಳಿಗೆ ಕನ್ನಹಾಕಲಾಗಿತ್ತು. ಇದರ ಬೆನ್ನಲ್ಲೇ ಪೆಗಾಸಸ್ ಸೃಷ್ಟಿ ಮಾಡಿದ್ದಕ್ಕೆ ಎನ್ಎಸ್ಒ ಗ್ರೂಪ್ ವಿರುದ್ಧ 2019ರಲ್ಲಿ ಫೇಸ್ಬುಕ್ ದೂರು ನೀಡಿತ್ತು. ಕೇವಲ ಮಿಸ್ ಕಾಲ್ ಕೊಡುವ ಮೂಲಕವೂ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಬಹುದಾಗಿದೆ.
ಪೆಗಾಸಸ್ ಒಮ್ಮೆ ಫೋನ್ನಲ್ಲಿ ಇನ್ಸ್ಟಾಲ್ ಆದರೆ, ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಬೇಹುಗಾರಿಕೆ ಮಾಡುತ್ತದೆ. ವಾಟ್ಸ್ಆಯಪ್ನಲ್ಲಿ ಮಾಡಿದ ಸಂಪೂರ್ಣ ಚಾಟ್ಸ್ ಅನ್ನು ಪೆಗಾಸಸ್ ಎನ್ಕ್ರಿಪ್ಟ್ ಮಾಡುತ್ತದೆ. ಮಸೇಜ್ ರೀಡಿಂಗ್, ಕಾಲ್ ಟ್ರ್ಯಾಕಿಂಗ್, ಬಳಕೆದಾರರ ಚಟುವಟಿಕೆ ಮೇಲೆ ನಿಗಾ ಇಡುತ್ತದೆ. ಅಲ್ಲದೆ, ಸ್ಥಳದ ಮಾಹಿತಿಯನ್ನು ಕಲೆಹಾಕುತ್ತದೆ. ಫೋನ್ನಲ್ಲಿರುವ ಕ್ಯಾಮೆರಾ ವಿಡಿಯೋಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಮತ್ತು ಮೈಕ್ರೋಫೋನ್ ಮೂಲಕ ಫೋನ್ನ ಎಲ್ಲ ಚಟುವಟಿಕೆಯನ್ನು ತಿಳಿಸುತ್ತದೆ.
ಕಚ್ಚಾ ತೈಲ ದರ ಇಳಿಕೆಯಾಗದರು ಇಳಿಕೆಯಾಗದ ಪೆಟ್ರೋಲ್ ಮತ್ತು ಡೀಸೆಲ್ ದರ:
ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 76ರಿಂದ 73 ಡಾಲರ್ಗೆ ಶುಕ್ರವಾರ ಇಳಿಕೆಯಾದರು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸ್ವಲ್ಪವೂ ಇಳಿಕೆಯಾಗಿಲ್ಲ. ಈ ನಡುವೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಶನಿವಾರ ಪ್ರತಿ ಲೀಟರ್ಗೆ 105.25 ರೂ.ಗೆ ಏರಿಕೆಯಾಗಿದೆ. ಅಂದರೆ 30 ಪೈಸೆ ಹೆಚ್ಚಳವಾಗಿದೆ. ಡೀಸೆಲ್ ದರ ಲೀಟರ್ಗೆ 95.26 ರೂ.ಗೆ ವೃದ್ಧಿಸಿದೆ. ಮುಂಬಯಿನಲ್ಲಿ 107 ರೂ.ಗೆ ಜಿಗಿದಿದೆ. ಕಳೆದ ಮೇ 1ರಿಂದ ಇಲ್ಲಿಯವರೆಗೆ 41 ಸಲ ತೈಲ ದರ ಹೆಚ್ಚಳವಾಗಿದ್ದು, ತೈಲ ದರ ಹೆಚ್ಚಳದಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಲಕ್ಷ ಕೋಟಿ ಹಣ ಸಂಗ್ರಹ:
ಏಪ್ರಿಲ್-ಜೂನ್ ಅವಧಿಯಲ್ಲಿ ಅಬಕಾರಿ ಸುಂಕದಲ್ಲಿ ಸರ್ಕಾರ 1.01 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ನೇರ ತೆರಿಗೆ ಸಂಗ್ರಹವು 2.41 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಎಂದು ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.











