ಪತ್ರಿಕಾ ದಿನಾಚಾರಣೆ ಅಂಗವಾಗಿ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಕರೋನದಂತ ಸಂದರ್ಭದಲ್ಲೂ ಜನ ಮತ್ತು ಸಮಾಜದ ” ಹಿತಕ್ಕಾಗಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಾಹಿಸಿದ ನಿಮ್ಮ ಕಾಳಜಿ ಮತ್ತು ಬದ್ದತೆಗೆ ಬೆಲೆಕಟ್ಟಲು ಸಾಲದು. ಎಲ್ಲಾ ಪತ್ರಕರ್ತ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.
ಪತ್ರಕರ್ತ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.ಕೋವಿಡ್ – 19 ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ ” ಜನ ಮತ್ತು ಸಮಾಜದ ” ಹಿತಕ್ಕಾಗಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಾಹಿಸಿದ ನಿಮ್ಮ ಕಾಳಜಿ ಮತ್ತು ಬದ್ದತೆಗೆ ಬೆಲೆಕಟ್ಟಲು ಸಾಲದು ಎಂದು ಟ್ವೀಟಿಸಿದ್ದಾರೆ.
ಇಂತಹ ಕಷ್ಟಕಾಲದಲ್ಲೂ ವೃತ್ತಿಪರತೆಯನ್ನು ಎತ್ತಿಹಿಡಿದ ಪತ್ರಕರ್ತರಿಗೆ ನನ್ನ ಕೋಟಿ ಕೋಟಿ ನಮನಗಳು.
ಜನರಲ್ಲಿ ತಾವು ಮೂಡಿಸಿದ ಜಾಗೃತಿ, ಅರಿವಿನ ಪರಿಣಾಮ ರಾಜ್ಯದಲ್ಲಿ ಇಂದು ಕೊವಿಡ್ ಸೋಂಕು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು ಕರ್ನಾಟಕ ” ಕೊರೊನಾ ಮುಕ್ತ ” ದತ್ತ ದಾಪುಗಾಲುಟ್ಟಿದೆ ಎಂದಿದ್ದಾರೆ.
ಕೊರೊನಾ ಸಹಜ ಸ್ಥಿತಿಗೆ ಬರುತ್ತಿರುವುದರಲ್ಲಿ ಮಾಧ್ಯಮ ಮತ್ತು ಪತ್ರಕರ್ತರ ಅಸಾಧಾರಣ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ವರ್ತಮಾನದ ದಿನಗಳಲ್ಲಿ ಸತ್ಯಶೋಧಿಸುವ, ಧೈರ್ಯದಿಂದ ಅಭಿವ್ಯಕ್ತಿಸುವ ಮಾಧ್ಯಮದ ಶಕ್ತಿ ಪ್ರಜ್ವಲವಾಗಿ ಬೆಳಗಲಿ.
ನನ್ನ ಸಮಸ್ತ ಪತ್ರಕರ್ತ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.