ಪ್ರಧಾನಿ ಮೋದಿ ಸರ್ಕಾರದ ಕೋವಿಡ್ ನಿರ್ವಹಣೆ ಕುರಿತು ವಯನಾಡ್ ಸಂಸದ ರಾಹುಲ್ ಗಾಂಧಿ ಶ್ವೇತಪತ್ರ ಹೊರಡಿಸಿದ್ದು, ಕರೋನ ಸಮಯದಲ್ಲಿ ಮೋದಿ ಸರ್ಕಾರದ ನಿರ್ವಹಣೆ ಘೋರವಾಗಿತ್ತು ಮತ್ತು ಹಾನಿಕಾರಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ದೆಹಲಿಯಲ್ಲಿ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯ ಕುರಿತು “ಶ್ವೇತಪತ್ರ” ವನ್ನು ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ನಿರ್ವಹಣೆಯನ್ನು ಘೋರವಾದ ಮತ್ತು ಹಾನಿಕಾರ ಎಂದು ಶ್ವೇತ ಪತ್ರದಲ್ಲಿ ಅಭಿಪ್ರಾಯಪಡಲಾಗಿದ್ದು, ಕನಿಷ್ಟ ಪಕ್ಷ ಈಗ ಮೂರನೇ ಅಲೆಗೆ ಸಿದ್ಧತೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ಮೂರನೇ ಕೋವಿಡ್ ಅಲೆ ಎದುರಿಸಲು ಸರ್ಕಾರದ ಸಿದ್ಧತೆಗೆ ಸಹಾಯ ಮಾಡಲು ಅವರು ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು ಜೊತೆಗೆ ಸರ್ಕಾರಕ್ಕೆ ಒಂದಷ್ಟು ಎಚ್ಚರಿಕೆ ನೀಡಿದ್ದಾರೆ.
ಎರಡನೇ ಅಲೆಯಲ್ಲಿ ಮರಣ ಹೊಂದಿದ 90 ಪ್ರತಿಶತದಷ್ಟು ಜನರನ್ನು ಉಳಿಸಬಹುದಿತ್ತು. ಜನರು ಸಾಯಲು ಅತಿದೊಡ್ಡ ಕಾರಣವೆಂದರೆ, ಆಮ್ಲಜನಕದ ಕೊರತೆ. ಪ್ರಧಾನ ಮಂತ್ರಿಯ ಕಣ್ಣೀರು ಕುಟುಂಬಗಳ ಕಣ್ಣೀರನ್ನು ಒರೆಸಲು ಸಾಧ್ಯವಿಲ್ಲ. ಪ್ರಧಾನಿ ಕಣ್ಣೀರು ಜನರನ್ನು ಉಳಿಸಲು ಸಾಧ್ಯವಿಲ್ಲ, ಆಮ್ಲಜನಕವನ್ನು ಸರಬರಾಜು ಮಾಡಬಹುದಾದ ಸಂದರ್ಭದಲ್ಲಿ ಬಂಗಾಳ ಚುನಾವಣೆಯತ್ತ ಗಮನ ಹರಿಸಿದ್ದರು ಹಾಗಾಗಿ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ “ಎಂದು ರಾಹುಲ್ ಗಾಂದಿ ಹೇಳಿದ್ದಾರೆ.
ತೆರಿಗೆ ಗಳಿಕೆಯನ್ನು COVID-19 ನಿಂದಾಗಿ ತನ್ನವರನ್ನು ಕಳೆದುಕೊಂಡ ಕುಟುಂಬಗಳಿಗೆ ಸರಿದೂಗಿಸಲು ಆಗದ ಸರ್ಕಾರದ ಅಸಮರ್ಥತೆಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಕೇಂದ್ರವು “ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಸುತ್ತಲೇ ಇದೆ, ಇದರಿಂದ 4 ಲಕ್ಷ ಕೋಟಿಗಳನ್ನು ಗಳಿಸುತ್ತಿದೆ” ಎಂದು ತಿಳಿಸಿದರು. “ದುಡಿಯುವ ಸದಸ್ಯನನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು” ಎಂದು ಅವರು ಹೇಳಿದರು.

ಸಾಂಕ್ರಾಮಿಕ ಮತ್ತು ಅದರ ನೀತಿಯನ್ನು ಸರ್ಕಾರ ನಿರ್ವಹಿಸುವ ಹಲವಾರು ಅಂಶಗಳನ್ನು ಟೀಕಿಸಿರುವ ರಾಹುಲ್ ಗಾಂಧಿ, ದೇಶದಲ್ಲಿ ಮೊದಲ ಮತ್ತು ಎರಡನೆಯ ಅಲೆಯ ನಿರ್ವಹಣೆ ‘ವಿನಾಶಕಾರಿ’ ಅಥವಾ “ಹಾನಿಕಾರಕ” ಎಂಬುದು ಸ್ಪಷ್ಟವಾಗಿದೆ. ಇದು ಏಕೆ ವಿನಾಶಕಾರಿಯಾಗಿದೆ ಎಂಬುದಕ್ಕೆ ಕೆಲವು ಕಾರಣಗಳಿವೆ, ನಾವು ಆ ಕಾರಣಗಳನ್ನು ನಮ್ಮ ಶ್ವೇತಪತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ. ಇದು ಬರಲಿರುವ ಮೂರನೇ ಅಲೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ನೀಲನಕ್ಷೆಯಾಗಿದೆ ಎಂದು ಹೇಳಿದರು.
ಅಂತೆಯೇ ಕೋವಿಡ್ ನಿರ್ವಹಣೆಯಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಸರ್ಕಾರಕ್ಕೆ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ ರಾಹುಲ್ ಗಾಂಧಿ, ‘ಈ ಶ್ವೇತಪತ್ರದ ಗುರಿ ಸರ್ಕಾರದತ್ತ ಬೆರಳು ತೋರಿಸುವುದಲ್ಲ, ಆದರೆ ರಾಷ್ಟ್ರದ ಮೂರನೇ ಅಲೆಗೆ ಸಿದ್ಧವಾಗಲು ಸಹಾಯ ಮಾಡುವುದು ಎಂದರು.
ಕೋವಿಡ್ ಮೂರನೇ ತರಂಗದಲ್ಲಿ ಈ ದೇಶಕ್ಕೆ ಹಾನಿಕಾರಕವಾಗಲಿದೆ”: ರಾಹುಲ್ ಗಾಂಧಿ
ಕರೋನ ಕುರಿತಾಗಿ ನಾವು ಶ್ವೇತಪತ್ರವನ್ನು ತಯಾರಿಸಿದ್ದೇವೆ. ನ್ಯೂನತೆಗಳನ್ನು ಎತ್ತಿ ತೋರಿಸುತ್ತೇವೆ ಮತ್ತು ಮುಂದೆ ಇದನ್ನು ಸರಿಪಡಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ. ಮೂರನೇ ಅಲೆ ಬರಲಿದೆ ಎಂದು ಇಡೀ ದೇಶಕ್ಕೆ ತಿಳಿದಿದೆ, ಇದಕ್ಕಾಗಿ ಸರ್ಕಾರ ಸಿದ್ಧರಾಗಿರಬೇಕು. “ಇದೆ ನಮ್ಮ ಉದ್ದೇಶ” ಎಂದು ಅವರು ಒತ್ತಿ ಹೇಳಿದರು.
ತಜ್ಞರೊಂದಿಗಿನ ಸಮಾಲೋಚನೆಯಲ್ಲಿ ನಾಲ್ಕು ಪ್ರಮುಖ ಅಂಶವನ್ನು ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಕರೋನ ವಿರುದ್ಧ ಅಕ್ರಮಣಕಾರಿಯಾಗಿ ಎದುರಿಸಬೇಕಾದರೆ “ಕೇಂದ್ರದ ಪಿಲ್ಲರ್ ವ್ಯಾಕ್ಸಿನೇಷನ್ ಆಗಿದ್ದು 100 ಪ್ರತಿಶತ ವ್ಯಾಕ್ಸಿನೇಷನ್ ಹಾಕುವುದು ಬಹಳ ಮುಖ್ಯ” ಎಂದು ಅವರು ಹೇಳಿದರು. ಎರಡನೇ ಪಿಲ್ಲರ್, ಆಮ್ಲಜನಕ (ಆಮ್ಲಜನಕ ಘಟಕಗಳು), ಔಷಧಿಗಳು ಮತ್ತು ವೆಂಟಿಲೇಟರ್‌ಗಳಂತಹ ಉಪಕರಣಗಳು ಸೇರಿದಂತೆ ಸಾಕಷ್ಟು ಸಂಖ್ಯೆಯ ಆಸ್ಪತ್ರೆ ಹಾಸಿಗೆಗಳು ಮತ್ತು ವೈದ್ಯಕೀಯ ಸಂಪನ್ಮೂಲಗಳನ್ನು ಖಚಿತಪಡಿಸುವುದು ಎಂದಿದ್ದಾರೆ.

ಸೋಮವಾರ 86.16 ಲಕ್ಷ ಲಸಿಕೆ ಪ್ರಮಾಣವನ್ನು ನೀಡಿದ ನಂತರ ಸರ್ಕಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ
“ಹೌದು… ಒಳ್ಳೆಯ ಕೆಲಸ ನಿನ್ನೆ ಸಂಭವಿಸಿದೆ, ಆದರೆ ಸರ್ಕಾರವು ಈ ಪ್ರಕ್ರಿಯೆಯನ್ನು ಕೇವಲ ಒಂದು ದಿನ ಮಾತ್ರವಲ್ಲ ಪ್ರತಿದಿನವೂ ಮಾಡಬೇಕಾಗಿದೆ. ನಮ್ಮ ಇಡೀ ಜನಸಂಖ್ಯೆಗೆ ನಾವು ಲಸಿಕೆ ಹಾಕುವವರೆಗೆ” ಮುಂದುವರೆಯಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. “ಬಿಜೆಪಿ ಆಡಳಿತದ ರಾಜ್ಯ ಅಥವಾ ವಿರೋಧ ಪಕ್ಷ ಆಡಳಿತ ರಾಜ್ಯ ಅನ್ನೊ ಪಕ್ಷಪಾತ ಇರಬಾರದು ಈ ಪ್ರಕ್ರಿಯೆ ನಡೆಯಬೇಕು” ಎಂದಿದ್ದಾರೆ.
ರಾಹುಲ್ ಗಾಂಧಿ ಮತ್ತೊಮ್ಮೆ ಬಡ ವರ್ಗಗಳಿಗೆ ನೇರ ನಗದು ವರ್ಗಾವಣೆಯ ಅಗತ್ಯದ ಕುರಿತು ಮಾತಾಡಿದ್ದಾರೆ.
“ಕೋವಿಡ್ ಆರ್ಥಿಕ ಮತ್ತು ಸಾಮಾಜಿಕ ಕಾಯಿಲೆಯೂ ಆಗಿದೆ. ನಾವು” ನ್ಯಾಯ್” ಕಾನ್ಸೆಪ್ಟ್ ಅನ್ನು ನೀಡಿದ್ದೇವೆ. ಪ್ರಧಾನ ಮಂತ್ರಿ ಅವರಿಗೆ ಆ ಹೆಸರು ಇಷ್ಟಪಡದಿದ್ದರೆ ಅವರು ಅದನ್ನು ಬದಲಾಯಿಸಬಹುದು ಆದರೆ ಹಣ ಬಡ ಜನರಿಗೆ ತಲುಪುವ ಗುರಿ ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಎರಡನೇ ಅಲೆಯಲ್ಲಿ ಪ್ರತಿ ದಿನ ಲಕ್ಷಾಂತರ ಜನ ಸೋಂಕಿಗೆ ಒಳಗಾಗುತ್ತಿದ್ದಾರೆ, ಸಾವಿರಾರು ಜನ ಸಾಯುತ್ತಿದ್ದಾರೆ. ಒಂದಷ್ಟು ದಿನ ನಾಲ್ಕು ಲಕ್ಷಕ್ಕೂ ಹೆಚ್ಚು ಸೊಂಕಿನ ವರದಿಯಾದರೆ, ನಾಲ್ಕು ಸಾವಿರಕ್ಕೂ ಹೆಚ್ಚು ಸಾವುಗಳು ವರದಿಯಾಗಿವೇ. ಇನ್ನೂ ಕೆಲವು ರಾಜ್ಯಗಳಲ್ಲಿ ಸಾವಿನ ವರದಿ ತಪ್ಪಾಗಿದೆ ತನಿಖೆ ಮಾಡಬೇಕು ಎನ್ನುತ್ತಿದ್ದಾರೆ.

ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿತುಳುಕುತ್ತಿದ್ದರು, ಸಾವುಗಳು ಹೆಚ್ಚಾಗುತ್ತ ಹೋದವು, ಔಷಧಿಗಳ ಕೊರತೆ ಉಂಟಾಯಿತು.ನಿರ್ದಿಷ್ಟವಾಗಿ ಹೇಳುವುದಾದರೆ, ಜೀವ ಬೆಂಬಲದ ರೋಗಿಗಳಿಗೆ ಆಮ್ಲಜನಕದ ಕೊರತೆ ಉಂಟಾಯಿತು, ಕೇಂದ್ರ ಮತ್ತು ರಾಜ್ಯಗಳು ಜವಾಬ್ದಾರಿಯ ಬಗ್ಗೆ ಜಗಳವಾಡುತ್ತಿವೆ ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಒತ್ತಾಯಿಸಿತು.
ರಾಹುಲ್ ಗಾಂಧಿಯವರು ಶ್ವೇತಪತ್ರವನ್ನು ಬಿಡುಗಡೆ ಮಾಡುವಾಗ ಸಾವಿನ ಪ್ರಮಾಣವನ್ನು ಎತ್ತಿ ತೋರಿಸಿದರು: “ಸರ್ಕಾರವು ಸಾವಿನ ಡೇಟಾವನ್ನು ಮರೆಮಾಡುತ್ತಿದೆ.. ಇದು ಕನಿಷ್ಠ ಐದರಿಂದ ಆರು ಪಟ್ಟು ಹೆಚ್ಚಿದೆ” ಎಂದು ಹೇಳಿದರು.







