ಈ ಬಾರಿಯ ಪಂಚ ರಾಜ್ಯಗಳ ಚುನಾವಣೆಯ ನಂತರ ಅತೀ ಹೆಚ್ಚು ಹಿಂಸೆಯನ್ನು ಕಂಡಂತಹ ರಾಜ್ಯವೆಂದರೆ ಅದು ಪಶ್ಚಿಮ ಬಂಗಾಳ. ಇಲ್ಲಿ ನಡೆದ ರಾಜಕೀಯ ಪ್ರೇರಿತ ಹಿಂಸಾಚಾರದಿಂದ ಮನೆ ಮಠ ಬಿಟ್ಟು ಅಡಗಿ ಕುಳಿತವರು ಸಾವಿರಾರು ಮಂದಿ. ಪ್ರಮುಖವಾಗಿ ಬಿಜೆಪಿಯ ಕಾರ್ಯಕರ್ತರನ್ನು ಗುರಿಯಾಗಿಸಿ ನಡೆಸಿದ ದಾಳಿಗಳಿಂದ ಸುಮಾರು 30,000ಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಮನೆ ಬಿಟ್ಟು ಅಜ್ಞಾತ ವಾಸದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ಬಹುತೇಕರು ತಮ್ಮ ಮನೆಗೆ ಮರಳಿದರೂ, ನೂರಾರು ಮಂದಿ ಇನ್ನೂ ಕೂಡಾ ಕೂಲಿ ಕಾರ್ಮಿಕರ ಸೋಗಿನಲ್ಲಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.

ಈ ಗಲಭೆಯಲ್ಲಿ ಕಮ್ಯುನಿಸ್ಟ್ ಪಕ್ಷ ಹಾಗೂ ಐಎಸ್ಎಫ್’ನ ಕಾರ್ಯಕರ್ತರನ್ನೂ ಗುರಿಯಾಗಿಸಿದ್ದರೂ, ಅತ್ಯಲ್ಪ ಪ್ರಮಾಣದಲ್ಲಿ ಈ ಪಕ್ಷಗಳ ಕಾರ್ಯಕರ್ತರು ದಾಳಿಗೆ ಒಳಗಾಗಿದ್ದಾರೆ. ದಾಳಿಗೆ ಒಳಗಾದವರು ತಮ್ಮ ಮನೆ ತೊರೆಯುವ ಪರಿಸ್ಥಿತಿ ಎದುರಾಗಿಲ್ಲ. ಆದರೆ, ಬಂಗಾಳದಲ್ಲಿ ದೀದಿಯ ಐತಿಹಾಸಿಕ ಜಯ ಬಿಜೆಪಿ ಬೆಂಬಲಿಗರ ಪಾಲಿಗೆ ದುಸ್ವಪ್ನವಾಗಿ ಕಾಡಿದೆ.
ಪಶ್ಚಿಮ ಬಂಗಾಳದ ಲಾಬ್ ಪುರ್’ನ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷರಾಗಿರುವ ಗಿರಿಧಾರಿ ಬಾಗ್ದಿ ಅವರು, ಚುನಾವಣೆಯ ಫಲಿತಾಂಶದ ದಿನದಿಂದ ಇಲ್ಲಿಯವರೆಗೆ ತಮ್ಮ ಮನೆಗೆ ವಾಪಾಸು ತೆರಳಲಿಲ್ಲ. ಅಜ್ಞಾತ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಅವರು ಸದ್ಯಕ್ಕೆ ದುಡಿಯುತ್ತಿದ್ದಾರೆ.
ಇವರನ್ನು ಫೋನ್ ಮೂಲಕ ಸಂಪರ್ಕಿಸಿದ್ದ ‘The Wire’ ಅವರಿಗಾದ ನಷ್ಟದ ಕುರಿತು ಕೇಳಿದಾಗ, ಲಾಬ್ ಪುರ ಕ್ಷೇತ್ರದ ಹಾತಿಯಾದಲ್ಲಿ ತನಗೆ ಒಂದು ಕಂಪ್ಯೂಟರ್ ಅಂಗಡಿ ಇತ್ತು. ತನ್ನ ಮನೆಯ ಪಕ್ಕದಲ್ಲೇ ಇದ್ದಂತಹ ಅಂಗಡಿಯೊಂದಿಗೆ ಮನೆಯನ್ನು ಕುಡಾ ಧ್ವಂಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

“ನನ್ನ ಅಪ್ಪ ಜೂನ್ ಐದರ ವರೆಗೆ ಅತ್ತಿಗೆಯ ಮನೆಯಲ್ಲಿ ವಾಸವಿದ್ದರು. ಈಗ ಹಾತಿಯಾಗೆ ಅವರು ಮರಳಿದ್ದಾರೆ. ಆದರೆ, ನಾನು ಈಗ ಮತ್ತೆ ಊರಿಗೆ ಹೋದರೆ ಟಿಎಂಸಿ ಕಾರ್ಯಕರ್ತರು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ಟಿಎಂಸಿ ಕಾರ್ಯಕರ್ತರು ನನ್ನನ್ನು ಬಿಟ್ಟರು, ಪೊಲೀಸರು ಸುಳ್ಳು ಕೇಸು ದಾಖಲಿಸಿ ನನ್ನನ್ನು ಬಂಧಿಸುವ ಭಯವಿದೆ,” ಎಂದಿದ್ದಾರೆ.
ಹೀಗೆ ರಾಜಕೀಯ ಹಿಂಸಾಚಾರದಿಂದ ತೊಂದರೆಗೆ ಒಳಗಾದ ಸಾವಿರಾರು ತಳಮಟ್ಟದ ಕಾರ್ಯಕರ್ತರಲ್ಲಿ ಬಾಗ್ದಿ ಒಬ್ಬರು. ಈ ರೀತಿಯಾಗಿ ಹಲವಾರು ಇತರ ಕಾರ್ಯಕರ್ತರು ಕೂಡಾ ಅಘೋಷಿತ ಅಜ್ಞಾತವಾಸದಲ್ಲಿ ಬದುಕುವ ಪರಿಸ್ಥಿತಿ ಇಂದು ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಿದೆ. ಬಹುತೇಕರು, ರಾಜ್ಯದ ಬಿಜೆಪಿ ಕಚೇರಿಗಳಲ್ಲಿಯೇ ಉಳಿದುಕೊಂಡಿದ್ದಾರೆ.
ಲಾಬ್ ಪುರ್’ನ ಪಕ್ಕದ ಕ್ಷೇತ್ರವಾದ ನಾನೂರ್’ನಲ್ಲಿ ಕೂಡಾ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. 90ರ ದಶಕದ ಅಂತ್ಯದಲ್ಲಿ ಹನ್ನೊಂದು ಜನ ರೈತರ ಬರ್ಬರ ಕೊಲೆಗೆ ಸಾಕ್ಷಿಯಾಗಿದ್ದ ಈ ಪ್ರದೇಶದಲ್ಲಿ ಮತ್ತೆ ರಾಜಕೀಯ ಹಿಂಸಾಚಾರದ ಗಾಳಿ ಬೀಸಿದೆ.

ಗಲಭೆಯಿಂದ ಮನೆ ಬಿಟ್ಟಿರುವ ಖೋಕನ್ ದಾಸ್ ಎಂಬವರು ಬಿಜೆಪಿಯ ಎಲೆಕ್ಷನ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು.
ಸಿಂಘೀ ಎಂಬ ಗ್ರಾಮದ ನಿವಾಸಿಯಾಗಿರುವ ದಾಸ್ ಫಲಿತಾಂಶದ ಕರಾಳ ದಿನವನ್ನು ನೆನಪಿಸಿಕೊಳ್ಳುವುದು ಹೀಗೆ, “ಸಂಪೂರ್ಣ ಫಲಿತಾಂಶ ಇನ್ನೂ ಘೋಷಣೆಯಾಗಿರಲಿಲ್ಲ. ಆದರೆ, ಟಿಎಂಸಿಯ ಗೆಲುವು ಖಚಿತವಾಗಿತ್ತು. ಅಷ್ಟರಲ್ಲಿ ನನ್ನ ಮನೆಯ ಮೇಲೆ ದಾಳಿಯಾಗಿರುವ ಕುರಿತು ಸುದ್ದಿ ಬಂತು. ನಾನು ಮನೆಗೆ ತೆರಳುವ ಅಪಾಯವನ್ನು ಎಳೆದುಕೊಳ್ಳಲು ತಯಾರಿರಲಿಲ್ಲ. ನನ್ನ ಕುಟುಂಬದವರಿಗೂ ಕರೆ ಮಾಡಿ ಬೇರೆಡೆಗೆ ತೆರಳುವಂತೆ ಹೇಳಿದೆ. ಜೂನ್ ೨ರಂದು ನನ್ನ ಕುಟುಂಬದವರು ಮನೆಗೆ ಮರಳಿದರು. ಆದರೆ, ನಾನು ಈಗ ಹೋಗಲು ಸಾಧ್ಯವಿಲ್ಲ,” ಎಂದಿದ್ದಾರೆ.
ಹಿಂಸಾಚಾರದ ಕೇಂದ್ರ ‘ಹಾತಿಯಾ’:
ಸೂಕ್ಷ್ಮವಾಗಿ ಗಮನಿಸಿದರೆ, ಈ ರಾಜಕೀಯ ಹಿಂಸಾಚರ ಚುನಾವಣೆಯ ಫಲಿತಾಂಶದ ಬಳಿಕ ನಡೆದಿದ್ದಲ್ಲ. ಚುನಾವಣೆ ನಡೆಯುವ ವೇಳೆಗೆ ಅಂದರೆ ಮಾರ್ಚ್ 18ರಂದು ಟಿಎಂಸಿ ನಾಯಕ ಬಿಸ್ವಜಿತ್ ಸಾಹಾ ಅವರ ಮನೆಯ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿತ್ತು. ನಂತರ ಈ ರೀತಿಯ ದಾಳಿಗಳು ಮುಂದುವರೆದಿದ್ದವು. ಎರಡೂ ಪಕ್ಷಗಳ ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಕಚ್ಚಾ ಬಾಂಬ್ ಶೇಖರಿಸಿಡಲಾಗಿದ್ದ ಹಲವು ಗೋಣಿ ಚೀಲಗಳನ್ನು ವಶಪಡಿಸಿಕೊಂಡಿದ್ದರು.
ಚುನಾವಣೆಯ ಸಮಯದಲ್ಲಿ ನಡೆದ ದಾಳಿಗೆ ಪ್ರತಿಕಾರವಾಗಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ, ಎಂದು ಆರೋಪಿಸಲಾಗಿದೆ. ಈ ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಈಗಲೂ ತಮ್ಮ ಸ್ವಮತ ಮನೆಗಳಿಗೆ ಹಿಂದಿರುಗಲು ಬಿಜೆಪಿ ಕಾರ್ಯಕರ್ತರು ಭಯಪಡುವಂತಾಗಿದೆ.
ಬಾಗ್ದಿ ಅವರು ಹೇಳುವ ಪ್ರಕಾರ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಾತಿಯಾದಿಂದ ಪರಾರಿಯಾಗಿದ್ದಾರೆ. ಅದರಲ್ಲಿ 70-80 ಜನರು ಟಿಎಂಸಿಗೆ ‘ಶರಣಾಗಿ’ ಮತ್ತೆ ಊರಿಗೆ ಮರಳಿದ್ದಾರೆ. 25ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಅವರ ಕುಟುಂಬ ಇನ್ನೂ ಊರಿನಿಂದ ಹೊರಗುಳಿದಿದೆ.
ಯುವ ಮೋರ್ಚಾದ ಇನ್ನೊಬ್ಬ ಮುಖಂಡ ಬಿಕಾಶ್ ಆಚಾರ್ಯ ಅವರು ಸುಮಾರು 500 ಜನ ಕಾರ್ಯಕರ್ತರೊಂದಿಗೆ ಟಿಎಂಸಿ ಪಕ್ಷಕ್ಕೆ ಸೇರುವ ಮೂಲಕ, ತಮ್ಮ ‘ಶರಣಾಗತಿ’ಯನ್ನು ಒಪ್ಪಿಕೊಂಡಿದ್ದಾರೆ. ತನ್ನ ಕೆಲಸವನ್ನು ಬಿಜೆಪಿ ಪರಿಗಣಿಸಿಲ್ಲ ಹಾಗೂ ಬಿಜೆಪಿಯಲ್ಲಿ ಇದ್ದರೆ ಜನರ ಸೇವೆ ಮಾಡಲು ಸಾಧ್ಯವಿಲ್ಲ ಎಂಬ ಎರಡು ಕಾರಣ ನೀಡಿ ಟಿಎಂಸಿ ಧ್ವಜ ಹಿಡಿದ್ದಾರೆ.
ಇದೇ ಪ್ರದೇಶದಲ್ಲಿ ನಡೆದ ಮತ್ತೊಂದು ಕುತೂಹಲಕಾರಿ ಘಟನೆಯೆಂದರೆ, ಬಿಜೆಪಿ ಕಾರ್ಯಕರ್ತರ ಒಂದು ತಂಡವು ಇ-ರಿಕ್ಷಾಗಳನ್ನು ಏರಿಕೊಂಡು ಊರಿನ ಬೀದಿ ಬೀದಿಯಲ್ಲಿ ಸಂಚರಿಸಿ ಟಿಎಂಸಿ ವಿರುದ್ದ ನಾವು ಸುಳ್ಳು ಮಾಹಿತಿ ನೀಡಿದ್ದೆವು ಎಂದು ಪಟ್ಟಣದ ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ನಾವು ಸುಳ್ಳು ಮಾಹಿತಿ ನೀಡಿದ್ದರಿಂದ ಇಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಇನ್ನು ಮುಂದೆ ಇಂತಹ ಕೆಲಸದಲ್ಲಿ ತೊಡಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೂಚ್ ಬಿಹಾರ್’ನಲ್ಲಿ ಮರುಕಳಿಸಿದ ಇತಿಹಾಸ:
ಕಳೆದ ಲೋಕಸಭಾ ಚುನಾವಣೆಯ ವೇಳೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ನಿಶಿತ್ ಪ್ರಮಾಣಿಕ್ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ್ದರು. ಈ ಗೆಲುವಿನ ನಂತರ ಕೂಚ್ ಬಿಹಾರ್’ನ ಸೀತೈ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಗದೀಶ್ ಚಂದ್ರ ವರ್ಮಾ ಅವರ ವಿರುದ್ದ ದೊಡ್ಡ ಮಟ್ಟದ ದಂಗೆ ಎದ್ದಿತ್ತು. ಈ ಗಲಭೆಯ ತೀವ್ರತೆ ಎಷ್ಟಿತ್ತೆಂದರೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಶಾಸಕರಾಗಿದ್ದರೂ, ಜಗದೀಶ್ ಅವರು ಮೂರು ತಿಂಗಳ ಕಾಲ ತಮ್ಮ ಕ್ಷೇತ್ರಕ್ಕೆ ಮರಳುವ ಸಾಹಸಕ್ಕೆ ಕೈಹಾಕಿರಲಿಲ್ಲ.

ಇದು ಕೇವಲ ಸೀತೈ ಕ್ಷೇತ್ರದ ಕತೆಯಾಗಿರಲಿಲ್ಲ, ಸೀತಾಲಕುಚ್ಚಿ, ಮತ್ತು ದಿನ್ಹಾತ ಪ್ರದೇಶದ ಟಿಎಂಸಿ ನಾಯಕರು ತಮ್ಮ ಮನೆ ತೊರೆದಿದ್ದರು. ಟಿಎಂಸಿ ಕಾರ್ಯಕರ್ತರು ತಮ್ಮ ಸ್ವಇಚ್ಚೆಯಿಂದ ಮನೆ ತೊರೆದಿದ್ದಾರೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು.
ಈಗ ಇತಿಹಾಸ ಮತ್ತೆ ಮರುಕಳಿಸಿದೆ. ಆದರೆ, ಈ ಬಾರಿ ಭಯದಿಂದ ಮನೆ ಬಿಟ್ಟು ಓಡಿ ಹೋಗಿರುವವರು, ಬಿಜೆಪಿ ಕಾರ್ಯಕರ್ತರು. ಸೀತೈ, ಸೀತಾಲಕುಚ್ಚಿ, ದಿನ್ಹಾತಾ, ನಟಬಾರಿ ಮತ್ತು ತುಫಾನ್