• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

‘ಮಾಧ್ಯಮ’ ಸ್ವಾತಂತ್ತ್ಯದ ಹಿನ್ನೆಲೆಯಲ್ಲಿ ‘ದೇಶದ್ರೋಹ’ ಕಾನೂನಿನ ಮರು ವ್ಯಾಖ್ಯಾನದತ್ತ ಹೆಜ್ಜೆಯಿಟ್ಟ ಸುಪ್ರೀಂ

ರಾಕೇಶ್‌ ಪೂಂಜಾ by ರಾಕೇಶ್‌ ಪೂಂಜಾ
June 1, 2021
in ಅಭಿಮತ
0
‘ಮಾಧ್ಯಮ’ ಸ್ವಾತಂತ್ತ್ಯದ ಹಿನ್ನೆಲೆಯಲ್ಲಿ ‘ದೇಶದ್ರೋಹ’ ಕಾನೂನಿನ ಮರು ವ್ಯಾಖ್ಯಾನದತ್ತ ಹೆಜ್ಜೆಯಿಟ್ಟ ಸುಪ್ರೀಂ
Share on WhatsAppShare on FacebookShare on Telegram

‘ದೇಶದ್ರೋಹ’ ವನ್ನು ಯಾವುದೇ ಸಾರ್ವಭೌಮ ದೇಶವೂ ಸಹಿಸುವುದಿಲ್ಲ. ಹಾಗಂತ ದೇಶದ್ರೋಹವನ್ನು ಸರಕಾರಗಳು ತಮಗೆ ಬೇಕಾದಂತೆ ಬಳಸಿಕೊಳ್ಳುವುದನ್ನು ನ್ಯಾಯಾಲಯವೂ ಸಹಿಸುವುದಿಲ್ಲ. ಪ್ರತಿ ಬಾರಿಯೂ ಸರಕಾರಗಳು ‘ದೇಶದ್ರೋಹ’ ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು ಯತ್ನಿಸಿದಾಗ ದೇಶದ ನ್ಯಾಯಾಲಯಗಳು ಸಕ್ರಿಯವಾಗಿ ದೇಶದ ನೆಲದ ಕಾನೂನಿನ ಗೌರವವನ್ನು ಮರಳಿಸಿವೆ.

ADVERTISEMENT

ಟಿವಿ 5 ಹಾಗೂ ಎಬಿಎನ್ ನ್ಯೂಸ್ ಚಾನೆಲ್ ಗಳ ರಕ್ಷಣೆಗೆ ಧಾವಿಸಿದ ಸುಪ್ರೀಂ:

ಮಾಧ್ಯಮಗಳ ಹಕ್ಕು ಹಾಗೂ ಪತ್ರಿಕಾ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ದೇಶದ ಸುಪ್ರೀಂಕೋರ್ಟ್ ಸೋಮವಾರವಷ್ಟೇ ದೇಶದ್ರೋಹದ ಕಾನೂನಿನ ವ್ಯಾಖ್ಯಾನವನ್ನು ಮರು ಪರಿಶೀಲಿಸುವುದಾಗಿ ಹೇಳಿದೆ. ತೆಲುಗು ಸುದ್ದಿ ಟಿವಿ ವಾಹಿನಿಗಳಾದ ಟಿವಿ 5 ಹಾಗೂ ಎಬಿಎನ್ ಆಂಧ್ರಜ್ಯೋತಿ ವಿರುದ್ಧ ದಾಖಲಿಸಲಾಗಿರುವ ದೇಶದ್ರೋಹ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮರು ವಿಮರ್ಶೆ ವಿಚಾರವನ್ನು ಪ್ರಸ್ತಾಪಿಸಿದೆ.

ಆಂಧ್ರಪ್ರದೇಶದಲ್ಲಿ ವೈಎಸ್ಸಾರ್ ಕಾಂಗ್ರೆಸ್ ನ ಬಂಡಾಯ ನಾಯಕನೂ ಅಲ್ಲಿನ ಸಂಸದನೂ ಆಗಿರುವ ಕನುಮೂರಿ ರಘುರಾಮ ಕೃಷ್ಣರಾಜು ಅವರ ಭಾಷಣಗಳನ್ನು ಪ್ರಸಾರ ಮಾಡಿದ್ದಾರೆ ಎಂಬ ಕಾರಣಕ್ಕೆ ಎರಡು ತೆಲುಗು ನ್ಯೂಸ್ ಚಾನೆಲ್ ಗಳ ವಿರುದ್ಧ ಅಲ್ಲಿನ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದರು. ಇದರ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಎರಡೂ ಸುದ್ದಿ ವಾಹಿನಿಗಳು ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ದೇಶದ್ರೋಹ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನ್ಯಾ.ಎಲ್.ಎನ್.ರಾವ್ ಹಾಗೂ ನ್ಯಾ.ಎಸ್.ರವೀಂದ್ರ ಭಟ್ ಅವರೂ ಇದ್ದರು. ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ), 505 ಹಾಗೂ 153 ಎ (ವರ್ಗಗಳ ನಡುವಿನ ದ್ವೇಷ ಉತ್ತೇಜನೆ) ಕುರಿತು ಕಾನೂನಿನ ಮರು ವ್ಯಾಖ್ಯಾನ ಅವಶ್ಯಕ. ಮುಖ್ಯವಾಗಿ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾಧ್ಯಮಗಳ ಹಕ್ಕುಗಳ ವಿಚಾರದಲ್ಲಿ ಇದು ಅತ್ಯಗತ್ಯ ಎಂದು ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಎಫ್.ಐ.ಆರ್ ಅನ್ನು ಭಾಷಾಂತರಿಸುವಾಗ ಅದರಲ್ಲಿದ್ದ ಆಡುಭಾಷೆಯ ಕೆಲವು ಪದಗಳ ಬಗ್ಗೆ, ‘ಅವು ಮಾಧ್ಯಮವನ್ನು ಗೊಂದಲಮಯಗೊಳಿಸುವಂತಿದೆ’ ಎಂದು ನ್ಯಾ. ರಾವ್ ಹೇಳಿದರು. ‘ಟಿವಿ ಸುದ್ದಿ ವಾಹಿನಿಗಳು ಒಂದು ವೇಳೆ ಏನಾದರೂ ಹೇಳಿದರೆ ಅದನ್ನು ದೇಶದ್ರೋಹವೆಂದು ಪರಿಗಣಿಲಾಗದು, ಬದಲಿಗೆ ಕೆಲವು ಮಾರ್ಗದರ್ಶಿ ನಿಯಮಾವಳಿಗಳನ್ನು ಸಿದ್ಧಪಡಿಸಿ ಅನ್ವಯಿಸುವುದು ಸೂಕ್ತ’ ಎಂದು ನ್ಯಾ,ಚಂದ್ರಚೂಡ್ ಹೇಳಿದ್ದರು.

ದೇಶದ್ರೋಹ ಕಾನೂನು ಬ್ರಿಟಿಷರ ಕಾಲದ್ದು:

2019ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತಾವು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ್ರೋಹದ ಕಾನೂನು ರದ್ದುಗೊಳಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆಗ ಒಂದಷ್ಟು ದಿನ ಈ ಕಾನೂನಿನ ಪರ, ವಿರೋಧ ಚರ್ಚೆಗಳಾಗಿದ್ದವು.

ಹಾಗೆ ನೋಡಿದರೆ ಭಾರತೀಯ ದಂಡ ಸಂಹಿತೆ(ಐ.ಪಿ.ಸಿ) ಜಾರಿಗೆ ಬಂದಿದ್ದು 1860ರಲ್ಲಿ. ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 1857 ರಲ್ಲಿ ಭಾರತದ ಆಡಳಿತವನ್ನು ತನ್ನ ಸ್ವಾಧೀನಪಡಿಸಿಕೊಂಡ ನಂತರ, ಮರುವರ್ಷ ಅಂದರೆ 1858 ರಲ್ಲಿ ಬ್ರಿಟಿಷ್ ಕೋರ್ಟ್ ಗಳ ಸ್ಥಾಪನೆ ಮಾಡಿತ್ತು. ಅದಾಗಿ ಎರಡು ವರ್ಷಗಳಲ್ಲಿ ಭಾರತೀಯ ದಂಡ ಸಂಹಿತೆ(ಐ.ಪಿ.ಸಿ) ಜಾರಿಗೆ ತಂದಿತ್ತು. ಬ್ರಿಟಿಷ್ ಸರಕಾರದ ವಿರುದ್ಧ ಧ್ವನಿ ಎತ್ತುವವರ ಹುಟ್ಟಡಗಿಸಲು 15 ಬಗೆಯ ಕಾನೂನುಗಳನ್ನು ಜಾರಿಗೊಳಿಸಲಾಗಿತ್ತು. ಅದರಲ್ಲೂ ಐ.ಪಿ.ಸಿ.ಯ 124 ಎ ಪರಿಚ್ಛೇದದ ಪ್ರಕಾರ, ಸರಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರ ಮೂಡಿಸುವಂತೆ ಮಾಡುವ ಯಾವುದೇ ವ್ಯಕ್ತಿಯ ಬರಹ, ಭಾಷಣ ಅಥವಾ ಯಾವುದೇ ವಿಧಾನಗಳು ರಾಜದ್ರೋಹ ಅಥವಾ ದೇಶದ್ರೋಹ ಎಂದು ಘೋಷಿತವಾದವು. ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲು ಅವಕಾಶ ಕಲ್ಪಿಸಲಾಯಿತು.

ದೇಶದ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಿ ಜೈಲು ಶಿಕ್ಷೆಗೆ ಗುರಿಪಡಿಸುವಲ್ಲಿ 124 ಎ ಅನ್ನು ಬ್ರಿಟಿಷ್ ಸರಕಾರವು ನಾನಾ ವಿಧವಾಗಿ ಬಳಸಿಕೊಂಡಿತ್ತು. ಇದೇ ಕಾನೂನಿನಡಿ ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯ್, ಅರವಿಂದೋ ಘೋಷ್, ಮಹಾತ್ಮಾ ಗಾಂಧಿ, ಆನಿಬೆಸೆಂಟ್ ರಂಥ ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.

ಸ್ವಾತಂತ್ರ್ಯದ ನಂತರವೂ ಯಥಾಸ್ಥಿತಿಯಲ್ಲಿ ಮುಂದುವರಿದ 124 ಎ:

ಆಶ್ಚರ್ಯವೆಂಬಂತೆ, ಸ್ವಾತಂತ್ರ್ಯ ಸಿಕ್ಕಿದರೂ ಈ ಕಾನೂನು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಿತು. ಅನೇಕ ಪ್ರಕರಣಗಳಲ್ಲಿ ಸ್ವತಂತ್ರ ಭಾರತದ ಪ್ರಜೆಗಳು ದೇಶದ್ರೋಹದ ಶಿಕ್ಷೆ ಅನುಭವಿಸಿದ್ದಾರೆ. ಸರಕಾರದ ವಿರುದ್ಧ ಧ್ವನಿ ಎತ್ತುವ ಸಾಹಿತಿ, ಕಲಾವಿದರು, ಜನರಪರ ಹೋರಾಟಗಾರರು, ಚಳವಳಿಗಾರರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸುವ ಪರಿಪಾಠ ಕ್ರಮೇಣ ಅನಧಿಕೃತವಾಗಿ ಅನುಷ್ಠಾನಕ್ಕೆ ಬಂದಿತ್ತು. ಕಾಂಗ್ರೆಸ್, ಬಿಜೆಪಿ, ಜನತಾ ಪಕ್ಷ, ಹೀಗೆ ಹಲವು ಪಕ್ಷಗಳು ಏಕಾಂಗಿಯಾಗಿ ಇಲ್ಲವೇ ಮೈತ್ರಿಕೂಟಗಳ ಮೂಲಕ ಕೇಂದ್ರದಲ್ಲಿ, ಇಲ್ಲವೇ ನಾನಾ ರಾಜ್ಯಗಳಲ್ಲಿ ಅಧಿಕಾರ ಹಿಡಿದಾಗಲೂ ಐ.ಪಿ.ಸಿ.ಯ 124 ಎ ಬಳಸಿ ಹಲವು ವ್ಯಕ್ತಿಗಳ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದವು

1958ರಲ್ಲಿ ರಾಮ್ ನಂದನ್ ವರ್ಸಸ್ ಸ್ಟೇಟ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋ‍‍ರ್ಟ್‍124 ಎ ಪರಿಚ್ಛೇದವನ್ನು ‘ಅಸಂವಿಧಾನಿಕ’ ಎಂದು ಕಂಡುಕೊಂಡಿತ್ತು.

 ‘ಕೇದಾರ್ ನಾಥ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್ 1962’ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳಿದ್ದ ಪೀಠವು, “ಯಾವುದೇ ಭಾಷಣ ಇಲ್ಲವೇ ಇನ್ಯಾವುದೇ ಚಟುವಟಿಕೆಯು ದ್ರೇಶದ್ರೋಹ ಅನ್ನಿಸಿಕೊಳ್ಳಬೇಕಿದ್ದರೆ ಅದು ಒಂದೋ ಹಿಂಸೆಗೆ ಪ್ರಚೋದನೆ ನೀಡುವಂತಿರಬೇಕು ಇಲ್ಲವೇ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡಿಸುವಂತಿರಬೇಕು” ಎಂದು ವ್ಯಾಖ್ಯಾನಿಸಿತ್ತು.

1995ರ ಬಲ್ವಂತ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ಖಾಲಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಿದ್ದನ್ನು ರದ್ದುಗೊಳಿಸಲಾಗಿತ್ತು.

ಅದಾದ ಬಳಿಕ ‘ಇಂದ್ರಾದಾಸ್‍ವರ್ಸಸ್ ಸ್ಟೇಟ್ ಆಫ್ ಅಸ್ಸಾಂ ಅಂಡ್ ಅರುಣಾಚಲ್ ಪ್ರದೇಶ್ 2011’ ಪ್ರಕರಣದಲ್ಲೂ “ಸಾರ್ವಜನಿಕ ಶಾಂತಿಗೆ ಭಂಗ ತರುವ ಕ್ರಿಯೆ ಮಾತ್ರ ದೇಶದ್ರೋಹ” ಎಂದು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿತ್ತು.

ದೇಶದ್ರೋಹ ಪ್ರಕರಣದಲ್ಲಿ ಈ ವಿಜ್ಞಾನಿಯ ಭವಿಷ್ಯವೇ ಕಮರಿತ್ತು:

1994ರಲ್ಲಿ ರಾಕೆಟ್ ಸೈನ್ಸ್ ವಿಜ್ಞಾನಿ, ಇಸ್ರೋದ ಪ್ರತಿಭಾವಂತ ಸಂಶೋಧಕರಾಗಿದ್ದ ಅಪ್ರತಿಮ ದೇಶಭಕ್ತ ನಂಬಿ ನಾರಾಯಣ್, ಇಸ್ರೋದ ಇನ್ನೊಬ್ಬ ವಿಜ್ಞಾನಿ ಡಿ.ಶಶಿಕುಮಾರನ್ ಅವರು ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವಿರುದ್ಧ ಹಾಕಿದ್ದ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಅವರ ವಿರುದ್ಧ ಹೊರಿಸಿದ್ದ ಆರೋಪಗಳು ಸುಳ್ಳು ಎಂದು ಮುಂದೆ ಎರಡು ದಶಕಗಳ ಬಳಿಕ ಸಿಬಿಐ, ನ್ಯಾಯಾಲಯಕ್ಕೆ ವರದಿ ಒಪ್ಪಿಸಿತ್ತು. ಈ ಪ್ರಕರಣದ ಮರು ತನಿಖೆಗೆ ಸರಕಾರ ಯತ್ನಿಸಿದ್ದರೂ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಬೆಳವಣಿಗೆಗಳ ನಡುವೆ ಆ ವಿಜ್ಞಾನಿಗಳ ಭವಿಷ್ಯವೇ ಹಾಳಾಗಿ ಹೋಗಿದ್ದು ದುರಂತ. ಇದೀಗ ಈ ಕಥಾವಸ್ತುವಿನ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಎಂಬ ಸಿನಿಮಾ ಕೂಡ ಬರುತ್ತಿದೆ. 

ಅಷ್ಟಾದರೂ ಮಾವೋವಾದಿಗಳೊಂದಿಗೆ ಸಂಬಂಧವಿರಿಸಿದ್ದ ಆರೋಪದಡಿ ನಾಗರಿಕ ಹಕ್ಕುಗಳ ಪರ ಹೋರಾಟಗಾರ ವಿನಾಯಕ್ ಸೇನ್ (2007), ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಬೆಂಬಲಿಸಿದ ಆರೋಪದಡಿ ಕಾದಂಬರಿಕಾರ್ತಿ ಅರುಂಧತಿ ರಾಯ್ (2012), ರಾಷ್ಟ್ರ ಲಾಂಛನದ ಅವಮಾನದ ಆರೋಪದಡಿ ವ್ಯಂಗ್ಯಚಿತ್ರಕಾರ ಅಸೀಮ್ ಚತುರ್ವೇದಿ, ಪಟೇಲ್ ಸಮುದಾಯದ ಪರ ಮೀಸಲು ಹೋರಾಟ ಮಾಡಿದ್ದ ಗುಜರಾತಿನ ಹಾರ್ದಿಕ ಪಟೇಲ್, ತಮಿಳುನಾಡು ಸಿಎಂ ಜಯಲಲಿತಾ ಅವರನ್ನು ಟೀಕಿಸಿದ್ದ ಜನಪದ ಗಾಯಕ ಕೋವನ್ ವಿರುದ್ಧ ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದ ಚರ್ಚೆಗೆ ಗ್ರಾಸವಾಗಿದ್ದವು.

2016 ರಲ್ಲಿ ದಿಲ್ಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆ.ಎನ್.ಯು.) ವಿದ್ಯಾರ್ಥಿಯಾಗಿದ್ದ ಕನ್ನಯ್ಯ ಕುಮಾರ್ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ, ಭಯೋತ್ಪಾದನೆ ಕಾರಣಕ್ಕೆ ಸುಪ್ರೀಂಕೋರ್ಟ್ ನಿಂದ ಮರಣದಂಡನೆಗೆ ಗುರಿಯಾಗಿದ್ದ ಅಫ್ಜಲ್ ಗುರು ಪರ ಘೋಷಣೆ ಕೂತಿದ್ದಕ್ಕೆ ಹಲವು ಕನ್ನಯ್ಯ ಸಹಿತ ಹಲವು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪರ-ವಿರೋಧ ಚರ್ಚೆಗಳೂ ಆಗಿದ್ದವು.

ಸಿದ್ಧಾರ್ಥ್ ಶಿವ ನಿರ್ದೇಶನದ ನಟಿ ಪಾರ್ವತಿ ಮೆನನ್ ನಟಿಸಿದ ವರ್ತಮಾನಂ ಸಿನಿಮಾದಲ್ಲಿ ದೇಶದ್ರೋಹದ ಅಂಶಗಳಿವೆ ಎಂಬ ವಿವಾದವೂ ಕಳೆದ ವರ್ಷ ಭಾರಿ ಸುದ್ದಿ ಮಾಡಿತ್ತು. ಇದಲ್ಲದೆ ಟೂಲ್ ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ಯುವ ಹೋರಾಟಗಾರ್ತಿ ದಿಶಾ ರವಿ ಅವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಅವರ ಬಂಧನವೂ ಆಗಿತ್ತು.

ಪಾಕ್ ಧ್ವಜ ಹಾರಿಸಿದರೂ ದೇಶದ್ರೋಹ ಏಕೆ ಗೊತ್ತಾ?

ಪಾಕಿಸ್ತಾನ ಧ್ವಜ ಹಾರಿಸಿದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆನ್ನುವುದು ನಿಮಗೆ ಗೊತ್ತು. ಅದಕ್ಕೆ ಕಾರಣ, ಸಾರ್ವಭೌಮ ದೇಶವಾದ ಭಾರತದಲ್ಲಿ ನಿಗದಿಯ ನಿಯಮಾವಳಿಗಳನ್ನು ಹೊರತುಪಡಿಸಿ ಬೇರೆ ದೇಶದ ರಾಷ್ಟ್ರ ಧ್ವಜ ಹಾರಿಸುವುದು ದೇಶದ್ರೋಹವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ. ದೇಶದ ಹೈಕಮಿಷನರ್ ಕಚೇರಿಯಲ್ಲಿ ಆಯಾ ದೇಶದ ಧ್ವಜ ಹಾರಿಸಲು ಅವಕಾಶವಿದೆ. ಬೇರೆ ದೇಶದ ಕ್ರೀಡಾ ಅಭಿಮಾನಿ ನಮ್ಮಲ್ಲಿ ಕ್ರೀಡಾ ಕೂಟ ನಡೆದಾಗ ಆತನ ದೇಶದ ರಾಷ್ಟ್ರ ಧ್ವಜ ಹಾರಿಸಲು ಅವಕಾಶವಿದೆ. ಅಂದರೆ ಪಾಕಿಸ್ತಾನವು ತನ್ನ ಹೈಕಮಿಷನ್ ಕಚೇರಿಯಲ್ಲಿ ಆ ದೇಶದ ರಾಷ್ಟ್ರಧ್ವಜ ಹಾರಿಸಬಹುದು. ಅಲ್ಲಿನ ಕ್ರೀಡಾ ಅಭಿಮಾನಿ ಭಾರತ-ಪಾಕಿಸ್ತಾನದ ಮಧ್ಯೆ ಕ್ರಿಕೆಟ್, ಹಾಕಿ, ಕಾಮನ್ ವೆಲ್ತ್ ಇತ್ಯಾದಿ ಕ್ರೀಡಾ ಕೂಟ ನಡೆದಾಗ ತಮ್ಮ ದೇಶದ ಧ್ವಜ ಹಾರಿಸಬಹುದು. ಉಳಿದಂತೆ ಬೇರೆ ಸಂದರ್ಭಗಳಲ್ಲಿ ಪಾಕಿಸ್ತಾನ ಎಂದಲ್ಲ, ಬೇರೆ ದೇಶಗಳ ಬಾವುಟವನ್ನೂ ಹಾರಿಸಲು ದೇಶದ ಕಾನೂನು ಅವಕಾಶ ನೀಡುವುದಿಲ್ಲ!

ದೇಶದ್ರೋಹ ಪ್ರಕರಣಗಳ ದುರ್ಬಳಕೆಯ ಆತಂಕ:

ಜನಸಾಮಾನ್ಯರು, ಮಾಧ್ಯಮದವರು, ಮತ್ತಿತರರು ಸರಕಾರದ ವಿರುದ್ಧ ಧ್ವನಿಯೆತ್ತಿದರೆ ದೇಶದ್ರೋಹ ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಉದಾಹರಿಸಿರುವ ಎರಡು ಘಟನೆಗಳನ್ನು ಗಮನಿಸಿ :

  1. ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತ, ಸೀತಾಪುರದ ಶಾಸಕ ರಾಕೇಶ್ ರಾಥೋಡ್, ಶಾಸಕರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ. ನಾವು ಮಾಧ್ಯಮಗಳಿಗೆ ಹೆಚ್ಚು ಹೆಚ್ಚು ಹೇಳಿಕೆ ನೀಡಿದರೆ ನಮ್ಮ ವಿರುದ್ಧವೇ ದೇಶದ್ರೋಹ ಪ್ರಕರಣ ದಾಖಲಾಗಬಹುದು ಎಂದು ಹೇಳಿದ್ದ ವಿಡಿಯೋ ಕ್ಲಿಪ್ ಭಾರಿ ವೈರಲ್ ಆಗಿತ್ತು.
  2. ಕೊರೋನಾ ನಿರ್ವಹಣೆಯಲ್ಲಿ ಆಂಧ್ರದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರದ ವಿಫಲವಾಗಿದೆ ಎಂದು ದೂರಿದ್ದ ಸಂಸದ ಕನುಮೂರಿ ರಘುರಾಮ ಕೃಷ್ಣರಾಜು ವಿರುದ್ಧ ಅಲ್ಲಿನ ಸರಕಾರ ದೇಶದ್ರೋಹ ಪ್ರಕರಣ ದಾಖಲಿಸಿದೆ. ಮಾತ್ರವಲ್ಲಿ ಸಂಸದ ಮಾಡಿದ್ದ ಭಾಷಣಗಳನ್ನು ಪ್ರಸಾರ ಮಾಡಿದ್ದಕ್ಕೆ ಎರಡು ನ್ಯೂಸ್ ಚಾನೆಲ್ ಗಳ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಇದೇ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ “ಕೋವಿಡ್ ನಿಂದ ಮೃತರಾದವರ ಶವಗಳನ್ನು ನದಿಗಳಿಗೆ ಎಸೆಯುವ ದೃಶ್ಯಗಳನ್ನು ಪ್ರಸಾರ ಮಾಡಿದ ಸುದ್ದಿ ವಾಹಿನಿಗಳ ವಿರುದ್ಧ ದೇಶದ್ರೋಹ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿಲ್ಲವೇ” ಎಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಚಂದ್ರಚೂಡ್ ವ್ಯಂಗ್ಯವಾಗಿ ಹೇಳಿರುವುದು ದೇಶದ್ರೋಹ ಪ್ರಕರಣದ ದುರ್ಬಳಕೆಯೆಡೆಗೆ ಬೊಟ್ಟು ಮಾಡುತ್ತಿದೆ.

‘ಸರಕಾರವನ್ನು ಟೀಕಿಸುವುದು ದೇಶದ್ರೋಹವಾಗುವುದಿಲ್ಲ. ದೇಶದ್ರೋಹ ಅಂದರೆ ಏನು ಎಂಬುದನ್ನು ವ್ಯಾಖ್ಯಾನಿಸಲು ಜತೆಗೆ ಪತ್ರಿಕಾ ಸ್ವಾತಂತ್ರ್ಯದಡಿ ಯಾವುದೆಲ್ಲ ದೇಶದ್ರೋಹವಾಗುತ್ತದೆ ಎನ್ನುವುದನ್ನು ನಿರ್ಧರಿಸಲು ಇದು ಸೂಕ್ತ ಕಾಲ.’ ಸುಪ್ರೀಂಕೋರ್ಟ್ ಹೇಳಿರುವುದು ಇದೇ ಕಾರಣದಿಂದ. ಈಗ ಎಲ್ಲರ ಕಣ್ಣು ದೇಶದ ಸರ್ವೋಚ್ಚ ನ್ಯಾಯಾಲಯದ ಕಡೆಗೆ ನೆಟ್ಟಿದೆ.

Previous Post

ಬಿಜೆಪಿಯಿಂದ ಟಿಎಂಸಿ ಎಡೆಗೆ: ಪಶ್ಚಿಮ ಬಂಗಾಳದಲ್ಲಿ ‘ಘರ್ ವಾಪ್ಸಿ’ ಪರ್ವ ಆರಂಭ

Next Post

ರಾಜ್ಯ ಸರ್ಕಾರದೊಂದಿಗೆ ಜಿದ್ದಾಜಿದ್ದಿಗೆ ಬಿದ್ದ ಕೇಂದ್ರ ಸರ್ಕಾರ: ಒಕ್ಕೂಟ ವ್ಯವಸ್ಥೆಯ ಅಣಕ!

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ರಾಜ್ಯ ಸರ್ಕಾರದೊಂದಿಗೆ ಜಿದ್ದಾಜಿದ್ದಿಗೆ ಬಿದ್ದ ಕೇಂದ್ರ ಸರ್ಕಾರ: ಒಕ್ಕೂಟ ವ್ಯವಸ್ಥೆಯ ಅಣಕ!

ರಾಜ್ಯ ಸರ್ಕಾರದೊಂದಿಗೆ ಜಿದ್ದಾಜಿದ್ದಿಗೆ ಬಿದ್ದ ಕೇಂದ್ರ ಸರ್ಕಾರ: ಒಕ್ಕೂಟ ವ್ಯವಸ್ಥೆಯ ಅಣಕ!

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada