ಈ ಬಾರಿ ದಯವಿಟ್ಟು ಬರಬೇಡಿ! ನೀವು ಸುರಕ್ಷಿತವಾಗಿರಿ, ನಮ್ಮನ್ನೂ ಸುರಕ್ಷಿತವಾಗಿರಲು ಬಿಡಿ..ಇದು ಉತ್ತರ ಕರ್ನಾಟಕದ ಹಲವು ಗ್ರಾಮ ಮತ್ತು ಶಹರುಗಳ ಜನರು ವಲಸೆ ಹೋದ ಜನರಿಗೆ ವಿನಂತಿ ಮಾಡುಕೊಳ್ಳುವ ಪರಿ. ಹೌದು.. ಮೂರನೇ ಅಲೆ ಮತ್ತು ಡೆಲ್ಟಾ+ ಇದೀಗ ಮಹಾರಾಷ್ಟ್ರದಲ್ಲಿ ಹೆಚ್ಚಾದ ನಂತರ ಗಡಿ ಭಾಗದ ಜಿಲ್ಲೆಗಳ ಜನರು ಈ ರೀತಿ ವಲಸೆ ಹೋದವರಿಗೆ ಫೋನ್ ಮೂಲಕ ಹಾಗೂ ಮೇಸೇಜ್ ಮೂಲಕ ತಿಳಿಸುತ್ತಿದ್ದಾರೆ.
ಇದೀಗ ತಾನೇ ಕರ್ನಾಟಕದ ಜನರು ಎರಡನೇ ಅಲೆಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಮೊನ್ನೆ ಸೋಮವಾರ ಕೊಂಚ ಮಟ್ಟಿಗೆ ಅನ್ ಲಾಕೂ ಆಯಿತು. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಜನರಿಗೆ ಮತ್ತೇ ಡೆಲ್ಟಾ+ ಆತಂಕ ಶುರುವಾಗಿದೆ. ಕೆಲಸ ಅರಸಿ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಹೋಗುವ ಜನರು ಮತ್ತೇ ಬರುತ್ತಾರೆ ಎಂಬ ಭಯ ಬಹುತೇಕ ಗ್ರಾಮಗಳಲ್ಲಿ ಆವರಿಸಿಕೊಳ್ಳುತ್ತಿದೆ. ಹೊಸ ರೂಪಾಂತರಿಗೆ ಕಳೇದ ವಾರ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮೊದಲ ಬಲಿ ಎಂಬ ಸುದ್ದಿ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ಸುದ್ದಿಗಳು ಮೀಡಿಯಾದಲ್ಲಿ ಬಂದ ಕೂಡಲೆ ಗ್ರಾಮ ಪಂಚಾಯತಿ ಸಿಬ್ಬಂದಿ ಮತ್ತೇ ಗ್ರಾಮಗಳನ್ನು ಸೀಲ್ ಮಾಡಬೇಕೆ ಎಂದು ಯೋಚಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಗಡಿ ಭಾಗಗಳಲ್ಲಿರುವ ಜಿಲ್ಲೆಗೆ ವಲಸೆ ಹೋದವರು ಮತ್ತೇ ಬಂದರೆ 3 ನೇ ಅಲೆ ಅಷ್ಟೆ ಅಲ್ಲ, ಡೆಲ್ಟಾ ರೂಪಾಂತರಿ ಹಾವಳಿಯು ಹೆಚ್ಚಾಗುತ್ತದೆ ಎಂಬುದೇ ಈಗ ಚಿಂತೆಗೀಡು ಮಾಡಿದೆ.
ಲಸಿಕೆ ಅಭಿಯಾನ ತೀವ್ರಗೊಳಿಸಿರುವುದು ನಿಜ, ಆದರೆ ಬಹುತೇಕ ಜನರು ಲಸಿಕೆ ಹಾಕಿಸಿಕೊಳ್ಳದೆ, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೆ ಗ್ರಾಮಗಳಿಗೆ ಬಂದು ಎರಡನೇ ಅಲೆ ಪಸರಿಸಿದ್ದರು. ಅದರಿಂದ ಬಹಳಷ್ಟು ಜನರು ಸಾವನ್ನಪ್ಪಿದ್ದು.ಈ ಬಾರಿಯಾದರೂ ಕರ್ನಾಟಕ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆಯೇ ಎಂಬುದನ್ನೆ ಕಾದು ನೋಡುತ್ತಿದ್ದಾರೆ ಗಡಿ ಭಾಗದ ಜನರು.
ಬೀದರ್ ನ ಕೆಲವು ಗ್ರಾಮಸ್ಥರ ಪ್ರಕಾರ, “ಪ್ರತಿ ಬಾರಿಯೂ ವಲಸೆ ಹೋಗಿರುವ ಕಾರ್ಮಿಕರು, ಮಹಾರಾಷ್ಟ್ರದಲ್ಲಿ ಹೆಚ್ಚು ಕೇಸ್ ಬಂದೊಡನೆ ತಮ್ಮ ತಮ್ಮ ಕುಟುಂಬಗಳ ಸಮೇತ ಗ್ರಾಮಗಳಿಗೆ ಮರಳುತ್ತಾರೆ. ಇರಲಿ, ಅದು ಅವರ ಗ್ರಾಮ ಬರಲಿ, ಆದರೆ ಸರಿಯಾಗಿ ಟೆಸ್ಟ್ ಮಾಡಿಸಿಕೊಳ್ಳದೆ ಬಂದಿಳಿದು ಗ್ರಾಮದ ಮನೆಗಳಿಗೆ ಭೇಟಿ ಕೊಟ್ಟು, ಮಕ್ಕಳನ್ನು ಇತರ ಮಕ್ಕಳೊಡನೆ ಆಡಲು ಬಿಟ್ಟು ರೋಗ ಹರಡಿಸಿದರೆ ಹೇಗೆ! ಹೇಳಿದ ಮಾತನ್ನೂ ಕೇಳದೆ ಲಸಿಕೆ ಬಗ್ಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿ ಹಲವರ ಬಲಿಗೆ ಕಾರಣವಾಗಿದ್ದಾರೆ ಕೆಲವರು. ಅಂಥವರು ನಾಲ್ಕು ಜನರು ಒಂದು ಗ್ರಾಮಕ್ಕೆ ಬಂದರೆ ಸಾಕು, ಕರ್ನಾಟಕಕ್ಕೆ ರೋಗ ಹರಡುವುದು ತಪ್ಪಿಸಲಾಗುವುದಿಲ್ಲ. ಸರ್ಕಾರ ಈ ಬಾರಿ ಏನೂ ಕ್ರಮ ಕೈಗೊಳ್ಳದಿದ್ದರೆ ನಾವೇ ಗ್ರಾಮಗಳನ್ನು ಸೀಲ್ ಮಾಡಬೇಕು ಎಂಬ ಯೋಚನೆಯಲ್ಲಿದ್ದೇವೆ”.
3ನೇ ಅಲೆ ತಡೆಯಬಹುದೇ!
ಈ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ. ಕೆಲವು ವಿಜ್ಞಾನಿ ಈಗಾಗಲೇ 3 ನೇ ಅಲೆಯನ್ನು ತಡೆಯಲಾಗುವದಿಲ್ಲ ೆಂದು ಅಭಿಪ್ರಾಯಪಟ್ಟಿದ್ದಾರೆ. ಲಸಿಕಾ ಅಭಿಯಾನ ಹೇಗೆ ಫಾಸ್ಟ್ ಮಾಡಿದರೂ ವರ್ಷಾಂತ್ಯದೊಳಗೆ ಎಷ್ಟು ಜನರಿಗೆ ನೀಡಲು ಆಗಬಹುದು. ಸರ್ಕಾರ ೀ ಬಗ್ಗೆ ಈಗಲೇ ಕಾರ್ಯಪ್ರವೃತ್ತವಾದರೆ ಕೊಂಚ ಮಟ್ಟಿಗೆ ತಡೆಯಬಹುದು ಎಂದು ಕೆಲವು ತಜ್ಞರು ತಿಳಿಸಿದ್ದಾರೆ.