ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಪಾಕಿಸ್ತಾನ ಮತ್ತು ಭಾರತ ಸೌಹಾರ್ಧತೆಗೆ RSS ಸಿದ್ಧಾಂತ ಅಡ್ಡ ಬರುತ್ತಿದೆ ಎಂದು ದೂಷಿಸಿದ್ದಾರೆ.
“ನಾವು ಪಾಕಿಸ್ತಾನ ಮತ್ತು ಭಾರತ ಸುಸಂಸ್ಕೃತರಾಗಿ ಸಹಬಾಳ್ವೆ ನಡೆಸಲು ಬಹಳ ಸಮಯದಿಂದ ಕಾಯುತ್ತಿದ್ದೇವೆ. ಆದರೆ ಏನು ಮಾಡುವುದು ಆರ್.ಎಸ್.ಎಸ್ನ ಸಿದ್ಧಾಂತ ನಡುವೆ ಬಂದಿದೆ, ”ಎಂದು ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಮಾತುಕತೆಯ ಸಾಧ್ಯತೆಯ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಉತರಿಸಿದ್ದಾರೆ.
ಆಡಳಿತರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾರ್ಗದರ್ಶಕ ಸಂಸ್ಥೆಯಾದ ಆರ್.ಎಸ್.ಎಸ್ನ ಕುರಿತು ಮಾತನಾಡಿದ ಅವರು,”ನಾಜಿಗಳ ದ್ವೇಷವು ಯಹೂದಿಗಳ ಕಡೆಗೆ ನಿರ್ದೇಶಿಸಲ್ಪಟ್ಟರೆ, ಆರ್.ಎಸ್.ಎಸ್ ಅದನ್ನು ಮುಸ್ಲಿಮರ ಕಡೆಗೆ ಮತ್ತು ಸ್ವಲ್ಪ ಮಟ್ಟಿಗೆ ಕ್ರಿಶ್ಚಿಯನ್ನರ ಕಡೆಗೆ ನಿರ್ದೇಶುತ್ತದೆ. ಭಾರತದಲ್ಲಿ ಹಿಂದೂಗಳೆ ಸಾರ್ವಭೌಮರು ಮಿಕ್ಕ ನಾಗರೀಕರು ಸಮಾನರಲ್ಲ ಎಂಬುದು RSS ಸಿದ್ದಾಂತ” ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನದ ಪ್ರಧಾನಿ ವಿಶ್ವಸಂಸ್ಥೆಯ ಜನರಲ್ನಲ್ಲಿ ಹೇಳಿದ್ದರು.
ಫೆಬ್ರವರಿ 25 ರಂದು ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆಯು ನಿಯಂತ್ರಣ ರೇಖೆ (ಎಲ್ಒಸಿ) ದಲ್ಲಿ ಪರಸ್ಪರ ಗುಂಡು ಹಾರಿಸುವುದನ್ನು ನಿಲ್ಲಿಸಲು ಮತ್ತು 2003 ರ ಕದನ ವಿರಾಮ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿತು – ದ್ವಿಪಕ್ಷೀಯ ಸಂವಾದವನ್ನು ಪುನರಾರಂಭಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳಿಗೆ ಉತ್ತೇಜನ ನೀಡಿತು, ಆದರೆ ಅದು 2013 ರಿಂದ ಸ್ಥಗಿತಗೊಂಡಿತ್ತು.
ಮೋದಿ ಪಾಕಿಸ್ತಾನ ಭೇಟಿಯ ನಂತರ ಹೊಸ ಬರವಸೆ ಮೂಡಿತ್ತು!
ಆರ್ ಎಸ್ ಎಸ್ ಕೃಪಾಕಟಾಕ್ಷದಿಂದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹೊಸದರಲ್ಲಿ ಮೋದಿ, ಪಾಕಿಸ್ತಾನದೊಂದಿಗೆ ಮಧುರ ಬಾಂಧವ್ಯ ವೃದ್ಧಿಸಿಕೊಳ್ಳುವ ನಿಲುವು ಹೊಂದಿದ್ದರು, 2015ರ ಡಿಸೆಂಬರ್ನಲ್ಲಿ, ಅಫಘಾನಿಸ್ತಾನಕ್ಕೆ ಭೇಟಿ ನೀಡಿ ಮರಳುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಪಾಕಿಸ್ತಾನದ ಲಾಹೋರ್ನಲ್ಲಿ ವಿಮಾನವನ್ನು ಇಳಿಸಿ ಪಾಕ್ ಪ್ರಧಾನಿ ನವಾಜ್ ಷರೀಫ್ರನ್ನು ಭೇಟಿ ಮಾಡಿ ಅವರ ಜನ್ಮದಿನಕ್ಕೆ ಶುಭ ಹಾರೈಸಿ ಎಲ್ಲರನ್ನೂ ಆಸ್ಚರ್ಯ ಮೂಡಿಸಿದ್ದರು.
ಒಂದು ದೇಶದ ಪ್ರಧಾನಿಯಾದವರು ಇನ್ನೊಂದು ದೇಶಕ್ಕೆ ಹೀಗೆ ದಿಢೀರನೆ ಭೇಟಿ ನೀಡಬಹುದೇ? ಭೇಟಿಗೆ ಮುನ್ನ ಅವರ ಬರುವಿಕೆ ಬಗ್ಗೆ ಅಧಿಕೃತ ಮಾಹಿತಿ ನೀಡಬೇಡವೇ? ರಾಜತಾಂತ್ರಿಕ ಮಟ್ಟದಲ್ಲಿ ಭೇಟಿ ಕಾರ್ಯಕ್ರಮ ನಿಗದಿಯಾಗಬೇಡವೇ? ಹೀಗೆ ಶತ್ರು ರಾಷ್ಟ್ರವೊಂದಕ್ಕೆ ದಿಢೀರನೆ ಭೇಟಿ ನೀಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗದೇ? ಎಂದೆಲ್ಲ ವಿರೋಧ ಪಕ್ಷಗಳು ಹರಿಹಾಯ್ದರು, ಪಾಕಿಸ್ತಾನದೊಂದಿಗೆ ಸ್ನೇಹದ ಹಸ್ತ ಚಾಚಲು ಮೊದಲು ಮುಂದಾಗಿದ್ದು ಭಾರತವೇ ಎಂಬ ಸಂದೇಶ ಈ ಭೇಟಿಯಿಂದ ಇಡೀ ಜಗತ್ತಿಗೆ ರವಾನೆಯಾಗಿತ್ತು. ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದ ಮೋದಿ ಪಾಕಿಸ್ತಾನ ಜೊತೆ ಮಧುರ ಬಾಂಧವ್ಯಕ್ಕೆ ಈ ದಿಢೀರ್ ಭೇಟಿ ಮುನ್ನುಡಿ ಬರೆದಿದೆ ಎಂದು ಭಾರತೀಯರು ತಿಳಿದಿದ್ದರು ಆದರೆ ಈ ಭರವಸೆ ಹೆಚ್ಚು ಕಾಲ ಉಳಿಯಲಿಲ್ಲ. ಸ್ವಾತಂತ್ರ್ಯದ ನಂತರದಲ್ಲಿ ಪಾಕಿಸ್ತಾನ ಮತ್ತು ಜಿನ್ನಾ ಅವರನ್ನು ವಿರೋಧಿಸುತ್ತಲೇ ಬಂದಿರುವ ಆರ್.ಎಸ್.ಎಸ್ಗೆ ಭಾರತ ಪಾಕ್ ಒಂದಾಗುವುದು ಇಷ್ಟ ಇರಲಿಲ್ಲವೇ? ಪಾಕಿಸ್ತಾನವನ್ನು ದ್ವೇಷಿಯ ರಾಷ್ಟ್ರವಾಗಿಯೇ ಇರಿಸಲು ಎತ್ನಿಸಿದೆಯೇ? ಎಂಬ ಪ್ರಶ್ನೆಗಳು ಜನರಲ್ಲಿ ಮೂಡುತ್ತದೆ. ಇದಕ್ಕೆ ಪುಷ್ಠಿಕೊಡುವಂತೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ ಎಲ್.ಕೆ.ಅಡ್ವಾಣಿಯ ವಿಷಯದಲ್ಲಿ ಏನೆಲ್ಲ ಆಯಿತು ಎಂಬುದನ್ನು ಇಲ್ಲಿ ನೋಡಬಹುದು.
ಎಲ್.ಕೆ.ಅಡ್ವಾಣಿಯ ಪಾಕಿಸ್ಥಾನದ ಭೇಟಿಯನ್ನು ವಿರೋದಸಿದ RSS:
ಆರ್.ಎಸ್.ಎಸ್ ಮುಖ್ಯ ನಾಯಕರಲ್ಲಿ ಒಬ್ಬರಾದ ಎಲ್.ಕೆ.ಅಡ್ವಾಣಿ ಜೂನ್ 2005 ರಲ್ಲಿ ಪಾಕಿಸ್ತಾನಕ್ಕೆ ಭಾವನಾತ್ಮಕ ಪ್ರವಾಸಕ್ಕೆ ತೆರಳಿ, ಜಿನ್ನಾ ಅವರನ್ನು ಹೊಗಳಿದ್ದರು, ಅವರನ್ನು ಒಬ್ಬ ಮಹಾನ್ ವ್ಯಕ್ತಿ ಜಾತ್ಯತೀತ ನಾಯಕ ಎಂದು ಕರೆದಿದ್ದರು. ಅಡ್ವಾಣಿ 1927 ರಲ್ಲಿ ಕರಾಚಿಯಲ್ಲಿ ಜನಿಸಿದ್ದರು.
2004ರ ಲೋಕಸಭಾ ಚುನಾವಣೆಯಲ್ಲಿನ ಆಘಾತಕಾರಿ ಸೋಲಿನಿಂದ ತತ್ತರಿಸಿದ ಬಿಜೆಪಿ, ಹಿಂದುತ್ವ ಚಳವಳಿಯನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷರು ಹೊಗಳಿದ್ದರಿಂದ RSS ತೀವ್ರವಾಗಿ ವಿರೋಧೀಸಿತ್ತು.
ಪಕ್ಷವು ಅವರ ಹೇಳಿಕೆಯಿಂದ ದೂರವಿರಲು ಪ್ರಯತ್ನಿಸಿದರು ಅದರ ಸೈದ್ಧಾಂತಿಕ ಮಾರ್ಗದರ್ಶಕ ಸಂಸ್ಥೆ ಆರ್.ಎಸ್.ಎಸ್ ಅಡ್ವಾಣಿಯವರ ಹೇಳಿಕೆಯ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ಹೊರಹಾಕಿತ್ತು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತರ ಒತ್ತಾಯಿಸಿತ್ತು. ಆದರೆ ಎಲ್.ಕೆ.ಅಡ್ವಾಣಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿ ಭಾರತಕ್ಕೆ ಮರಳಿದ ಕೂಡಲೇ ರಾಜೀನಾಮೆ ನೀಡಲು ಮುಂದಾದರು. 2005ರ ಡಿಸೆಂಬರ್ನಲ್ಲಿ ಎಲ್.ಕೆ.ಅಡ್ವಾಣಿ ಅಧ್ಯಕ್ಷ ಸ್ಥಾನದಿಂದ ತೆಗೆದು ರಾಜನಾಥ್ ಸಿಂಗ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು.“ ಆರ್.ಎಸ್.ಎಸ್ ಮತ್ತು ಬಿಜೆಪಿಯನ್ನು ಕಟ್ಟಿ ಬೆಳಸಿದವರಲ್ಲಿ ಒರ್ವರಾದ ಎಲ್.ಕೆ.ಅಡ್ವಾಣಿಯನ್ನೇ ಬಿಡದ ಆರ್.ಎಸ್.ಎಸ್ ಮೋದಿಯವರನ್ನು ಬಿಡುತ್ತಾರೆಯೇ? 2015ರ ಪಾಕಿಸ್ತಾನದ ಭೇಟಿಯ ಬಳಿಕ ಯಾವುದೇ ಸೌಹಾರ್ಧ ಸಭೆ ನಡೆಸದೆ ಇರಲು ಇದು ಕೂಡ ಕಾರಣ ಇರಬಹುದು.”
ಪುಲ್ವಾಮ ದಾಳಿಯ ನಂತರ ಬಿಗಡಾಯಿಸಿದ ಭಾರತ – ಪಾಕ್ ಸಂಬಂದ:
2019ರ ಫೆಬ್ರವರಿ 14 ರಂದು ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಉಗ್ರರು ಆತ್ಮಹತ್ಯಾ ಬಾಂಬರ್ ಮೂಲಕ ದಾಳಿ ಮಾಡಿದ್ದರು. ಈ ಅತ್ಯಂತ ಭೀಕರ ಉಗ್ರದಾಳಿಗೆ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಘಟನೆ ವೇಳೆ ಒಟ್ಟು 70 ಆರ್ಮಿ ಟ್ರಕ್ ಗಳಲ್ಲಿ 2500 ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದರು.
ಈ ಭೀಕರ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತವು ಫೆಬ್ರವರಿ 26 ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಬಾಲಾಕೋಟ್ ಪ್ರದೇಶದಲ್ಲಿದ್ದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಆಗಲೂ ಸಹ ಯುದ್ದದಿಂದ ಪ್ರಾಣಗಳು ಹೋಗುತ್ತವೇ ಹೊರತು ಶಾಂತಿ ಸೌಹಾರ್ಧತೆ ಸೃಷ್ಠಿಯಾಗಲು ಸಾಧಯವಾಗದು ಎಂದಾಗಲು ಅನೇಕರಿಂದ ಪ್ರತಿದಾಳಿಯ ಕೂಗು ಕೇಳಿ ಬಂತಿತ್ತು ನಂತರ ದಾಲಿಗೆ ಪ್ರತಿ ದಾಳಿಯೂ ಮಾಡಿರುವುದಾಗಿ ಸರ್ಕಾರ ಹೇಳಿತ್ತು.
ಭಾರತ ಮತ್ತು ಪಾಕಿಸ್ತಾನ ಒಂದಾಗುವುದರಿಂದ ಭಾರತಕ್ಕೆ ಏನು ಲಾಭ?
ದೇಶದ ಗಡಿ ವಿವಾದ ಬಗೆಯರಿಸಿದರೆ ಭಾರತಕ್ಕೆ ದೊಡ್ಡ ಸಂಪನ್ಮೂಲ ಉಳಿಯುವುದು ಕಚಿತ. ಯುದ್ದ ಸಾಮಾಗ್ರಿಗಳ ಖರೀದಿಯಿಂದ ಅಥವಾ ಸಂಗ್ರಹಿಸಿ ಇಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮ ಸಂಪನ್ಮೂವನ್ನು ದೇಶದ ಬೆಳವಣಿಗೆಗೆ ಉಪಯೋಗಿಸಬೇಕು ಎಂಬ ಮಾಜಿ ಪ್ರಧಾನಿ ನೆಹರು ಅವರ ಮಾತಿನಂತೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ನಮ್ಮ ದೇಶ ಇನ್ನೂ ಅಭಿವೃದ್ಧಿ ಆಗುತ್ತಿರುವ ದೇಶವಾಗಿ ಉಳಿದಿದೆ. ಲಕ್ಷಾಂತರ ರುಪಾಯಿಯ ವಿಮಾನ ಶಸ್ತ್ರಾಸ್ತ್ರ ಸಂಗ್ರಹಿಸುವ ಅಥವಾ ತಯಾರಿಸಲು ನೀಡುವ ಪ್ರಾಮುಖ್ಯತೆಯನ್ನು ದೇಶದ ಅಭಿವೃದ್ಧಿಗೆ ಇರಿಸಿದ್ದರೆ ದೇಶ ಇವತ್ತು ಅಭಿವೃದ್ಧಿವೊಂದ ದೇಶವಾಗಿ ಹೊರಹೊಮ್ಮುತಿತ್ತು. ದೇಶದ ಸಂಪನ್ಮೂಲವನ್ನು ದೇಶದ ಅಭಿವೃದ್ಧಿಗೆ ಬಳಸಬೇಕು ಎಂದರೆ ದೇಶದ ಗಡಿ ವಿವಾದವನ್ನು ಮೊದಲು ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ಬಹುಪಾಲು ಸಂಪನ್ಮೂಲ ಗಡಿ ಯುದ್ದಗಳಿಗೆ ಮತ್ತು ಶಸ್ತ್ರಾಸ್ತ್ರಗಳಿಗೆ ವ್ಯಯಿಸಬೇಕಾಗುತ್ತೆ. ದೇಶದ ಅಭಿವೃದ್ದಿ ಕುಂಠಿತವಾಗಿ ಸಾಗುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಉಭಯ ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳ ಉನ್ನತ ದರ್ಜೆಯವರು ಹಲವಾರು ಸುತ್ತಿನ ಅನೌಪಚಾರಿಕ ಮಾತುಕತೆಗಳನ್ನು ನಡೆಸಿದ್ದರಿಂದ, ಸ್ಥಗಿತಗೊಂಡ ಸಂವಾದವನ್ನು ಪುನರಾರಂಭಿಸಲು ಭಾರತ ಮತ್ತು ಪಾಕಿಸ್ತಾನ ಕೂಡ ಬ್ಯಾಕ್-ಚಾನೆಲ್ ಮಾತುಕತೆ ನಡೆಸಿದ್ದವು.
ಆದಾಗ್ಯೂ, ನವದೆಹಲಿ ಇಸ್ಲಾಮಾಬಾದ್ನೊಂದಿಗಿನ ಬ್ಯಾಕ್-ಚಾನೆಲ್ ಮಾತುಕತೆಗಳ ಕುರಿತ ವರದಿಗಳನ್ನು ಅಧಿಕೃತವಾಗಿ ದೃಢೀಕರಿಸಿಲ್ಲ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರವನ್ನು ತನ್ನ ವಿಶೇಷ ಸ್ಥಾನಮಾನದಿಂದ ತೆಗೆದುಹಾಕಿರುವುದನ್ನು ಮತ್ತೆ ಹಿಂತಿರುಗಿಸಲು ಪಾಕಿಸ್ತಾನವು ಒತ್ತಾಯಿಸಿತ್ತು. ನವದೆಹಲಿ ಖಾನ್ ಸರ್ಕಾರದ ಬೇಡಿಕೆಯನ್ನು ಬಲವಾಗಿ ತಿರಸ್ಕರಿಸಿತು, ಜೆ & ಕೆ ಕುರಿತ ನಿರ್ಧಾರವು ಭಾರತದ ಆಂತರಿಕ ವ್ಯವಹಾರವಾಗಿದೆ ಮತ್ತು ಭಾರತದ ಸಂಸತ್ತು ಅನುಮೋದಿಸಿದೆ ಎಂದು ಒತ್ತಿಹೇಳಿತು.