• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಿಎಂ ಮಮತಾ ಮೇಲಿನ ಹಲ್ಲೆ ಕುರಿತಾದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

by
April 10, 2021
in ದೇಶ
0
ಸಿಎಂ ಮಮತಾ ಮೇಲಿನ ಹಲ್ಲೆ ಕುರಿತಾದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
Share on WhatsAppShare on FacebookShare on Telegram
ADVERTISEMENT

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಾರ್ಚ್ 10 ರಂದು ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವಾಗ ‘ಹಲ್ಲೆ ನಡೆಸಲಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಪಾದದ ಮತ್ತು ಭುಜದ ಮೇಲೆ ತೀವ್ರವಾದ ಗಾಯಗಳಾಗಿವೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಅವರು ಗಾಯಗೊಂಡ ಎರಡು ದಿನಗಳ ನಂತರ ಮಾರ್ಚ್ 12, ಶುಕ್ರವಾರ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ತೃಣಮೂಲ ಕಾಂಗ್ರಸ್ ಈ ದಾಳಿಗೆ‌ ಬಿಜೆಪಿಯನ್ನೇ ಹೊಣೆ ಮಾಡಿತ್ತು. ಮತ್ತು ತಮ್ಮ ನಾಯಕಿಯ ಮೇಲೆ ಹಲ್ಲೆ ನಡೆಸಿ ಚುನಾವಣೆಯನ್ನು ಗೆಲ್ಲುವ ಕುತಂತ್ರ ಇದು ಎಂದು ಆರೋಪಿಸಿತ್ತು.ಆದರೆ ಮಮತಾ ಬ್ಯಾನರ್ಜಿ ಮೇಲಿನ ದಾಳಿ ಉದ್ದೇಶ ಪೂರ್ವಕವಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು. “ಸ್ಟಾರ್ ಪ್ರಚಾರಕರಾಗಿದ್ದರೂ ಬ್ಯಾನರ್ಜಿ ಗುಂಡು ನಿರೋಧಕ ಅಥವಾ ಶಸ್ತ್ರಸಜ್ಜಿತ ವಾಹನವನ್ನು ಬಳಸುತ್ತಿರಲಿಲ್ಲ” ಎಂದು ಅದು. ಮಮತಾ ಅವರ ಭದ್ರತೆಯ ಹೊಣೆಯನ್ನು ಹೊತ್ತುಕೊಂಡವರ ಬೇಜವಾಬ್ದಾರಿತನ ಎಂದು ಅಭಿಪ್ರಾಯ ಪಟ್ಟಿತ್ತು.

ಈ ಮಧ್ಯೆ ನೆಟ್ಟಿಗರು ಸಿಎಂ ಮಮತಾ ಬ್ಯಾನರ್ಜಿಯವರ ಎರಡು ಚಿತ್ರಗಳನ್ನು ಹಂಚಿಕೊಂಡು ಅವರು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಎರಡು ಚಿತ್ರಗಳಲ್ಲಿ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಮತ್ತು ಇನ್ನೊಂದು ಆಸ್ಪತ್ರೆಯಿಂದ ನಿರ್ಗಮಿಸುವುದು.

ಆಸ್ಪತ್ರೆಯಲ್ಲಿದ್ದಾಗಿನ ಸಿಎಂ ಅವರ ಚಿತ್ರವು ಎಡಗಾಲಿನಲ್ಲಿ ಬ್ಯಾಂಡೇಜ್ ಇರುವುದನ್ನು ತೋರಿಸಿದರೆ, ಗಾಲಿಕುರ್ಚಿಯಲ್ಲಿ ಕೂತು ಆಸ್ಪತ್ರೆಯಿಂದ ನಿರ್ಗಮಿಸುವ ಮತ್ತೊಂದು ಚಿತ್ರವು ಅವರ ಬಲ ಕಾಲಿನಲ್ಲಿ ಪ್ಲ್ಯಾಸ್ಟರ್ ಇರುವುದನ್ನು ತೋರಿಸುತ್ತಿತ್ತು.

ಈ ಎರಡೂ ಚಿತ್ರಗಳನ್ನು ಬಳಸಿಕೊಂಡು ಮಮತಾ ಅವರು‌ ಮತದಾರರ ಕರುಣೆ ಗಳಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದು ವ್ಯಾಪಕ ಪ್ರಚಾರ ಮಾಡಲಾಯಿತು. ಆದರೆ ಮಮತಾ ಅವರಿಗೆ ನಿಜಕ್ಕೂ ಎಡಗಾಲಿಗೇ ಗಾಯವಾಗಿತ್ತು, ಆಸ್ಪತ್ರೆಯಿಂದ ಹೊರಬರುವ ಚಿತ್ರದಲ್ಲೂ ಎಡಗಾಲಿನಲ್ಲೇ ಪ್ಲ್ಯಾಸ್ಟರ್ ಇತ್ತು. ಆದರೆ ಆ ಚಿತ್ರವನ್ನು ಅಡ್ಡಲಾಗಿ ತಿರುಗಿಸಿ (flipped horizontally) ಬಲಗಾಲಿನಲ್ಲಿ ಪ್ಲ್ಯಾಸ್ಟರ್ ತೋರುವಂತೆ ಮಾಡಿ ಸಾಮಾಜಿಕಜಾಲತಾಣದಾದ್ಯಂತ ಹರಿದು ಬಿಡಲಾಗಿತ್ತು.

ದೇಶಾದ್ಯಂತ ಕುತೂಹಲ ಮತ್ತು ಆತಂಕ ಸೃಷ್ಟಿಸಿದ್ದ ಈ ಪ್ರಕರಣದ ಕುರಿತಾದ ಅರ್ಜಿಯನ್ನು ಈಗ ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದು ಪ್ರಕರಣವು ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ.

ನಂದಿಗ್ರಾಮ: ನಾಮಪತ್ರ ಸಲ್ಲಿಕೆಯ ನಂತರ ಮಮತಾ ಬ್ಯಾನರ್ಜಿ ಮೇಲೆ ದಾಳಿ
Previous Post

ಕೋವಿಡ್ ಲಸಿಕೆ ರಫ್ತು ಮಾಡಬೇಕಾದ ಭಾರತದ ಅನಿವಾರ್ಯತೆ ಮತ್ತು ಲಸಿಕಾ ರಾಜಕಾರಣ

Next Post

ನೈಟ್ ಕರ್ಫ್ಯೂ ಕರೋನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು -ಸಿದ್ದರಾಮಯ್ಯ

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post
ನೈಟ್ ಕರ್ಫ್ಯೂ ಕರೋನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು -ಸಿದ್ದರಾಮಯ್ಯ

ನೈಟ್ ಕರ್ಫ್ಯೂ ಕರೋನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು -ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!