ಕರೋನಾ ಎರಡನೇ ಅಲೆ ಎಲ್ಲೆಡೆ ಹರಡುತ್ತಿರುವ ಪರಿಣಾಮ ರಾಜ್ಯ ಸರ್ಕಾರ ದಿನನಿತ್ಯ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಇದರ ನಡುವೇ ನಿನ್ನೆಯಷ್ಟೇ ಹೊಸ ಮಾರ್ಗಸೂಚಿ ಬಿಡುಗೆಡೆಯಾಗಿದ್ದು ಅಗತ್ಯ ಸೇವಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಿರುವುದರ ಜೊತೆಗೆ ಹತ್ತಾರು ತಾರತಮ್ಯ ನೀತಿಯನ್ನು ಹೇರಿರುವುದು ಈಗ ಜನಸಾಮಾನ್ಯರಲ್ಲದೆ ರೈತರಿಗೂ ಬಿಸಿ ತಟ್ಟಿದೆ.
ರೈತರ ಸಂಕಷ್ಟದ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಪರಿಣಿತರು 2 ತಿಂಗಳಲ್ಲಿಯೇ ಕೋವಿಡ್ 2ನೇ ಅಲೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹೊತ್ತಿಗೆ ತನ್ನ ಭೀಕರತೆಯನ್ನು ಪ್ರದರ್ಶಿಸಲಿದೆ ಎಂದು ಹೇಳಿದ್ದರು ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರ ಪರಿಣಾಮ ಈಗ ರಾಜ್ಯದ ಜನ ಮತ್ತು ರೈತರು ಎದುರಿಸಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರೈತರು ಬೆಳೆದ ತರಕಾರಿ ಮತ್ತು ಹಣ್ಣುಗಳ ಬೆಲೆ ಶೇ 60ರಷ್ಟು ಕಡಿಮೆಯಾಗಿದೆ. ಬೆಲೆ ಕುಸಿತದಿಂದ ರೈತರು ಆಂತಕಕ್ಕೆ ಒಳಗಾದರೆ. ಕೆಲವರು ಕಟಾವು ಮಾಡದೆ ಅಲ್ಲೆ ಬಿಟ್ಟಿದ್ದಾರೆ. ಸಾವಿರಾರು ರೂಪಾಯಿ ಬಂಡವಾಳ ಹಾಕಿ ನಷ್ಟ ಅನುಭವಿಸುತ್ತಿರುವ ರೈತ ಕಂಗಾಲಾಗಿದ್ದಾನೆ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಒಂದಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದ್ದಾರೆ.
ರಾಜ್ಯ ಸರ್ಕಾರ ಕೇರಳ ಮಾದರಿಯನ್ನು ಅನುಸರಿಸಿ ಹಣ್ಣು ತರಕಾರಿ ಮುಂತಾದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಬೆಲೆ ಕುಸಿತ ಆಗಿರುವ ತರಕಾರಿ ಹಣ್ಣುಗಳನ್ನು ಎಪಿಎಂಸಿಗಳಿಗೆ ನೇರವಾಗಿ ರೈತರಿಂದ ಖರೀದಿಸಬೇಕು. ಖರೀದಿಸಿದ ಹಣವನ್ನು ರೈತರ ಬ್ಯಾಂಕ್ ಅಕೌಂಟ್ಗೆ ನೇರವಾಗಿ ಜಮೇ ಮಾಡಬೇಕು. ಈಗೆ ಖರೀದುಸಿದನ್ನು ನ್ಯಾಯಬೆಲೆ ಅಂಗಡಿಗಳು ಹಾಪ್ಕಾಂಸ್ ಮೂಲಕ ಕನಿಷ್ಠ ಬೆಲೆ ನಿಗದಿ ಮಾಡಿ ಮಾರಾಟ ಮಾಡಬೇಕು. ಸರ್ಕಾರಿ ಸಂಸ್ಥೆಗಳಿಗೆಲ್ಲ ಇಲ್ಲಿಂದಲೇ ಕಡ್ಡಾಯವಾಗಿ ಮಾರಟ ಮಾಡಬೇಕು ಎಂದು ಇನ್ನಿತರೆ ಬೇಡಿಕೆಗಳನ್ನಿಟ್ಟಿದ್ದಾರೆ.
ಕರೋನಾದಿಂದಾಗಿ ರಾಜ್ಯದ ಅನೇಕ ಕಡೆ ಹಾಸಿಗೆ, ಲಸಿಕೆ, ಆಕ್ಸಿಜನ್ ಇತ್ಯಾದಿ ಮೆಡಿಕಲ್ ಸಾಮಾಗ್ರಿಗಳ ಕೊರತೆಯಿದ್ದು ಇದನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡಿ ಸರ್ಕಾರ ನಿಯಂತ್ರಣಕ್ಕೆ ಪಡೆಯಲಿ ಎಂದು ಆಗ್ರಹಿಸಿದ್ದಾರೆ. ಮದುವೇ ಕಾರ್ಯಕ್ರಮಗಳಿಗೆ ನಿಯಂತ್ರಣ ಜಾರಿ ಇರಲಿ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಇನ್ನು ಅನೇಕ ಮಾಹಿತಿ ಇದ್ದು ಅದನ್ನು ಇಲ್ಲಿ ಲಗತ್ತಿಸಲಾಗಿದೆ.