ಕಲ್ಕತ್ತಾದ ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಕಾರ್ಯಕ್ರಮದ ಕುರಿತು ನರೇಂದ್ರ ಮೋದಿ ಎದುರೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮಮತಾ ಬ್ಯಾನರ್ಜಿ ಭಾಷಣ ಮಾಡಲು ವೇದಿಕೆ ಏರುವಾಗ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಪರ ಘೋಷಣೆ ಕೂಗಿರುವುದು ಮಮತಾ ಬ್ಯಾನರ್ಜಿಯನ್ನು ಕೆರಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ʼನನಗನ್ನಿಸುತ್ತದೆ, ಸರ್ಕಾರದ ಕಾರ್ಯಕ್ರಮಗಳಿಗೆ ತನ್ನದೇ ಆದ ಗೌರವ ಇದೆ. ಇದು ಸರ್ಕಾರದ, ಜನರ ಕಾರ್ಯಕ್ರಮ. ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮವನ್ನು ಕೊಲ್ಕತ್ತಾದಲ್ಲಿ ಆಯೋಜಿಸಿದಕ್ಕೆ ಸಂಸ್ಕೃತಿ ಇಲಾಖೆಗೆ ಹಾಗೂ ಪ್ರಧಾನಮಂತ್ರಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಆದರೆ, ಯಾರನ್ನಾದರೂ ಆಹ್ವಾನಿಸಿ ಈ ರೀತಿ ಅವಮಾನ ಮಾಡುವುದು ನಿಮಗೆ ಶೋಭೆಯನ್ನು ತರುವುದಿಲ್ಲ, ನಾನಿಷ್ಟೇ ಹೇಳಿ ನನ್ನ ಭಾಷಣ ಮುಗಿಸುತ್ತೇನೆ ಎಂದು ವೇದಿಕೆಯಿಂದ ಇಳಿದಿದ್ದಾರೆ.
ಭಾರತಕ್ಕೆ ಒಂದೇ ರಾಜಧಾನಿ ಏಕೆ? ನಾಲ್ಕು ರಾಜಧಾನಿಗಳಿರಲಿ
ಅದಕ್ಕೂ ಮೊದಲು, ನೇತಾಜಿ ನೆನಪಿನ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲೂ ಮಮತಾ ಬ್ಯಾನರ್ಜಿ ಮೋದಿ ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದ್ದರು. ನೇತಾಜಿ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ರಜಾದಿನವಾಗಿ ಯಾಕೆ ಘೋಷಿಸಿಲ್ಲ?. ನಿಮಗೆ ಹೊಸ ಪಾರ್ಲಿಮೆಂಟ್ ಕಟ್ಟಡ ಕಟ್ಟಲುಹಾಗೂ ಹೊಸ ವಿಮಾನ ಕೊಂಡುಕೊಳ್ಳಲು ದುಡ್ಡಿದೆ. ಆದರೆ ನೇತಾಜಿ ಸ್ಮಾರಕ ಏಕೆ ಕಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಭಾರತಕ್ಕೆ ಒಂದೇ ರಾಜಧಾನಿ ಏಕೆ, ನಾಲ್ಕು ರಾಜಧಾನಿಗಳಿರಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಭಾರತಕ್ಕೆ ಆವರ್ತಕ ಆಧಾರದ ಮೇಲೆ ನಾಲ್ಕು ರಾಜಧಾನಿಗಳಿರಬೇಕೆಂದು ನಾನು ನಂಬುತ್ತೇನೆ. ಇಂಗ್ಲೀಷರು ಸಂಪೂರ್ಣ ದೇಶವನ್ನು ಕೊಲ್ಕತ್ತಾದಿಂದಲೇ ಆಳಿದ್ದರು. ಆದರೂ, ನಮ್ಮ ದೇಶದಲ್ಲಿ ಯಾಕೆ ಒಂದೇ ರಾಜಧಾನಿ ಇರಬೇಕೆಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಒಟ್ಟಾರೆ, ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನೇತಾಜಿ ಕಾರ್ಯಕ್ರಮವನ್ನು ಬಳಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಹಾಗಾಗಿಯೇ, ಮಮತಾ ಬ್ಯಾನರ್ಜಿ ಭಾಷಣ ಮುಂದುವರಿಸದೆ ಕೆಳಗಿಳಿದಿದ್ದಾರೆ ಎನ್ನಲಾಗಿದೆ.